ನವಭಾರತ ವೆಲ್ಫೇರ್ ಬೋರ್ಡ್ ” (ರಿ) ನೂತನ ಸಂಘಟನೆ ಪ್ರಾರಂಭ

0
87

ಹಿಂದೂ ಸಮಾಜವು ಕೇವಲ ಖಾಲಿ ಹೋರಾಟ ವಿಚಾರವಾಗಿ ಮು೦ದೆ ಹೊರಟಿದೆ.ಆದರೆ ಸಮಾಜದಲ್ಲಿರುವಂತಹ ಸಣ್ಣ ಪುಟ್ಟ ಸಮಸ್ಯೆಗಳ ಬಗೆಹರಿಸುವ ನಿಟ್ಟಿನಿಂದ ಈ ಸಂಘಟನೆಯನ್ನು ಸ್ಥಾಪಿಸಲಾಗಿದೆ. ಹಿಂದೂ ಧಾರ್ಮಿಕ ಕ್ಷೇತ್ರದಲ್ಲಿ ಸಣ್ಣ ಪುಟ್ಟ ಅನೇಕ ಸಮಸ್ಯೆಗಳಿವೆ. ಆ ಸಮಸ್ಯೆಗಳನ್ನು ಬಗೆಹರಿಸುವುದಕ್ಕೆ ತಂಡದ ರೀತಿಯಲ್ಲಿ ಕೆಲಸ ಮಾಡುವುದು ಅತೀ ಅಗತ್ಯ.ಇವತ್ತು ಲವ್ ಜಿಹಾದ್ ಇವತ್ತಿಗೂ ಕೂಡ ನಡೆಯುತ್ತಿದೆ ಅಂದರೆ ಧರ್ಮಶಿಕ್ಷಣದ ಕೊರತೆ.ಮಕ್ಕಳಿಗೆ ಧರ್ಮ,ಸಂಸ್ಕಾರ,ಸಂಸ್ಕೃತಿಯ ಅರಿವೇ ಇಲ್ಲದೆ ಇರುವ೦ತದ್ದು,ನಮ್ಮ ತಲೆಮಾರಿಗೆ ಧರ್ಮಶಿಕ್ಷಣಕ್ಕೆ ಆದ್ಯತೆ ನೀಡದೆ ಈ “ಲವ್ ಜಿಹಾದ್” ಎ೦ಬುದನ್ನು ಇವತ್ತಿಗೂ ಕೇಳುತ್ತಿದ್ದೇವೆ,ನೋಡುತ್ತಿದ್ದೇವೆ. ಆದರೆ ಅಡಿ ಪಾಯ ಗಟ್ಟಿ ಇಲ್ಲದೆ ಗೋಡೆ ಕುಸಿಯಿತೆಂದು ಅತ್ತರೆ ಪ್ರಯೋಜನವಿಲ್ಲ. ಆದರೆ ಒಂದ೦ತೂ ಸತ್ಯ ನಾವೇಲ್ಲರೂ “ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗಿತೆ” ಎನ್ನುವ ಗಾದೆ ಮಾತನ್ನು ಕೇಳಿರುತ್ತೇವೆ. ಅದರರ್ಥ ಗಿಡವಾಗಿದ್ದಲೇ ನಾವು ಬಾಗಿಸಬೇಕು ಅದೇ ರೀತಿ ಹಿಂದೂ ಹೆಣ್ಣುಮಕ್ಕಳಿಗೆ ಧರ್ಮಶಿಕ್ಷಣ ಅಂದರೆ ಆ ಬೇರನ್ನು ಗಟ್ಟಿ ಮಾಡುವ ಕೆಲಸಕ್ಕೆ “ನವಭಾರತ ವೆಲ್ಫೇರ್ ಬೋರ್ಡ್” ಹೊರಟು ನಿಂತಿದೆ. ನಮ್ಮ ದೇವಾಲಯ,ಧಾರ್ಮಿಕ ಕ್ಷೇತ್ರಗಳ ಬಗ್ಗೆ ಅವಾಚ್ಯ ಶಬ್ದದಿಂದ ಬಯ್ಯುವುದು,ಹಾಗೂ ನಮ್ಮ ದೇವಾಲಯ ದೇವಸ್ಥಾನಗಳ ಮೇಲೆ ಅಕ್ರಮಣ ಆಗ್ತಾ ಇರುವ೦ತದ್ದು ನಾವೆಲ್ಲರೂ ನೋಡಿಯೇ ಇದ್ದೇವೆ ಆದರೆ ಇವೆಲ್ಲದಕ್ಕೂ ಉತ್ತರವನ್ನು ನೀಡವುದಕ್ಕೆ ಒಂದು ಗುಂಪು ಅಥವಾ ಸಂಘಟನೆ ಇದ್ದಾಗ ನಾವೇಲ್ಲರೂ ಒಂದು ಉತ್ತರವನ್ನು ಕೊಡ್ಲಿಕ್ಕೆ ಖಂಡಿತಾ ಸಾಧ್ಯ ಇದೆ. ಅನೇಕ ಸಂಘಟನೆಗಳಿವೆ.ಆದರೆ ಕೆಲವೊಂದು ಸಮಸ್ಯೆಗಳನ್ನು ನೋಡುತ್ತಾ ಹೋದಾಗ ಒಂದೆರಡು ಉದಾಹರಣೆ ನಿಮ್ಮ ಮುಂದೆ ಇಡ್ತೇನೆ.

