ಜುಲೈ 1ರಿಂದ PF ಖಾತೆದಾರರಿಗೆ ಹೊಸ ನಿಯಮ – ತಿಳಿಯದೇ ಹಣ ವಿತ್‌ಡ್ರಾ ಮಾಡಲು ಹೋಗಬೇಡಿ..!

0
35

ನವದೆಹಲಿ : ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (EPFO) ತನ್ನ ಸದಸ್ಯರ ನಿವೃತ್ತಿ ಉಳಿತಾಯವನ್ನು ಮತ್ತಷ್ಟು ಭದ್ರಗೊಳಿಸುವ ಉದ್ದೇಶದಿಂದ PF ಹಣ ಹಿಂಪಡೆಯುವ ನಿಯಮಗಳಲ್ಲಿ ಮಹತ್ವದ ಬದಲಾವಣೆ ತರಲು ಮುಂದಾಗಿದೆ. ಹೊಸ ನಿಯಮದ ಪ್ರಕಾರ, PF ಖಾತೆಯಲ್ಲಿ ಕನಿಷ್ಠ 25% ಮೊತ್ತವನ್ನು ಕಡ್ಡಾಯವಾಗಿ ಉಳಿಸಬೇಕಾಗಿದ್ದು, ಉಳಿದ ಮೊತ್ತವನ್ನು ಮಾತ್ರ ಸದಸ್ಯರು ವಿತ್‌ಡ್ರಾ ಮಾಡಿಕೊಳ್ಳಲು ಅವಕಾಶ ಇರಲಿದೆ.

ಇದುವರೆಗೆ PF ಖಾತೆಯಲ್ಲಿನ ಅರ್ಹ ಮೊತ್ತವನ್ನು ನಿಯಮಾನುಸಾರ ಸಂಪೂರ್ಣವಾಗಿ ಹಿಂಪಡೆಯಲು ಅವಕಾಶವಿತ್ತು. ಆದರೆ ಹೊಸ ವ್ಯವಸ್ಥೆಯಡಿ ಕನಿಷ್ಠ 25% ಮೊತ್ತವನ್ನು ನಿವೃತ್ತಿ ಭದ್ರತೆಗಾಗಿ ಖಾತೆಯಲ್ಲೇ ಉಳಿಸುವ ಉದ್ದೇಶ ಹೊಂದಲಾಗಿದೆ. EPFO ಅಧಿಕಾರಿಗಳ ಪ್ರಕಾರ, ಅನೇಕ ಸದಸ್ಯರು ಉದ್ಯೋಗ ಬದಲಾವಣೆ ಅಥವಾ ಇತರೆ ಕಾರಣಗಳಿಂದ ಸಂಪೂರ್ಣ ಹಣವನ್ನು ಹಿಂಪಡೆಯುತ್ತಿರುವುದರಿಂದ ನಿವೃತ್ತಿ ಸಂದರ್ಭದಲ್ಲಿ ಉಳಿತಾಯದ ಕೊರತೆ ಉಂಟಾಗುತ್ತಿದೆ. ಈ ಹಿನ್ನೆಲೆಯಲ್ಲಿ ಹೊಸ ನಿಯಮವನ್ನು ಜಾರಿಗೊಳಿಸಲಾಗುತ್ತಿದೆ.

ಹೊಸ ನಿಯಮದೊಂದಿಗೆ EPFO ತನ್ನ ಡಿಜಿಟಲ್ ಸೇವೆಗಳನ್ನೂ ವಿಸ್ತರಿಸುತ್ತಿದೆ. EPFO 3.0 ಯೋಜನೆಯಡಿ ಹೊಸ ಪೋರ್ಟಲ್‌, ವೇಗವಾದ ಐಟಿ ವ್ಯವಸ್ಥೆ ಹಾಗೂ PF ಕ್ಲೇಮ್‌ಗಳ ಆಟೋ ಸೆಟಲ್‌ಮೆಂಟ್ ವ್ಯವಸ್ಥೆ ಜಾರಿಯಾಗಲಿದೆ. ಇದರಿಂದ ಕ್ಲೇಮ್‌ಗಳ ಪ್ರಕ್ರಿಯೆ ಮತ್ತಷ್ಟು ಸುಲಭ ಮತ್ತು ವೇಗವಾಗುವ ನಿರೀಕ್ಷೆಯಿದೆ.

ಐಟಿ ವ್ಯವಸ್ಥೆಯ ಅಪ್‌ಗ್ರೇಡ್ ಹಿನ್ನೆಲೆಯಲ್ಲಿ ಜೂನ್ 26ರಿಂದ ಜೂನ್ 30ರವರೆಗೆ EPFO ಸದಸ್ಯರ ಪೋರ್ಟಲ್‌, ಉದ್ಯೋಗದಾತರ ಪೋರ್ಟಲ್‌ ಹಾಗೂ UMANG ಆ್ಯಪ್‌ನ ಕೆಲವು ಆನ್‌ಲೈನ್ ಸೇವೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಜುಲೈ 1ರಿಂದ ಸೇವೆಗಳು ಪುನರಾರಂಭವಾಗಲಿವೆ ಎಂದು EPFO ತಿಳಿಸಿದೆ.

LEAVE A REPLY

Please enter your comment!
Please enter your name here