ಉರುವಾಲು ಶ್ರೀ ಪಂಚಲಿಂಗೇಶ್ವರ ದೇವಸ್ಥಾನ ಕೊರಿಂಜ: ಕುಣಿತಾ ಭಜನೆಗೆ ಚಾಲನೆ

0
112

ಕೊರಿಂಜ: ಉರುವಾಲು ಶ್ರೀ ಪಂಚಲಿಂಗೇಶ್ವರ ದೇವಸ್ಥಾನ ಕೊರಿಂಜ ಇಲ್ಲಿ ಕುಣಿತಾ ಭಜನಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ಕ್ಷೇತ್ರದ ಸಹ ಆಡಳಿತ ಮೋಕ್ತೇಸರರಾದ ಸೇಸಪ್ಪ ರೈ ಕೊರಿಂಜ ಇವರು ಕುಣಿತ ಭಜನೆ ಚಾಲನೆ ನೀಡಿ, ಭಜನೆಯಿಂದ ವಿಭಜನೆ ಇಲ್ಲ ಎಂಬ‌ ನುಡಿಯಂತೆ ಪ್ರತಿಯೊಬ್ಬರು ಕೂಡ ನಮ್ಮ ಧರ್ಮವನ್ನು ಉಳಿಸಲು ಭಜನೆಯಿಂದ ಸಾಧ್ಯವಿದೆ ಎಂದು ಹೇಳಿ ಶುಭ ಹಾರೈಸಿದರು.

ಕುಣಿತ ಭಜನಾ ತರಬೇತಿಯ ಗುರುಗಳಾದ ನಾಗೇಶ ಬಿ‌. ನೆರಿಯ ಇವರು ಪ್ರಾಸ್ತಾವಿಕವಾಗಿ ಮಾತನಾಡಿ, ಇಂದಿನ ಯುಗದಲ್ಲಿ ಭಜನೆಯಿಂದ ನಮ್ಮ ಸಂಸ್ಕೃತಿ, ಸಂಸ್ಕಾರ ಮತ್ತು ಧರ್ಮ ಇವುಗಳನ್ನು ಉಳಿಸಿ ಬೆಳೆಸುವ ಕಾರ್ಯವನ್ನು ಮಾಡುತ್ತಿದೆ. ತಾವೆಲ್ಲರು ಪ್ರತಿದಿನ ಮನೆಗಳಲ್ಲಿ ಭಜನೆಯನ್ನು ಮಾಡಬೇಕೆಂದು ತಿಳಿಸಿದರು. ವೇದಿಕೆಯಲ್ಲಿ ಭಜನಾ ತರಬೇತುದಾರರಾದ ಅಭಿಷೇಕ್, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ನಿವೃತ್ತ ಮೇಲ್ವಿಚಾರಕಿ ವಾರಿಜ ವಿ ಶೆಟ್ಟಿ, ಉಪಸ್ಥಿತರಿದ್ದರು.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಉರುವಾಲು ವಿಭಾಗದ ಸೇವಾ ಪ್ರತಿನಿಧಿ ಸೀತಾರಾಮ ಆಳ್ವ ಕೊರಿಂಜ ಕಾರ್ಯಕ್ರಮದ ನಿರೂಪಣೆ ಹಾಗೂ ವಂದನಾರ್ಪಣೆಯನ್ನು ಮಾಡಿದರು. ಚಿಣ್ಣರ‌ ಬಳಗ ಭಜನಾ ತಂಡದ ಸದಸ್ಯರಾದ ಜ್ಞಾನೇಶ್ ಆಳ್ವ ಕೊರಿಂಜ ಇವರು ಪ್ರಾರ್ಥನೆಯನ್ನು ಮಾಡಿದರು. ಈ‌ಸಂದರ್ಭದಲ್ಲಿ ಸತ್ಯನಾರಾಯಣ ಭಜನಾ ಮಂಡಳಿ ಸದಸ್ಯರಾದ ಗಣೇಶ ಗೌಡ ಬನಾರಿ‌ ಹಾಗೂ ವಿಘ್ನೇಶ್ವರ ಭಜನಾ ಮಂಡಳಿ ಸದಸ್ಯರಾದ ಪ್ರದೀಪ್ ನಾಯ್ಕ ಸಹಕರಿಸಿದರು.

LEAVE A REPLY

Please enter your comment!
Please enter your name here