ಕನ್ನಡ ಭವನದ ಅಂತರ್‌ರಾಜ್ಯ ‘ಕನ್ನಡ ಪಯಸ್ವಿನಿ ಸೇವಾ ರತ್ನ’ ಪ್ರಶಸ್ತಿಗೆ ನಾಗರಾಜ್ ಟಿ. ಆಯ್ಕೆ

0
8

ಬೆಂಗಳೂರು : ತುಮಕೂರಿನ ಸಮಾಜ ಸೇವಕರಾದ ನಾಗರಾಜ್ ಟಿ. ಅವರು ಕನ್ನಡ ಭವನದಿಂದ ಪ್ರದಾನ ಮಾಡಲಾಗುವ ಪ್ರತಿಷ್ಠಿತ ‘ಅಂತರ್‌ರಾಜ್ಯ ಕನ್ನಡ ಪಯಸ್ವಿನಿ ಸೇವಾ ರತ್ನ ಅಚೀವ್‌ಮೆಂಟ್ ಅವಾರ್ಡ್–2026’ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಜುಲೈ 26ರಂದು ಕನ್ನಡ ಭವನದ ರಜತ ಸಂಭ್ರಮ ಸಮಾರೋಪ ಕಾರ್ಯಕ್ರಮದ ಅಂಗವಾಗಿ ನಡೆಯಲಿರುವ ಕರ್ನಾಟಕ ಗಡಿನಾಡು ಕನ್ನಡ ಸಮ್ಮೇಳನದಲ್ಲಿ ಈ ಪ್ರಶಸ್ತಿಯನ್ನು ನಾಗರಾಜ್ ಟಿ. ಅವರಿಗೆ ಪ್ರದಾನ ಮಾಡಲಾಗುವುದು.

ಈ ವಿಷಯವನ್ನು ಸಮ್ಮೇಳನ ಸಮಿತಿ ಅಧ್ಯಕ್ಷ ಡಾ. ಕೆ.ಎನ್. ವೆಂಕಟ್ರಮಣ ಹೊಳ್ಳ ಹಾಗೂ ಕನ್ನಡ ಭವನದ ಸ್ಥಾಪಕ ಅಧ್ಯಕ್ಷ ಡಾ. ಕೆ. ವಾಮನ್ ರಾವ್ ಬೇಕಲ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸಮಾಜ ಸೇವಾ ಕ್ಷೇತ್ರದಲ್ಲಿ ನಾಗರಾಜ್ ಟಿ. ಸಲ್ಲಿಸಿರುವ ಸೇವೆಯನ್ನು ಪರಿಗಣಿಸಿ ಈ ಗೌರವಕ್ಕೆ ಆಯ್ಕೆ ಮಾಡಲಾಗಿದ್ದು, ಅವರ ಸಾಧನೆಗೆ ವಿವಿಧ ವಲಯಗಳಿಂದ ಅಭಿನಂದನೆಗಳು ವ್ಯಕ್ತವಾಗಿವೆ.

LEAVE A REPLY

Please enter your comment!
Please enter your name here