ನಿರ್ಗತಿಕ ಕುಟುಂಬಕ್ಕೆ ನೂತನ ಆಶ್ರಯ : ಸಾಲೆತ್ತೂರಿನಲ್ಲಿ ವಾತ್ಸಲ್ಯ ಮನೆಯ ಗುದ್ದಲಿ ಕಾರ್ಯಕ್ರಮ

0
70

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ (ರಿ) ವಿಟ್ಲ ತಾಲೂಕಿನ ಸಾಲೆತ್ತೂರು ವಲಯ ಕುಲಾಲ್ ಎಂಬಲ್ಲಿ ವಾಸವಿರುವ ಲೀಲಾವತಿ ತಿಮಪ್ಪ ದಂಪತಿಗಳಿಗೆ ಕಳೆದ 6 ವರ್ಷದಿಂದ ಶ್ರೀ ಕ್ಷೇತ್ರದಿಂದ ಮಾಶಾಸನ ದೊರೆಯುತ್ತಿದ್ದು ಇವರಿಗೆ ವಾಸಕ್ಕೆ ಯೋಗ್ಯವಾದ ಮನೆ ಇಲ್ಲದ ಕಾರಣ ಕ್ಷೇತ್ರದಿಂದ ವಾತ್ಸಲ್ಯ ಮನೆ ಮಂಜೂರಾಗಿದ್ದು ಈ ಮನೆಯ ಗುದ್ದಲಿ ಪೂಜೆಯನ್ನು ವಲಯದ ಭಜನಾ ಪರಿಷತ್ ಅಧ್ಯಕ್ಷರಾದ ದೇವಿಪ್ರಸಾದ್ ಶೆಟ್ಟಿ, ತಾಲ್ಲೂಕು ಯೋಜನಾಧಿಕಾರಿ ಸುರೇಶ್ ಗೌಡ, ಜನಜಾಗೃತಿ ಸದಸ್ಯರಾದ ರಾಜಾರಾಮ್ ಹೆಗ್ಡೆ ಕುದ್ರಿಯ ನೆರವೇರಿಸಿದರು.

ತಾಲ್ಲೂಕು ಯೋಜನಾಧಿಕಾರಿಯವರು ಮಾತೃ ಶ್ರೀ ಅಮ್ಮನವರು ವಾತ್ಸಲ್ಯ ಸದಸ್ಯರಿಗೆ ನೀಡುವ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು. ಈ ಸಂಧರ್ಭ ಜನಜಾಗೃತಿ ಸದಸ್ಯರಾದ ರಂಜಿತ್, ಶೌರ್ಯ ಪುರುಷೋತ್ತಮ್ ಹಾಗೂ ಸದಸ್ಯರು, ಒಕ್ಕೂಟ ಅಧ್ಯಕ್ಷರು, ಪದಾಧಿಕಾರಿಗಳು, ಸಂಘದ ಸದಸ್ಯರು, ಕೃಷಿ ಅಧಿಕಾರಿ ಐತಪ್ಪ, ಜ್ಞಾನ ವಿಕಾಸ ಸಮನ್ವಯಧಿಕಾರಿ ದೀಪ, ಸೇವಾಪ್ರತಿನಿಧಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here