ಮಣಿಪುರ ಶ್ರೀ ವಿರೋಭ ಮಂದಿರದಲ್ಲಿ ನವರಾತ್ರಿ ಉತ್ಸವ

0
224

ಉಡುಪಿ: ಶ್ರೀ ವಿರೋಭ ಮಂದಿರ ಮಣಿಪುರ ಉಡುಪಿ ಇಲ್ಲಿ ನವರಾತ್ರಿ ಉತ್ಸವವು ಸೆ. 22ರಿಂದ ಪ್ರಾರಂಭಗೊಂಡಿದ್ದು, ಅ. 2ರವರೆಗೆ ನಡೆಯಲಿದೆ.

ಅ. 2ರಂದು ಬೆಳಿಗ್ಗೆ ನಾಗ ತನುಪೂಜೆ, 10 ಗಂಟೆಗೆ ಸಾಮೂಹಿಕ ಸತ್ಯನಾರಾಯಣ ಪೂಜೆ, ಮಧ್ಯಾಹ್ನ ಮಹಾಪೂಜೆ, ಅನ್ನ ಸಂತರ್ಪಣೆ ನಡೆಯಲಿದೆ. ರಾತ್ರಿ 7-00 ಗಂಟೆಯಿಂದ ಗುರುಪೂಜೆ, ಬಹುಮಾನ ಮತ್ತು ವಿದ್ಯಾರ್ಥಿವೇತನ ವಿತರಣೆ ನಡೆಯಲಿದೆ. ರಾತ್ರಿ 8-00 ಗಂಟೆಯಿಂದ ಸ್ಥಳೀಯರಿಂದ ಮನೋರಂಜನೆ ಕಾರ್ಯಕ್ರಮ, ಜಾನಪದ ವೈಭವ ಕಲಾಮಯಂ ಉಡುಪಿ ಇವರಿಂದ, ಹಾಗೂ ಜಾನಪದ ನೃತ್ಯ, ಸಂಗೀತ ಮುಂತಾದ ಕಾರ್ಯಕ್ರಮ ನಡೆಯಲಿದೆ.

LEAVE A REPLY

Please enter your comment!
Please enter your name here