ಮಂಗಳೂರು : ಜ.17 (ಇಂದು) ತುಳು ಭವನದಲ್ಲಿ ‘ಜೋಕ್ಲೆ ಕಲಾ ಚಾತುರ್ಪು’

0
39

ಮಂಗಳೂರು : ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯು ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ಆಯೋಜಿಸಿರುವ ವಿವಿಧ ತುಳು ಸ್ಪರ್ಧೆಗಳ ಕಾರ್ಯಕ್ರಮ ‘ ಜೋಕ್ಲೆ ಕಲಾ ಚಾತುರ್ಪು’ ಶನಿವಾರ
ಮಂಗಳೂರಿನ ತುಳು ಭವನದಲ್ಲಿ ನಡೆಯಲಿದೆ.

ಕಾರ್ಯಕ್ರಮವನ್ನು ಬೆಳಿಗ್ಗೆ 10:00 ಗಂಟೆಗೆ ಕೆ.ಎಸ್.ಆರ್.ಟಿ.ಸಿ ಮಂಗಳೂರು ವಿಭಾಗೀಯ ನಿಯಂತ್ರಣ ಅಧಿಕಾರಿ ರಾಜೇಶ್ ಶೆಟ್ಟಿ ಅವರು ಉದ್ಘಾಟಿಸುವರು. ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ತುಳು ಜನಪದ ಕಥೆ ಹೇಳುವ ಸ್ಪರ್ಧೆ, ತುಳು ಭಾವಗೀತೆ ಹಾಡುವ ಸ್ಪರ್ಧೆ, ತುಳು ಭಾಷಣ ಸ್ಪರ್ಧೆ, ಜನಪದ ನೃತ್ಯ ಸ್ಪರ್ಧೆಯನ್ನು ಆಯೋಜಿಸಲಾಗಿದೆ ಎಂದು ಅಕಾಡೆಮಿಯ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here