ವರದಿ ರಾಯಿ ರಾಜ ಕುಮಾರ
ಮೂಡುಬಿದಿರೆಯ ಕೃಷಿಕ ಸಮಾಜ, ಕೃಷಿ ವಿಚಾರ ವಿನಿಮಯ ಕೇಂದ್ರ, ರೈತ ಜನ್ಯ ಫಾರ್ಮರ್ ಕಂಪನಿ, ತೋಟಗಾರಿಕಾ ಇಲಾಖೆ, ಈಶ್ವರಿಯ ವಿಶ್ವವಿದ್ಯಾಲಯಗಳ ಸಂಯುಕ್ತ ಆಶ್ರಯದಲ್ಲಿ ಸಮಾಜ ಮಂದಿರದಲ್ಲಿ ಮಾಜಿ ಪ್ರಧಾನಿ ಚರಣ್ ಸಿಂಗ್ ಸ್ಮರಣಾರ್ಥ ರಾಷ್ಟ್ರೀಯ ರೈತ ದಿನಾಚರಣೆ ಆಚರಿಸಲ್ಪಟ್ಟಿತು. ದಿನಾಚರಣೆಯನ್ನು ದೀಪ ಬೆಳಗಿ ಉದ್ಘಾಟಿಸಿದ ಶಾಸಕ ಉಮಾನಾಥ ಕೋಟ್ಯಾನ್ ಮಾತನಾಡಿ ರೈತರ ಹಲವಾರು ಕಾರ್ಯಕ್ರಮಗಳಿಗೆ ಸಾಕಷ್ಟು ಬೆಂಬಲಗಳನ್ನು ನೀಡಿರುತ್ತೇನೆ. ಅನ್ನ ಮತ್ತು ಅಕ್ಕಿ ದೇವರಿಗೆ ಸಮಾನ. ಅವುಗಳಿಲ್ಲದೆ ಯಾವ ಪ್ರಾಣಿಯೂ ಬದುಕುವುದಕ್ಕೆ ಸಾಧ್ಯವಿಲ್ಲ. ಆದುದರಿಂದ ಸಾಧ್ಯ ಇದ್ದಷ್ಟು ಮಟ್ಟಿಗೆ ರೈತರು ಹೆಚ್ಚು ಹೆಚ್ಚು ಬೆಳೆಗಳನ್ನು ಬೆಳೆದು ಕೃಷಿ ಬದುಕಿನಲ್ಲಿ ಕೃಷಿಯನ್ನು ಅನುಭವಿಸಬೇಕು ಎಂದು ಕೇಳಿಕೊಂಡರು.
ಇದೇ ಸಂದರ್ಭದಲ್ಲಿ ಪ್ರಗತಿಪರ ಕೃಷಿಕ ಜೇಸನ್ ವಿಟಲಿಸ್ ಲೋಬೋ ಶಿರ್ತಾಡಿ ಅವರನ್ನು ಸನ್ಮಾನಿಸಲಾಯಿತು. ಫಲಾನುಭವಿ ರೈತರಿಗೆ ಸವಲತ್ತುಗಳನ್ನು ವಿತರಿಸಲಾಯಿತು. ಬೆಳೆ ವಿಮೆಯ ಬಗ್ಗೆ ಗೋಷ್ಠಿ ನಡೆಯಿತು. ವೇದಿಕೆಯಲ್ಲಿ ವಿವಿಧ ಸಂಸ್ಥೆಗಳ ಅಧ್ಯಕ್ಷರುಗಳಾದ ಕೃಷ್ಣರಾಜ ಹೆಗ್ಡೆ, ಸಂಪತ್ ಸಾಮ್ರಾಜ್ಯ, ಅಭಯ್ ಕುಮಾರ್, ಲಿಯೋ ವಾಲ್ಟರ್, ಕೃಷಿ ಅಧಿಕಾರಿಗಳಾದ ಡಾ. ಕೇದಾರನಾಥ, ಸಜನಾ, ಮಾತಾಜಿ ದೀಪಾ ಹಾಜರಿದ್ದರು, ದೀಪಕ್ ಕೊಳಕೆ ಸ್ವಾಗತಿಸಿದರು, ಸದಾನಂದ ನಾರಾವಿ ಕಾರ್ಯಕ್ರಮ ನಿರ್ವಹಿಸಿದರು, ಸಂದೀಪ್ ಕಾರ್ಯಕ್ರಮ ಸಂಘಟಿಸಿದರು , ವೀಣಾ ರೈ ವಂದಿಸಿದರು.


