ಶಿಕ್ಷಣ ಮತ್ತು ಸರಳತೆ ನಾರಾಯಣಗುರುಗಳ ಸಮಾಜ ಸುಧಾರಣೆಯ ದ್ವಿಮಂತ್ರ : ಸಂದೀಪ್ ಸಾಲ್ಯಾನ್

0
39

ಯುವವಾಹಿನಿ ಬಂಟ್ವಾಳ ಘಟಕದ ಗುರುತತ್ವವಾಹಿನಿ ಮಾಲಿಕೆ 60

ಕಲ್ಲಡ್ಕ : ನಾರಾಯಣಗುರುಗಳು ಧಾರ್ಮಿಕತೆಯ ನಿಜವಾದ ಅರ್ಥವನ್ನು ಸಮಾಜಮುಖಿ ಪರಿವರ್ತನೆಯೊಡನೆ ಜೋಡಿಸಿ ನೋಡಿದ ಮಹಾತ್ಮರು. ಧಾರ್ಮಿಕ ತಳಹದಿಯಲ್ಲಿ ಸಮಾಜ ಸುಧಾರಣೆ ಸಾಧ್ಯವೆಂದು ದೃಢವಾಗಿ ನಂಬಿದ ಅವರು, ದೇವಸ್ಥಾನಗಳನ್ನು ಕೇವಲ ಪೂಜಾ ಸ್ಥಳಗಳೆನ್ನದೆ, ಜನರ ಆತ್ಮೋದ್ಧಾರಕ್ಕೆ ದಾರಿಯಾಡಿಸುವ ಪವಿತ್ರ ಕೇಂದ್ರಗಳಾಗಿ ರೂಪಿಸುವ ಕನಸನ್ನು ಕಂಡರು. ದೇವಸ್ಥಾನಗಳು ಅಧ್ಯಯನ, ಜ್ಞಾನಾರ್ಜನೆ ಮತ್ತು ಮೌಲ್ಯಬೆಳೆಸುವ ಸಂಸ್ಕೃತಿಕ ವೇದಿಕೆಗಳಾಗಬೇಕು ಎಂಬುದು ಗುರುಗಳ ಮಹದ್ಭಾವನೆ.

‘ಉತ್ತಮ ಶಿಕ್ಷಣ ಪಡೆದವರು ಮಾತ್ರ ವೈಚಾರಿಕವಾಗಿ ಚಿಂತನೆ ಮಾಡುವ ಸಾಮರ್ಥ್ಯ ಹೊಂದುತ್ತಾರೆ’ ಎಂಬ ನಂಬಿಕೆಯೊಂದಿಗೆ ನಾರಾಯಣಗುರುಗಳು ಶಿಕ್ಷಣಕ್ಕೆ ಅಪಾರ ಮಹತ್ವ ನೀಡಿದರು. ಆ ಕಾಲದಲ್ಲಿ ಸಮಾಜವು ಎದುರಿಸುತ್ತಿದ್ದ ಅನ್ಯಾಯ, ಅಂಧಶ್ರದ್ಧೆ ಮತ್ತು ಅಸಮಾನತೆಗಳಿಗೆ ಶಿಕ್ಷಣವೇ ಶಾಶ್ವತ ಪರಿಹಾರ ಎಂದು ಅವರು ಆಳವಾಗಿ ಅರಿತಿದ್ದರು. ಸರಳ ಮತ್ತು ಸಾತ್ವಿಕ ಜೀವನವೇ ವ್ಯಕ್ತಿತ್ವದ ನಿಜವಾದ ಅಲಂಕಾರ ಎಂದು ನಾವು ನಾರಾಯಣಗುರುಗಳು ಸಾರಿದರು ಎಂದು ತರಬೇತುದಾರ, ಪತ್ರಕರ್ತ ಸಂದೀಪ್ ಸಾಲ್ಯಾನ್ ತಿಳಿಸಿದರು.

