ರಾಮಕೃಷ್ಣ ಮಠದಲ್ಲಿ ರಾಷ್ಟ್ರೀಯ ಯುವ ದಿನಾಚರಣೆ ಕಾರ್ಯಕ್ರಮ

0
25

“ಸ್ವಾಮಿ ವಿವೇಕಾನಂದರುಯುವಕರ ನಿಜವಾದ ಸಾಮರ್ಥ್ಯವನ್ನು ಗುರುತಿಸಿದರು” – ಪಿ. ಪ್ರದೀಪ್‌ಕುಮಾರ್

“ಸ್ವಾಮಿ ವಿವೇಕಾನಂದರು ಯುವಕರನ್ನು ಕೇವಲ ಜನಸಂಖ್ಯೆಯಾಗಿ ನೋಡಲಿಲ್ಲ, ಬದಲಾಗಿ ಅವರನ್ನು ಚಾಲನಾ ಶಕ್ತಿ ಮತ್ತು ಅಭಿವೃದ್ಧಿಯ ಪ್ರೇರಕಶಕ್ತಿಯಾಗಿ ನೋಡಿದರು. ಸ್ವಾಮೀಜಿಯುವಕರ ನಿಜವಾದ ಸಾಮರ್ಥ್ಯವನ್ನು ಗುರುತಿಸಿದರು ಮತ್ತು ರಾಷ್ಟ್ರವನ್ನು ಪರಿವರ್ತಿಸಲು ಈ ಸಾಮರ್ಥ್ಯವನ್ನು ಬಳಸಿಕೊಳ್ಳುವಲ್ಲಿ ಯಾವಾಗಲೂ ಒತ್ತಾಯಿಸಿದರು. ವ್ಯಕ್ತಿತ್ವವನ್ನು ನಿರ್ಮಿಸುವ ಶಿಕ್ಷಣ ಮುಖ್ಯ. ಭೂಮಿಯ ಬಗ್ಗೆ ಕಲಿಯುವುದು ಜೀವನದಲ್ಲಿ ಎಂದಿಗೂ ನಿಲ್ಲುವುದಿಲ್ಲ. ಪ್ರತಿಯೊಬ್ಬರೂ ನೆಲದ ಕಾನೂನನ್ನು ಗೌರವಿಸಿ. ನೈತಿಕತೆ, ಮಾನವೀಯತೆ ಮತ್ತು ಮೌಲ್ಯಗಳನ್ನು ಎಂದಿಗೂ ಬಿಡಬಾರದು” ಎಂದುಕರ್ನಾಟಕ ಬ್ಯಾಂಕ್ ಲಿಮಿಟೆಡ್‌ನ ಅಧ್ಯಕ್ಷರಾದ ಪಿ. ಪ್ರದೀಪ್‌ಕುಮಾರ್‌ ಹೇಳಿದರು.

ಮಂಗಳೂರು ರಾಮಕೃಷ್ಣ ಮಠದ ಸ್ವಾಮಿ ವಿವೇಕಾನಂದ ಸಭಾಂಗಣದಲ್ಲಿ ಮಂಗಳೂರು ರಾಮಕೃಷ್ಣ ಮಿಷನ್‌ನ ಅಮೃತ ಮಹೋತ್ಸವದ ಸುಸಂದರ್ಭದಲ್ಲಿ ನಡೆದ ರಾಷ್ಟ್ರಿಯ ಯುವ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಮಂಗಳೂರು ಕೆನರಾ ಹೈಸ್ಕೂಲ್ ಅಸೋಸಿಯೇಷನ್‌ನ ಗೌರವ ಕಾರ್ಯದರ್ಶಿಗಳಾದ ಎಂ. ರಂಗನಾಥ ಭಟ್‌ಅವರು ಮಾತನಾಡಿ“ಬಾಲ್ಯದಿಂದಲೇ ಸ್ವಾಮಿ ವಿವೇಕಾನಂದರ ಚಿಂತನೆಗಳು ನನ್ನ ಮೇಲೆ ಹಲವು ರೀತಿಯಲ್ಲಿ ಪ್ರಭಾವ ಬೀರಿದೆ. ಸ್ವಾಮಿ ವಿವೇಕಾನಂದರ ಮಾತುಗಳು ನನ್ನ ಜೀವನದುದ್ದಕಕ್ಕೂ ನೆರಳಿನಂತೆ ಸ್ಪೂರ್ತಿತುಂಬಿವೆ. ಸ್ವಾಮಿ ವಿವೇಕಾನಂದರ ಬಗ್ಗೆ ಅರಿತುಕೊಂಡಾಗ ಸುಭೀಕ್ಷಜೀವನ ನಮ್ಮದಾಗುತ್ತದೆ” ಎಂದು ಅಭಿಪ್ರಾಯಪಟ್ಟರು.

