ನಾರಾವಿ ವಲಯ ಕಬಡ್ಡಿ ಪಂದ್ಯಾಟ : ಬಡಗಕಾರುಂದೂರು ಶಾಲೆಗೆ ಅವಳಿ ಸಾಧನೆ

0
16

ನಾರಾವಿ : ನಾರಾವಿ, ಅಂಡಿಂಜೆ ಹಾಗೂ ಪೆರೊಡಿತ್ತಾಯಕಟ್ಟೆ ವಲಯದ 14ರ ವಯೋಮಾನದ ಬಾಲಕಿಯರ ಕಬಡ್ಡಿ ಪಂದ್ಯಾಟದಲ್ಲಿ ಬಡಗಕಾರುಂದೂರು ಶಾಲೆಯ ತಂಡ ಉತ್ತಮ ಸಾಧನೆ ಮಾಡಿದೆ. ಶಾಲೆಯ ಬಾಲಕರ ತಂಡ ಪ್ರಥಮ ಸ್ಥಾನ ಹಾಗೂ ಬಾಲಕಿಯರ ತಂಡ ದ್ವಿತೀಯ ಸ್ಥಾನ ಪಡೆದು ಗಮನಾರ್ಹ ಸಾಧನೆ ಮಾಡಿದೆ.

ವಿಜೇತ ವಿದ್ಯಾರ್ಥಿಗಳಿಗೆ ಶಾಲಾ ವತಿಯಿಂದ ಅಭಿನಂದನೆಗಳನ್ನು ಸಲ್ಲಿಸಲಾಯಿತು. ವಿದ್ಯಾರ್ಥಿಗಳಿಗೆ ತರಬೇತಿ ನೀಡಿದ ಶ್ರೀ ಸದಾಶಿವರವರ ಶ್ರಮವನ್ನು ಶ್ಲಾಘಿಸಲಾಯಿತು. ತಂಡದ ಸಾಧನೆಗೆ ಪ್ರೋತ್ಸಾಹ ನೀಡಿದ ಎಲ್ಲ ಹಳೆ ವಿದ್ಯಾರ್ಥಿಗಳು ಹಾಗೂ ಎಸ್‌ಡಿಎಂಸಿ ಸರ್ವಸದಸ್ಯರಿಗೆ ಶಾಲಾ ಪರವಾಗಿ ಕೃತಜ್ಞತೆ ಸಲ್ಲಿಸಲಾಯಿತು.