ಬ್ರಹ್ಮಾವರ ಜಾಯಿಂಟ್ಸ್ ಹಾಗೂ ಬ್ರಹ್ಮಾವರದ ಕ್ರಾಸ್ಲ್ಯಾಂಡ್ ಕಾಲೇಜಿನ ಅಧ್ಯಾಪಕರ ಸಹಕಾರದಿಂದ ಪದವಿ ಕಾಲೇಜಿನ ಪ್ರಾರಂಭದ ಮೊದಲನೇ ದಿವಸದ ಪ್ರಯುಕ್ತ ಸೇರ್ಪಡೆಗೊಳ್ಳುವ ಎಲ್ಲಾ ಹೊಸ ವಿದ್ಯಾರ್ಥಿಗಳಿಗೆ ಸಸಿಗಳನ್ನು ವಿತರಿಸಿ ವಿಶೇಷ ರೀತಿಯಾಗಿ ಸ್ವಾಗತಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಾಯಿಂಟ್ಸ್ ಅಧ್ಯಕ್ಷ ಅಣ್ಣಯ್ಯ ದಾಸ್ ವಹಿಸಿದರು. Crossland ಕಾಲೇಜಿನ ಪ್ರಾಂಶುಪಾಲ ಆಗಿರುವ ಡಾಕ್ಟರ್ ರಾಬರ್ಟ್ ಕ್ಲೈವ್ ಇವರು ಪ್ರಸ್ತಾಪ ನುಡಿಗಳನ್ನು ಆಡಿದರು.
ಮಧುಸೂದನ್ ಹೇರೂರು ಜಾಯಿಂಟ್ಸ್ ಫೆಡರೇಶನ್ ಮುಂಬೈ, ಇದರ ಮಾಜಿ ಅಧ್ಯಕ್ಷರು ಮಕ್ಕಳಿಗೆ ಗಿಡಗಳನ್ನು ವಿತರಿಸುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ನೀವೂ ಸಹ ಈ ಗಿಡಗಳಂತೆ ಬೆಳೆದು ಮುಂದೆ ನಮ್ಮ ಈ ಸಮಾಜಕ್ಕೆ ನೆರಳಾಗಿ, ಉಪಕಾರಿಗಳಾಗಿ ಬೆಳೆಯಲು ಹಾರೈಸಿದರು.
ಜಾಯಿಂಟ್ಸ್ ಕಾರ್ಯದರ್ಶಿ ಮಿಲ್ಟನ್ ಒಲಿವೆರಾ, ಸುಂದರ ಪೂಜಾರಿ ಮೂಡುಕುಕ್ಕುಡೆ, ಪ್ರದೀಪ್ ಶೆಟ್ಟಿ, ಶೇಷಗಿರಿ ಭಟ್ ಹಿಂದಿ ಉಪನ್ಯಾಸಕರು, ಬಿಜು ಜೇಕಬ್ ಪ್ರಾಂಶುಪಾಲರು ಸಭೆಯಲ್ಲಿ ಹಾಜರಿದ್ದರು.
ಕನ್ನಡ ಉಪನ್ಯಾಸಕರಾದ ನವೀನ್ ಶೆಟ್ಟಿ ಇವರು ಕಾರ್ಯಕ್ರಮವನ್ನು ನಿರೂಪಿಸಿದರು. ಮೈತಿಲಿ ಶೆಟ್ಟಿ, ಉಪನ್ಯಾಸಕಿ ಇವರು ಧನ್ಯವಾದ ಸಮರ್ಪಿಸಿದರು.
ಸುಮಾರು 65 ಹಣ್ಣು ಹಂಪಲುಗಳ ಗಿಡಗಳನ್ನು ಮಕ್ಕಳಿಗೆ ವಿತರಿಸಲಾಯಿತು.