ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಪತ್ರಿಕಾ ವಿತರಕ

0
90

ಬಂಟ್ವಾಳ : ಪತ್ರಿಕಾ ವಿತರಕರೋರ್ವರು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬಂಟ್ವಾಳ ಬೈಪಾಸ್‌ ಎಂಬಲ್ಲಿ ನಡೆದಿದೆ. ಬಂಟ್ವಾಳ ಬಡ್ಡಕಟ್ಟೆ ದೈವಗುಡ್ಡೆ ನಿವಾಸಿ, ಪ್ರಶಾಂತ್ ಬಾಳಿಗಾ (54) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ.

ಪ್ರಶಾಂತ್ ಬಾಳಿಗಾ ಬಂಟ್ವಾಳ ಪೇಟೆಯಲ್ಲಿ ಚಿರಪರಿಚಿತ ಮತ್ತು ಎಲ್ಲರ ಅಚ್ಚುಮೆಚ್ಚಿನ ವ್ಯಕ್ತಿಯಾಗಿದ್ದರು. ಅನೇಕ ವರ್ಷಗಳಿಂದ ಪೇಪ‌ರ್ ಮತ್ತು ಹಾಲು ವಿತರಕರಾಗಿದ್ದು, ಸಂಜೆ ವೇಳೆ ಪಿಗಿ ಸಂಗ್ರಹಕಾ ವೃತ್ತಿಯನ್ನು ಮಾಡಿಕೊಂಡಿದ್ದರು. ಎಂದಿನಂತೆ ಬೆಳಿಗ್ಗೆ 4 ಗಂಟೆಗೆ ಮನೆಯಿಂದ ಪೇಪ‌ರ್ ಮತ್ತು ಹಾಲನ್ನು ಮನೆಮನೆಗೆ ವಿತರಣೆ ಮಾಡಲು ಹೊರಟವರು ಸ್ವಲ್ಪ ಹೊತ್ತು ಕೆಲ ಮನೆಗಳಿಗೆ ಹಾಲು ಮತ್ತು ಪೇಪರ್ ಹಾಕಿದ್ದಾರೆ.

ರಸ್ತೆ ಬದಿಯಲ್ಲಿ ಪ್ರಶಾಂತ್‌ರ ಬೈಕ್ ಅನಾಥವಾಗಿ ನಿಂತಿರುವುದನ್ನು ಸಾರ್ವಜನಿಕರು ಕಂಡು ಅನುಮಾನಗೊಂಡು ಬಾವಿಯಲ್ಲಿ ನೋಡಿದಾಗ ಮೃತದೇಹ ಪತ್ತೆಯಾಗಿದೆ. ಸ್ಥಳೀಯರು ಬಂಟ್ವಾಳ ನಗರ ಠಾಣಾ ಪೋಲೀಸರಿಗೆ ಮಾಹಿತಿ ನೀಡಿದ್ದಾರೆ. ಸುಮಾರು ಬೆಳಿಗ್ಗೆ 5 ಗಂಟೆಯಿಂದ 8 ಗಂಟೆಯ ನಡುವಿನ ಅವಧಿಯಲ್ಲಿ ಬೈಪಾಸ್ ಬಾವಿಯೊಂದಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ.

ಸ್ಥಳಕ್ಕೆ ಬಂದ ಬಂಟ್ವಾಳ ನಗರ ಪೊಲೀಸ್ ಇನ್ಸೆಕ್ಟರ್ ಆನಂತಪದ್ಮನಾಭ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

LEAVE A REPLY

Please enter your comment!
Please enter your name here