ಅವರು ಯುವವಾಹಿನಿ ಬಂಟ್ವಾಳ ಘಟಕದ ಆಶ್ರಯದಲ್ಲಿ ನವೆಂಬರ್ 20 ರಂದು ಅಮ್ಟೂರ್ ಕಿಶೋರ್ ಕಟ್ಟೆಮಾರ್ ನಿವಾಸದಲ್ಲಿ ನಡೆದ ಗುರುತತ್ವವಾಹಿನಿ ಮಾಲಿಕೆ 60ರಲ್ಲಿ ಗುರುಸಂದೇಶ ನೀಡಿದರು.

ಸಭಾ ಕಾರ್ಯಕ್ರಮದ ಮೊದಲು ಯುವವಾಹಿನಿ ಸದಸ್ಯರಿಂದ ಭಜನಾ ಸಂಕೀರ್ತನೆ ನಡೆಯಿತು.

ಕಾರ್ಯಕ್ರಮ ದಲ್ಲಿ ಕಟ್ಟೆಮಾರ್ ಮಂತ್ರದೇವತಾ ಕ್ಷೇತ್ರದ ಧರ್ಮದರ್ಶಿ ಮನೋಜ್ ಕುಮಾರ್ ಕಟ್ಟೆಮಾರ್,ಯುವವಾಹಿನಿ ಬಂಟ್ವಾಳ ಘಟಕದ ಅಧ್ಯಕ್ಷರಾದ ನಾಗೇಶ್ ಪೂಜಾರಿ ನೈಬೆಲು ಉಪಾಧ್ಯಕ್ಷರಾದ ನಿಕೇಶ್ ಕೋಟ್ಯಾನ್ ನಿರ್ದೇಶಕರಾದ ಶೈಲೇಶ್ ಪೂಜಾರಿ ಕುಚ್ಚಿಗುಡ್ಡೆ, ಮಹೇಶ್ ಬೊಳ್ಳಾಯಿ, ಚಿನ್ನಾ ಕಲ್ಲಡ್ಕ ಸಂಘಟನಾ ಕಾರ್ಯದರ್ಶಿ ಯಶೋಧರ ಕಡಂಬಳಿಕೆ, ಸದಸ್ಯರಾದ ಸತೀಶ್ ಪೂಜಾರಿ ಬಾಯಿಲ, ಸುನೀತಾ ಮಾರ್ನಬೈಲು ಭವಾನಿ ಅಮೀನ್, ಪ್ರಶಾಂತ್ ಅಮೀನ್ ಏರಮಲೆ, ಯತೀಶ್ ಬೊಳ್ಳಾಯಿ ಜಗದೀಶ್ ಕಲ್ಲಡ್ಕ, ಆನಂದ ಪೂಜಾರಿ ಅಜ್ಜಿಬೆಟ್ಟು ನವೀನ್ ಕಾರಾಜೆ
ಮಾಜಿ ಅಧ್ಯಕ್ಷರಾದ ಪ್ರೇಮನಾಥ ಕೆ, ಅರುಣ್ ಕುಮಾರ್, ಶಿವಾನಂದ ಎಂ ನಾಗೇಶ್ ಪೊನ್ನೋಡಿ, ಜಯಪ್ರಕಾಶ್ ತೆಕ್ಕಿಪಾಪು, ರಾಜೇಶ್ ಅಮ್ಟೂರು,
ಸಾತ್ವಿಕ್ ದೇರಾಜೆ, ವಚನ್ ಅಮ್ಟೂರು, ವಿನಯ್ ಆಚಾರ್ಯ ಮತ್ತಿತರರು ಉಪಸ್ಥಿತರಿದ್ದರು .

ಯುವವಾಹಿನಿ ಬಂಟ್ವಾಳ ಘಟಕದ ನಿರ್ದೇಶಕ ಪ್ರಜಿತ್ ಅಮೀನ್ ಏರಮಲೆ ಸ್ವಾಗತಿಸಿ, ನಾರಾಯಣಗುರು ತತ್ವ ಪ್ರಚಾರ ಅನುಷ್ಠಾನ ನಿರ್ದೇಶಕ ಹರೀಶ್ ಸಾಲ್ಯಾನ್ ಅಜೆಕಲ ವಂದಿಸಿದರು.

LEAVE A REPLY

Please enter your comment!
Please enter your name here