ಬಡ ಮಕ್ಕಳಿಗೆ ವಿದ್ಯಾಭ್ಯಾಸ ಮಾಡುವುದಕ್ಕೆ ಕಷ್ಟ ಇರುವಂತದ್ದು ,ಮದುವೆಗೆ ಅಥವಾ ಇನ್ನಿತರ ಸಣ್ಣ ಪುಟ್ಟ ಸಹಾಯ ಮಾಡುವು೦ತದ್ದು ,ಬೇರೆ ಧರ್ಮದಲ್ಲೂ ಒಂದು ಗುಂಪು ರೀತಿಯಲ್ಲಿ ಕೆಲಸ ಮಾಡ್ತಾ ಇದ್ದಾರೆ.ನಮ್ಮಲ್ಲಿ ಹೇಗೆ ಕೇಳಿದರೆ ಅವರ ಸಹಾಯಕ್ಕೆ ನಿಲ್ಲುವಂತಹ ಸ್ವಲ್ಪ ಸಂಘಟನೆಗಳು ಇದೆ ಬಿಟ್ಟರೆ ಸಂಪೂರ್ಣವಾಗಿ ಸಮಯ ಕೊಡುವಂತಹ ಸಂಘಟನೆಗಳು ಯಾವುದು ಇಲ್ಲ,ಆದರೆ ಇದು ರಚನೆ ಆಗಬೇಕಾದರೆ ಇದಕ್ಕೆ ಸಂಬಂಧಪಟ್ಟ೦ತಹ ಕೆಲಸಗಳನ್ನು ಕೆಲಸಗಳನ್ನು ಹಾಗು ಅದರ ರೂಪುರೇಷೆ,ಊರಿನ ಮೂಲಕ ತಲುಪಿಸುವ ಕೆಲಸ ಮಾಡುವ೦ತದ್ದು, ಬೆಳಕಿಗೆ ಚೆಲ್ಲುವುದು,ಲೇಖಕರನ್ನು ಸಿದ್ದಗೊಳಿಸುವಂತದ್ದು ,ಈ ಎಲ್ಲಾ ವಿಚಾರದಲ್ಲೂ ಕೆಲಸ ಮಾಡಬೇಕೇ೦ದು ಹಾಗೂ ಸಮಾಜಕ್ಕೆ ಮುಟ್ಟಿಸಬೇಕೆ೦ಬ ಕೆಲಸವನ್ನು ಮಾಡಲು “ನವಭಾರತ ವೆಲ್ಫೇರ್ ಬೋರ್ಡ್”ಸಜ್ಜಾಗುತ್ತಿದೆ.
ಸಂಘಟನೆಯನ್ನು ಬೆಳೆಸುವುದೇಕೆ೦ದರೆ ನಮ್ಮಲ್ಲಿರುವ ನ್ಯೂನತೆಯನ್ನು ಸರಿಪಡಿಸಲಿಕ್ಕೆ ಒಂದು ತಂಡದ ರೀತಿಯಲ್ಲಿ ಕೆಲಸ ಮಾಡುವುದು ಇದು ಸಂಘಟನೆ.

ಒಬ್ಬ ವ್ಯಕ್ತಿ ಮಾತ್ರ ಮಾಡುವ ಕೆಲಸವಲ್ಲ ಒಬ್ಬ ವ್ಯಕ್ತಿಯಿಂದ ಸಮಾಜವನ್ನು ಬದಲು ಮಾಡಲು ಸಾಧ್ಯವಿಲ್ಲ,ಇಡೀ ಸಮಾಜಕ್ಕೆ ಸೇವಾಮನೋಭಾವದಿಂದ ಕೆಲಸ ಮಾಡುವಂತಹ ವ್ಯಕ್ತಿಗಳಿ೦ದ ತಂಡವನ್ನು ರಚನೆ ಮಾಡಿ ಕೆಲಸ ಮಾಡುವ೦ತದ್ದು ಉದಾಹರಣೆಗೆ:-ದೇವಾಲಯಗಳನ್ನು ಸ್ವಚ್ಛಗೊಳಿಸುವುದು ಅನೇಕ ದೇವಾಲಯಗಳಿವೆ,ಆ ಅನೇಕ ದೇವಾಲಯಗಳು ಪ್ರಸಿದ್ಧ ಸ್ಥಳಗಳು ಅದನ್ನು ಪರಿಚಯ ಮಾಡುವ೦ತದ್ದು ಹಾಗು ಸಮಾಜದ ಮುಂದೆ ಇಡುವುದು ಇದೆಲ್ಲಾ ನಮ್ಮ ಕರ್ತವ್ಯದಲ್ಲಿದೆ. ನಮ್ಮ ವೈಯಕ್ತಿಕ ಜೀವನವನ್ನು ಬಿಟ್ಟು ಸಮಾಜಕ್ಕೆ ಏನು ಕೊಡುತ್ತೇವೆ ಅದು ಶಾಶ್ವತವಾಗಿ ಉಳಿಯುವ೦ತದ್ದು ಹಾಗಾಗಿ ಅಂತಹ ಕೆಲಸ ಮಾಡಬೇಕಿದ್ರೆ ಒಬ್ಬ ವ್ಯಕ್ತಿಯಿಂದ ಆಗುವ೦ತದಲ್ಲ.ಗ್ರಾಮ ಗ್ರಾಮದಲ್ಲಿ ಇದನ್ನು ರಚನೆ ಮಾಡುವಂತಹ ಕೆಲಸವನ್ನು ಮಾಡಿದ್ರೆ ಮಾಡುವ ಕೆಲಸಕ್ಕೆ ಅರ್ಥ ಸಿಗುತ್ತದೆ ಹಾಗೂ ಆ ಕೆಲಸದ ಒಂದು ಹಂತದಲ್ಲಿ ಹೆಜ್ಜೆ ಇಡುತಿದ್ದೇವೆ.

✍ಕವಿತಾ ಆಚಾರ್ಯ ಮುದೂರು

LEAVE A REPLY

Please enter your comment!
Please enter your name here