ಬಂಟ್ವಾಳ:ಮಾತೃಭೂಮಿ ಸೇವಾ ಸಂಘ ನಾವೂರು ಬಂಟ್ವಾಳ ಇದರ ವಿವಿಧ ಮಹತ್ವದ ಯೋಜನೆಯಲ್ಲಿ ಒಂದಾದ ಸರಕಾರಿ ಶಾಲೆಯನ್ನು ಉಳಿಸಿ ಬೆಳೆಸುವ ಕಾರ್ಯ ಯೋಜನೆಗಳು ಕೂಡ ಒಂದಾಗಿದ್ದು ಈ ಕಾರ್ಯ ಯೋಜನೆಯಡಿಯಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನಾವೂರಿನ ವಿದ್ಯಾರ್ಥಿಗಳಿಗೆ ಸಂಘದ ಕಳೆದ ವರುಷದ ಕಾರ್ಯಕ್ರಮದ ಉಳಿಕೆಯ ಸಂಪನ್ಮೂಲದಿಂದ ಉಚಿತ ಪುಸ್ತಕ ವಿತರಣೆ ಹಾಗೂ ಪರಿಸರ ಜಾಗೃತಿಯ ಚಿಂತನೆಯಲ್ಲಿ ಗಿಡಗಳನ್ನು ವಿತರಣೆ ಮಾಡಲಾಯಿತು.
ಈ ಸಂಧರ್ಭದಲ್ಲಿ ಸಂಘದ ಅಧ್ಯಕ್ಷರಾದ ಸಂತೋಷ್ ಕೋಟ್ಯಾನ್ ಎಕ್ಕುಡೇಲು ಸಂಘಟಕರಾದ ಹರೀಶ್ ಕೆಲ್ಲೆರ್ ಮಾರ್, ಅಕ್ಷಯ್ ಸೂರ, ಸದಸ್ಯರಾದ ಕಿರಣ್ ,ನಾವೂರು
ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀಮತಿ ಫ್ರಸಿಲ್ಲಾ ಡಿಸೋಜ,ಆಶಾ ಕಾರ್ಯಕರ್ತೆ ಶ್ರೀಮತಿ ಹರಿಣಾಕ್ಷಿ ಸಹಶಿಕ್ಷಕರಾದ ಶ್ರೀಮತಿ ವಿದ್ಯಾ ಹಾಗೂ ಶ್ರೀಮತಿ ಕಾವ್ಯ ಉಪಸ್ಥಿತಿ ಇದ್ದರು.ಸಂಘದ ಸಂಘಟಕರು ಸದಸ್ಯರು ಸಹಕರಿಸಿದರು.
ನಾವೂರು: ಉಚಿತ ಪುಸ್ತಕ ವಿತರಣೆ ಹಾಗೂ ಪರಿಸರ ಜಾಗೃತಿ
RELATED ARTICLES