ವರದಿ ರಾಯಿ ರಾಜ ಕುಮಾರ
ಶೋರಿನ್ ರಿಯೂ ಕರಾಟೆ ಅಸೋಸಿಯೇಷನ್, ಎಂ.ಕೆ.ಅನಂತ್ರಾಜ್ ಆಫ್ ಫಿಸಿಕಲ್ ಎಜುಕೇಶನ್ ಹಾಗೂ ಸ್ವಾಮಿ ಸ್ಟ್ರೆಂತ್ ಟ್ರೈನಿಂಗ್ ಸೆಂಟರ್ ಆಶ್ರಯದಲ್ಲಿ ಮೂಡುಬಿದಿರೆಯ ಸ್ಕೌಟ್ಸ್ & ಗೈಡ್ಸ್ ಕನ್ನಡ ಭವನದಲ್ಲಿ ನಡೆದ 8ನೇ ರಾಷ್ಟ್ರ ಮಟ್ಟದ ಕರಾಟೆ ಪಂದ್ಯಾಟದಲ್ಲಿ ಬಂಟ್ವಾಳ ದ ಡೈಮಂಡ್ ಇಂಟರ್ನ್ಯಾಷನಲ್ ಸ್ಕೂಲ್ ಚಾಂಪಿಯನ್ ಅಗಿ ಪ್ರಶಸ್ತಿ ಪಡೆದುಕೊಂಡಿದೆ. ರನ್ನರ್ಸ್ ಚಾಂಪಿಯನ್ ಆಗಿ ಬುಡೋಕಾನ್ ಕರಾಟೆ ಅಂಡ್ ಸೆಲ್ಫ್ ಡಿಫೆನ್ಸ್ ಸ್ಕೂಲ್ ಬೆಳ್ಮಣ್ ಪಡೆಯಿತು.
ಪಂದ್ಯಾವಳಿ ಯಲ್ಲಿ ಉತ್ತಮ ಪ್ರದರ್ಶನ ನೀಡಿದ ತಂಡ ಗಳಾಗಿ ಬುರೂಜ್ ಆಂಗ್ಲ ಮಾಧ್ಯಮ ಶಾಲೆ ರಝ ನಗರ , ಅಜುಮ್ ಅಲ್ ಬಿರ್ರ್ ಇಂಟರ್ನ್ಯಾಷನಲ್ ಶಾಲೆ, ಮೂಡಬಿದ್ರಿ, ಸಹಾರ ಆಂಗ್ಲ ಮಾಧ್ಯಮ ಶಾಲೆ, ಅಡ್ಡೂರು ಅಲ್ ಹುದಾ ಇಂಟರ್ನ್ಯಾಷನಲ್ ಶಾಲೆ , ಮಂಗಳೂರು ಪಡೆಯಿತು.
ಮಾಜಿ ಸಚಿವ ಕ.ಅಭಯಚಂದ್ರ ಅವರ ಅಧ್ಯಕ್ಷತೆಯಲ್ಲಿ ನಡೆದ ಸಮಾರೋಪ ಸಮಾರಂಭದಲ್ಲಿ ಬಿಜೆಪಿ ಮುಖಂಡ ಸುದರ್ಶನ ಎಂ, ಎಂ.ಕೆ.ಎ.ಇ.ನ ಪ್ರಾಂಶುಪಾಲ ಧನಂಜಯ ಶೆಟ್ಟಿ, ಕರಾಟೆ ಅಸೋಸಿಯೇಷನ್ ಅಧ್ಯಕ್ಷ ಅಬುಲ್ ಅಲಾ, ಜಿಲ್ಲಾ ಕರಾಟೆ ಶಿಕ್ಷಕರ ಸಂಘದ ಅಧ್ಯಕ್ಷ ಡಾ.ರಾಹುಲ್ ಟಿ.ಜಿ,ಉಪಾಧ್ಯಕ್ಷ ಅರುಣ್ ಕುಮಾರ್ ನಿಟ್ಟೆ,ಅಂತರಾಷ್ಟ್ರೀಯ ತರಬೇತುದಾರ ಸ್ವಾಮಿ ಪ್ರಸಾದ್, ರಾಜ್ಯ ಕರಾಟೆ ಶಿಕ್ಷಕರ ಸಂಘದ ಉಪಾಧ್ಯಕ್ಷ ಸತೀಶ್ ಬೆಳ್ಮಣ್, ಪ್ರಧಾನ ಕಾರ್ಯದರ್ಶಿ ರವಿ ಕೋಟ್ಯಾನ್, ಕೀರ್ತಿ ಜಿಕೆ, ವಾಮನ್ ಪಾಲನ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಬಹುಮಾನ ವಿತರಿಸಿದರು.
ತೀರ್ಪುಗಾರರಾಗಿ ಮುಹಮ್ಮದ್ ನದೀಮ್, ರಾಜೇಶ್ ಅಂಚನ್ ಸಹಕರಿಸಿದ್ದರು. ನವೀನ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
.

