ಅಳಿಕೆ ಗ್ರಾಮಪಂಚಾಯತ್ ಸಭಾಭವನದಲ್ಲಿ ಆರೋಗ್ಯ ತಪಾಸಣಾ ಶಿಬಿರ ಯಶಸ್ವಿ

0
83

ಪೂಜ್ಯ ಖಾವಂದರ 78ನೆ. ಹುಟ್ಟುಹಬ್ಬ ದ ಪ್ರಯುಕ್ತ ,ಗೆಳೆಯರ ಬಳಗ ಅಳಿಕೆ ವಲಯ ಮತ್ತು ಶೌರ್ಯವಿಪತು ನಿರ್ವಹಣಾ ಘಟಕ ಅಳಿಕೆ ಇವರ ಸಹಭಾಗಿತ್ವದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಅಳಿಕೆ ಗ್ರಾಮಪಂಚಾಯತ್ ಸಭಾಭವನದಲ್ಲಿ ನಡೆಸಲಾಯಿತು ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾಮ ಪಂಚಾಯತ್ ಅಧ್ಯಕ್ಷ ರಾದ ಪದ್ಮನಾಭ ಪೂಜಾರಿ ಸಣ್ಣಗುತ್ತು ವಹಿಸಿದ್ದರು.ಅಳಿಕೆ ಪ್ರಾಥಮಿಕ ಆರೋಗ್ಯ ಕೇಂದ್ರ ಅಳಿಕೆ ವೈದ್ಯಾಧಿಕಾರಿಯಾದ ಮುರಳಿಯವರು ದೀಪ ಬೆಳಗಿಸಿ ಉದ್ಘಾಟನೆ ಮಾಡಿದರು.ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧೀ ಕಾರಿಯವರು ಸುರೇಶ್ ಗೌಡ,ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಉದಯ ಕುಮಾರ್ ,ವಲಯಾಧ್ಯಕ್ಷರು ರಾಜೇಂದ್ರ ರೈ,ಒಕ್ಕೂಟದ ಅಧ್ಯಕ್ಷರು ರವೀಶ್, ಉದಯ್, ವಿಟ್ಲ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಸಮತ್ j ಶೆಟ್ಟಿ,ಶೌರ್ಯದ ಕ್ಯಾಪ್ಟನ್ ದೀಪಕ್,ನಿಕಟಪೂರ್ವ ಅಧ್ಯಕ್ಷರಾದ ಬಾಲಕೃಷ್ಣ ಪೂಜಾರಿ ಸಣ್ಣಗುತ್ತು ಉಪಸ್ಥಿತರಿದ್ದರು.100 ಕ್ಕಿಂತ ಹೆಚ್ಚು ಮಂದಿ ಇದರ ಪ್ರಯೋಜನ ಪಡೆದರು.ಹಾಗೂ 40 ಜನರಿಗೆ ಉಚಿತ ಕನ್ನಡಕ ನೀಡಲಾಯಿತು.52ಮಂದಿಗೆ ಅಭಾ ಕಾರ್ಡ್ ಮಾಡಿಸಲಾಯಿತು. ಅಳಿಕೆ ಪ್ರಾಥಮಿಕ ಕೇಂದ್ರದ ಹಾಗೂ ವಿಟ್ಲ ಸಮುದಾಯ ಕೇಂದ್ರದ ಸಿಬ್ಬಂದಿ ವರ್ಗದವರು,ಆಶಾಕಾರ್ಯಕರ್ತರು. ಒಕ್ಕೂಟದ ಪದಾಧಿಕಾರಿಯವರು,ಶೌರ್ಯ ವಿಪತ್ತು ನಿರ್ವಹಣೆ ಘಟಕದ ಸದಸ್ಯರು,ಸೇವಪ್ರತಿನಿಧಿಯವರು ಸಹಕರಿಸಿದರು.ಕಾರ್ಯಕ್ರಮವನ್ನು ಮೇಲ್ವಿಚಾರಕಿಯಾದ ಮೀನಾಕ್ಷಿಯವರು ನಿರ್ವಹಿಸಿ,ರೂಪಾರವರು ಸ್ವಾಗತಿಸಿದರು.ಸೇವಪ್ರತಿನಿಧಿ ವಿನಯ ರೈ ಯವರು ವಂದಿಸಿದರು.

LEAVE A REPLY

Please enter your comment!
Please enter your name here