ಕನ್ನಡ ಸಾಹಿತ್ಯ ಅಭಿಯಾನ ಉದ್ಘಾಟನೆ ಜೂ.14ರಂದು

0
120

ಕಾಸರಗೋಡು : ನುಳ್ಳಿಪ್ಪಾಡಿಯ ಸೀತಮ್ಮ ಪುರುಷ ನಾಯಕ ಕನ್ನಡ ಭವನ ಮತ್ತು ಗ್ರಂಥಾಲಯದ ಕೇರಳ ರಾಜ್ಯ ಕನ್ನಡ ಚುಟುಕು ಸಾಹಿತ್ಯ ಪರಿಷತ್ತಿನ ಕಾಸರಗೋಡು ಜಿಲ್ಲಾ ಘಟಕದ ಆಶ್ರಯದಲ್ಲಿ ವಿದ್ಯಾರ್ಥಿಗಳಿಗಾಗಿ ನಡೆಯುವ ಏಕದಿನ ಸಾಹಿತ್ಯ ಅಭಿಯಾನವಾದ, ‘ಕನ್ನಡದ ನಡಿಗೆ ಶಾಲೆಯ ಕಡೆಗೆ” ಯೋಜನೆಯ ಉದ್ಘಾಟನೆಯು 2025 ಜೂನ್ 14ರಂದು ಬೆಳಗ್ಗೆ 10ರಿಂದ ದೇಲಂಪಾಡಿ ಸರಕಾರಿ ಪ್ರೌಢಶಾಲೆಯಲ್ಲಿ ನಡೆಯಲಿದೆ. ಯೋಜನೆಯನ್ನು ಹಿರಿಯ ಯಕ್ಷಗಾನ ಗುರುಗಳಾದ ವಿಶ್ವ ವಿನೋದ ಬನಾರಿ ಉದ್ಘಾಟಿಸುವರು. ಸಂಘಟನೆಯ ಕೇಂದ್ರ ಸಮಿತಿಯ ಸ್ಥಾಪಕ ಸಂಚಾಲಕರಾದ ಡಾ. ವಾಮನ್ ರಾವ್ ಬೇಕಲ್ ಅಧ್ಯಕ್ಷತೆ ವಹಿಸುವರು.ದೇಲಂಪಾಡಿ ಸರಕಾರಿ ಪ್ರೌಢ ಶಾಲಾ ಮುಖ್ಯ ಶಿಕ್ಷಕ ಪ್ರಫುಲ್ಲಚಂದ್ರ, ದೇಲಂಪಾಡಿ ಶಾಲೆಯ ಎಸ್. ಎಂ. ಸಿ ಅಧ್ಯಕ್ಷ ಉದಯ ಕುಮಾರ ದೇಲಂಪಾಡಿ, ಸಂಘಟನೆಯ ಕರ್ನಾಟಕ ರಾಜ್ಯ ಸಂಚಾಲಕರಾದ ಪ್ರಾಧ್ಯಾಪಕ ಜಯಾನಂದ ಪೆರಾಜೆ, ಶಿಕ್ಷಕಿ ಡಾ. ಶಾಂತಾ ಪುತ್ತೂರು ಶುಭ ಹಾರೈಸುವರು. ಶಿಬಿರದ ಸಂಪನ್ಮೂಲ ವ್ಯಕ್ತಿಗಳಾಗಿ ಸಾಹಿತಿಗಳಾದ ಶಿಕ್ಷಣ ತಜ್ಞ ವಿ ಬಿ ಕುಳಮರ್ವ, ಸಂಘಟನೆಯ ಜಿಲ್ಲಾಧ್ಯಕ್ಷ ವಿರಾಜ್ ಅಡೂರು ಸಹಕರಿಸುವರು. ಕಾರ್ಯಕ್ರಮದಲ್ಲಿ ಯುವ ಕವಯಿತ್ರಿ ಶ್ವೇತಾ ರಮೇಶ್ ಬೆಳ್ಳಿಪ್ಪಾಡಿ, ಶಿಕ್ಷಕ ಸುನಿಲ್ ಕುಮಾರ ಮಯ್ಯಳ, ನಿವೃತ್ತ ಶಿಕ್ಷಕಿ ಸಂಧ್ಯಾರಾಣಿ ಟೀಚರ್ ಮೊದಲಾದವರು ಭಾಗವಹಿಸುವರು.

LEAVE A REPLY

Please enter your comment!
Please enter your name here