ಹೆಬ್ರಿ : ರಾಜ್ಯದಲ್ಲಿ ಪಂಚ ಗ್ಯಾರಂಟಿಯನ್ನು ಪ್ರಣಾಳಿಕೆಯಲ್ಲಿ ಘೋಷಿಸಿ ಅಧಿಕಾರಕ್ಕೆ ಬಂದ ಕೂಡಲೇ ಜಾರಿ ಮಾಡಿ ಜನಮನ್ನಣೆಗಳಿಸಿದೆ. ಅದರಂತೆ ರಾಜ್ಯದಲ್ಲಿ ಮಧ್ಯ ನಿಷೇಧ ಮಾಡಿ ಆ ಮೂಲಕ ಪುಣ್ಯಕಟ್ಟಿಕೊಳ್ಳುವಂತೆ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜನಜಾಗೃತಿ ವೇದಿಕೆಯ ಉಡುಪಿ ಜಿಲ್ಲಾಧ್ಯಕ್ಷ ನೀರೆ ಕೃಷ್ಣ ಶೆಟ್ಟಿ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಉಚಿತ ಬಸ್ ಪ್ರಯಾಣ, ಉಚಿತ ವಿದ್ಯುತ್, ಗೃಹಲಕ್ಷ್ಮಿ ಯೋಜನೆಯ ಮೂಲಕ ಮಹಿಳೆಯರು ಸಂತುಷ್ಠರಾಗಿದ್ದಾರೆ. ದೇಶದಲ್ಲಿ ರಾಜ್ಯವು ತಲ ವರಮಾನದಲ್ಲಿ ಮುಂಚೂಣಿಯಲ್ಲಿದೆ. ರಾಜ್ಯಕ್ಕೆ ಕೀರ್ತಿಯೂ ಬಂದಿದೆ. ಆದರೆ ರಾಜ್ಯದಲ್ಲಿ ಮಧ್ಯ ಮಾರಾಟ ಮತ್ತು ಕುಡಿತದ ಚಟದಿಂದ ಮಧ್ಯಮ ವರ್ಗದ ಮಹಿಳೆಯರು ಮತ್ತು ಅವರ ಕುಟುಂಬ ಸಂಕಷ್ಟದಲ್ಲಿದ್ದಾರೆ ಎಂದು ನೀರೆ ಕೃಷ್ಣ ಶೆಟ್ಟಿ ಹೇಳಿದ್ದಾರೆ. ದುಡಿಯುವ ವರ್ಗ ಮತ್ತು ಕಲಿಯುವ ವಿದ್ಯಾರ್ಥಿಗಳು ರಾಜ್ಯದಲ್ಲಿ ಮಧ್ಯಮುಕ್ತ ಮಾರಾಟದಿಂದ ತಮ್ಮ ಆರೋಗ್ಯವನ್ನು ಹಾಳು ಮಾಡುತ್ತಿದ್ದಾರೆ. ಮಧ್ಯ ನಿಷೇಧದಿಂದ ರಾಜ್ಯದಲ್ಲಿ ಮಹಿಳೆಯರು, ಬಡ ವರ್ಗದವರು ಸಂತೋಷಗೊಳ್ಳುವರು ಎಂದು ನೀರೆ ಕೃಷ್ಣ ಶೆಟ್ಟಿ ಹೇಳಿದ್ದಾರೆ. ಬಿಹಾರದಲ್ಲಿ ಕೇವಲ ೧೦ ಸಾವಿರ ರೂಪಾಯಿ ಖಾತೆಗೆ ಪಾವತಿಯಿಂದ ನಿತೀಶ್ ಕುಮಾರ್ ಸರ್ಕಾರ ಮತ್ತೇ ಅಧಿಕಾರಕ್ಕೆ ಬಂದಿದೆ ಎನ್ನುವ ಬದಲು ಮಧ್ಯ ನಿಷೇಧದಿಂದ ಜನರು ಮಹಿಳೆಯರು ಸಂತಸಗೊಂಡಿದ್ದಾರೆ. ಆ ಸರ್ಕಾರಕ್ಕೆ ಪ್ರಥಮ ಪ್ರಾಶಸ್ತ್ಯ ನೀಡಿದ್ದಾರೆ ಎಂಬುದನ್ನು ಗಮನಿಸಬೇಕು. ರಾಜ್ಯದಲ್ಲೂ ಮಧ್ಯ ನಿಷೇಧ ಮಾಡುವಂತೆ ಮನವಿ ಮಾಡಿದ್ದಾರೆ.
ಮುಂದಿನ ಬಜೆಟ್ ನಲ್ಲಿ ಘೋಷಣೆ ಮಾಡಿ : ರಾಜ್ಯದ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ತಮ್ಮ ಮುಂದಿನ ಬಜೆಟ್ ಆರಂಭಿಸುವಾಗ ಘೋಷಣೆ ಮಾಡಿ ಜುಲೈ ೧ ರಿಂದ ಮಧ್ಯ ನಿಷೇಧ ಮಾಡುವಂತೆ ಮನವಿ ಮಾಡಿದ್ದಾರೆ. ನಿಷೇಧದಿಂದ ಅತಂತ್ರರಾಗುವ ಅಬಕಾರಿ ಇಲಾಖೆ, ಮದ್ಯಮಾರಾಟ ಮಂಡಳಿಯ ನೌಕರರಿಗೆ ಬೇರೆ ಉದ್ಯೋಗದ ವ್ಯವಸ್ಥೆಯನ್ನು ಸರ್ಕಾರ ಮಾಡಿ ಮಧ್ಯವನ್ನು ಸಂಪೂರ್ಣ ನಿಷೇಧ ಮಾಡುವಂತೆ ನೀರೆ ಕೃಷ್ಣ ಶೆಟ್ಟಿ ಒತ್ತಾಯಿಸಿದ್ದಾರೆ.