ಉತ್ತರಾಖಂಡದ ಮಾಯಾವತಿಯ ಅದ್ವೈತ ಆಶ್ರಮದ ಪ್ರಬುದ್ಧ ಭಾರತ ಮಾಸಪತ್ರಿಕೆಯ ಸಹ ಸಂಪಾದಕರಾದ ಸ್ವಾಮಿ ಜ್ಞಾನೀಶಾನಂದಜಿ ಅವರು ದಿವ್ಯ ಸಾನ್ನಿಧ್ಯ ವಹಿಸಿದ್ದರು.ಮಂಗಳೂರು ರಾಮಕೃಷ್ಣ ಮಿಷನ್‌ನ ಕಾರ್ಯದರ್ಶಿಗಳಾದ ಸ್ವಾಮಿಜಿತ ಕಾಮಾನಂದಜಿ ಪ್ರಾಸ್ತಾವಿಕ ಮಾತುಗಳನ್ನಾಡಿದರು.ಬೆಂಗಳೂರಿನ ಲೇಖಕರು ಹಾಗೂ ವಾಗ್ಮಿಗಳಾದ ಚಕ್ರವರ್ತಿ ಸೂಲಿಬೆಲೆಯವರುಅವರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ವಿಶೇಷ ಅವಧಿಗಳು ಹಾಗೂ ಸಂವಾದ
ಕಾರ್ಯಕ್ರಮದ ಮೊದಲನೇ ಅವಧಿಯಲ್ಲಿಉತ್ತರಾಖಂಡದ ಮಾಯಾವತಿಯಅದ್ವೈತಆಶ್ರಮದ ಪ್ರಬುದ್ಧ ಭಾರತ ಮಾಸಪತ್ರಿಕೆಯ ಸಹ ಸಂಪಾದಕರಾದ ಸ್ವಾಮಿಜ್ಞಾ ನೀಶಾನಂದಜಿ ಅವರು“Energy, Efficiency, Excellence – The Youth Formula” ಎಂಬ ವಿಷಯದ ಬಗ್ಗೆ ಮಾತನಾಡಿದರು.

ಎರಡನೇ ಅವಧಿಯಲ್ಲಿ ಬೆಂಗಳೂರಿನ ಲೇಖಕರು ಹಾಗೂ ವಾಗ್ಮಿಗಳಾದ ಚಕ್ರವರ್ತಿ ಸೂಲಿಬೆಲೆಯವರು“ಸ್ವಾಮಿ ವಿವೇಕಾನಂದರ ಜೀವನ: 21ನೇ ಶತಮಾನದಯುವಕರಿಗೆದಾರಿದೀಪ” ಎಂಬ ವಿಷಯದ ಬಗ್ಗೆ ವಿಚಾರ ಮಂಡಿಸಿದರು. ನಂತರ “From Learning to Leadership – The Vivekananda Way” ಎಂಬ ವಿಷಯದಕುರಿತುನಡೆದ ಸಂವಾದನಡೆಯಿತು. ಈ ಸಂವಾದದಲ್ಲಿಚಕ್ರವರ್ತಿಸೂಲಿಬೆಲೆ, ಮಂಗಳೂರಿನ ಫಾದರ್ ಮ್ಯುಲ್ಲರ್ ವೈದ್ಯಕೀಯ ಮಹಾವಿದ್ಯಾಲಯಆಸ್ಪತ್ರೆಯ ಪ್ರಾಧ್ಯಾಪಕರಾದಡಾ. ಅರುಣಾ ಯಡಿಯಾಳ್ ಹಾಗೂ ಮೂಡುಬಿದಿರೆಯ SKF Elixer India Pvt. Ltd. .ಇದರ ಜಂಟಿ ವ್ಯವಸ್ಥಾಪಕ ನಿರ್ದೇಶಕರಾದ ಪ್ರಜ್ವಲ್‌ ಆಚಾರ್ಯ, ಅವರು ಭಾಗವಹಿಸಿದರು. ಮಂಗಳೂರು ರಾಮಕೃಷ್ಣ ಮಿಷನ್‌ನ ಸ್ವಯಂ ಸೇವಕರಾದರ ರಂಜನ್ ಬೆಳ್ಳರ್ಪಾಡಿ ಅವರು ಸಂವಾದಕಾರ್ಯಕ್ರಮವನ್ನು ನಿರ್ವಹಿಸಿದರು.

500 ಕ್ಕೂ ಹೆಚ್ಚು ಯುವಕರು ಭಾಗಿ ಈ ಕಾರ್ಯಕ್ರಮದಲ್ಲಿಮಂಗಳೂರಿನ ಕರ್ನಾಟಕ ಪಾಲಿಟೆಕ್ನಿಕ್ ಹಾಗೂ ನಿರಂಜನಸ್ವಾಮಿ ಪಾಲಿಟೆಕ್ನಿಕ್ ಹಾಗೂ ಶ್ರೀನಿವಾಸ ಕಾಲೇಜಿನ ನ500 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಭಾರತೀಯ ಸೇನೆಯ ನಿವೃತ್ತಯೋಧರಾದ ಕ್ಯಾಪ್ಟನ್‌ ಗಣೇಶ್‌ ಕಾರ್ಣಿಕ್‌ ಅವರು ಈ ಸ್ವಾಗತಿಸಿ, ಭಾರತೀಯ ಸೇನೆಯ ನಿವೃತ್ತಯೋಧರಾದ ಬೆಳ್ಳಾಲ ಗೋಪಿನಾಥ್‌ರಾವ್‌ ವಂದಿಸಿದರು, ಕುಮಾರಿ ಶ್ರೀದೇವಿ ಕಾರ್ಯಕ್ರಮ ನಿರ್ವಹಿಸಿದರು.

LEAVE A REPLY

Please enter your comment!
Please enter your name here