ನಿಟ್ಟೆ : ರಸ್ತೆ ಸುರಕ್ಷತೆಯ ಜಿಲ್ಲಾ ಕಾರ್ಯಕ್ರಮದ ಅಡಿಯಲ್ಲಿ ರೋಟರಿ ಕ್ಲಬ್, ನಿಟ್ಟೆ ವತಿಯಿಂದ ಆಟೋ ರಿಕ್ಷಾ ಚಾಲಕರಿಗಾಗಿ ವಿಶೇಷ ಜಾಗೃತಿ ಕಾರ್ಯಕ್ರಮ 25.09.2025ರಂದು ಯಶಸ್ವಿಯಾಗಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ರೋಟರಿ ಕ್ಲಬ್, ನಿಟ್ಟೆ ಇದರ ಅಧ್ಯಕ್ಷರಾದ ರೊI ಡಾ. ರಘುನಂದನ್ ಕೆ. ಆರ್ ವಹಿಸಿ ಪ್ರಾಸ್ತಾವಿಕವಾಗಿ ಮಾತುಗಳೊಂದಿಗೆ ಸ್ವಾಗತಿಸಿದರು. ಕಾರ್ಕಳ ಪೊಲೀಸ್ ಠಾಣೆಯ ಉಪ ನಿರೀಕ್ಷಕರಾದ ಪ್ರಸನ್ನ ಎಂ. ಎಸ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಅವರು “ರಸ್ತೆ ಸುರಕ್ಷತೆ ಮತ್ತು ಸಂಚಾರ ನಿಯಮಗಳಲ್ಲಿ ಆಟೋ ರಿಕ್ಷಾ ಚಾಲಕರ ಪಾತ್ರ” ಕುರಿತು ಮಾಹಿತಿ ನೀಡಿದರು. ಆಟೋ ರಿಕ್ಷಾ ಚಾಲಕರೊಂದಿಗೆ ವಿಶೇಷ ಸಂವಾದ ಕಾರ್ಯಕ್ರಮವನ್ನು ನಡೆಸಿ ರಸ್ತೆ ಸುರಕ್ಷತೆಯ ಬಗ್ಗೆ ಉಪಯುಕ್ತ ಮಾಹಿತಿಯನ್ನು ತಿಳಿಸಿದರು.
ಕಾರ್ಯಕ್ರಮದಲ್ಲಿ ನಿಟ್ಟೆ ಪರಿಸರದ ರಿಕ್ಷಾ ಚಾಲಕರು, ರೋಟರಿ ಕ್ಲಬ್ ನಿಟ್ಟೆ ಇದರ ಸದಸ್ಯರು, ರೋಟರಿ ಸಮುದಾಯ ದಳ, ಕೆಮ್ಮಣ್ಣು ಇದರ ಸದಸ್ಯರು ಉಪಸ್ಥಿತರಿದ್ದರು. ರಸ್ತೆ ಸುರಕ್ಷತೆಯ ಬಗ್ಗೆ ಮಾಹಿತಿಯನ್ನೊಳಗೊಂಡ ಸ್ಟಿಕರ್ ಅನ್ನು ಆಟೋ ಚಾಲಕರಿಗೆ ವಿತರಣೆ ಮಾಡಲಾಯಿತು. ಕಾರ್ಯಕ್ರಮದ ಕೊನೆಯಲ್ಲಿ ಆಟೋ ಚಾಲಕರ ಸೇವೆಯನ್ನು ಗುರುತಿಸಿ, ಪ್ರತಿಯೋರ್ವ ಚಾಲಕರ ಪರವಾಗಿ ಆಟೋ ರಿಕ್ಷಾ ಮಾಲೀಕರು/ಚಾಲಕರ ಸಂಘದ ಅಧ್ಯಕ್ಷರನ್ನು ಅವರ ಸೇವೆಯನ್ನು ಗುರುತಿಸಿ ಗೌರವಿಸಲಾಯಿತು. ರೋಟರಿ ಕ್ಲಬ್, ನಿಟ್ಟೆ ಇದರ ಕಾರ್ಯದರ್ಶಿ ರೊI ಶೈಲಜಾ ವಿ. ಶೆಟ್ಟಿ ಧನ್ಯವಾದ ಸಲ್ಲಿಸಿದರು. ರೊI ಡಾ. ಪ್ರಶಾಂತ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು.

