ಏ.10 ರಿಂದ ಟೋಲ್‌ ನಲ್ಲಿ ನಗದು ಪಾವತಿ ಇಲ್ಲ : ಫಾಸ್ಟ್‌ ಟ್ಯಾಗ್, ಯುಪಿಐ ಕಡ್ಡಾಯ.!

0
48

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಹೆದ್ದಾರಿ ಪ್ರಯಾಣವನ್ನು ಸಂಪೂರ್ಣವಾಗಿ ಡಿಜಿಟಲೀಕರಣಗೊಳಿಸಲು ಮುಂದಾಗಿದೆ. ಈ ನಿಟ್ಟಿನಲ್ಲಿ ಏಪ್ರಿಲ್ 10, 2026 ರಿಂದ ಟೋಲ್ ಪ್ಲಾಜಾಗಳಲ್ಲಿ ನಗದು ಹಣ ಪಡೆಯುವುದನ್ನು ನಿಲ್ಲಿಸಲಾಗುವುದು ಎಂದು ಘೋಷಿಸಿದೆ.

ಏಪ್ರಿಲ್ 10 ರಿಂದ ಟೋಲ್ ಕೇಂದ್ರಗಳಲ್ಲಿ ಹಣದ ಮೂಲಕ ಪಾವತಿ ಮಾಡಲು ಅವಕಾಶವಿರುವುದಿಲ್ಲ. ಫಾಸ್ಟ್‌ಟ್ಯಾಗ್ (FASTag) ಪ್ರಾಥಮಿಕ ಪಾವತಿ ವಿಧಾನವಾಗಿರುತ್ತದೆ.

UPI ಮೂಲಕ ಪಾವತಿಗೆ ಅವಕಾಶ: ಫಾಸ್ಟ್‌ಟ್ಯಾಗ್ ಇಲ್ಲದವರಿಗೆ ಯುಪಿಐ (UPI) ಮೂಲಕ ಹಣ ಪಾವತಿಸಲು ಅವಕಾಶವಿದೆ. ಆದರೆ, ಫಾಸ್ಟ್‌ಟ್ಯಾಗ್ ಇಲ್ಲದೆ ಯುಪಿಐ ಮೂಲಕ ಪಾವತಿಸುವವರು ಸಾಮಾನ್ಯ ದರಕ್ಕಿಂತ ಶೇ. 25ರಷ್ಟು ಹೆಚ್ಚಿನ ದಂಡ ಅಥವಾ ಶುಲ್ಕ ಪಾವತಿಸಬೇಕಾಗುತ್ತದೆ.

ಪ್ರವೇಶ ನಿರಾಕರಣೆ: ಫಾಸ್ಟ್‌ಟ್ಯಾಗ್ ಅಥವಾ ಯುಪಿಐ ಮೂಲಕ ಪಾವತಿಸಲು ನಿರಾಕರಿಸುವ ವಾಹನಗಳಿಗೆ ಟೋಲ್ ರಸ್ತೆಗೆ ಪ್ರವೇಶ ನೀಡಲಾಗುವುದಿಲ್ಲ. ಒಂದು ವೇಳೆ ಶುಲ್ಕ ಪಾವತಿಸದೆ ಮುಂದೆ ಹೋದರೆ, ಅಂತಹ ವಾಹನ ಮಾಲೀಕರಿಗೆ ನೋಟಿಸ್ ನೀಡುವುದರ ಜೊತೆಗೆ ದುಪ್ಪಟ್ಟು ದಂಡ ವಿಧಿಸಲಾಗುತ್ತದೆ.

ಗುರುತಿನ ಚೀಟಿಗಳಿಗೆ ರಿಯಾಯಿತಿ ಇಲ್ಲ: ಈ ಮೊದಲು ಸರ್ಕಾರಿ ಗುರುತಿನ ಚೀಟಿಗಳನ್ನು ತೋರಿಸಿ ಖಾಸಗಿ ವಾಹನಗಳಲ್ಲಿ ಟೋಲ್ ವಿನಾಯಿತಿ ಪಡೆಯುವ ಪದ್ಧತಿ ಇತ್ತು. ಇನ್ನು ಮುಂದೆ ಅಂತಹ ಯಾವುದೇ ಅನೌಪಚಾರಿಕ ವಿನಾಯಿತಿಗಳು ಇರುವುದಿಲ್ಲ. ಕೇವಲ ‘ಎಕ್ಸೆಂಪ್ಟೆಡ್ ಫಾಸ್ಟ್‌ಟ್ಯಾಗ್’ (Exempted FASTag) ಹೊಂದಿರುವ ಅರ್ಹ ವಾಹನಗಳಿಗೆ ಮಾತ್ರ ವಿನಾಯಿತಿ ಸಿಗಲಿದೆ.

ಟೋಲ್ ಕೇಂದ್ರಗಳಲ್ಲಿ ವಾಹನಗಳ ಕಾಯುವ ಸಮಯವನ್ನು ಕಡಿಮೆ ಮಾಡುವುದು ಮತ್ತು ಸಂಚಾರವನ್ನು ಸುಗಮಗೊಳಿಸುವುದು ಈ ನಿಯಮದ ಮುಖ್ಯ ಉದ್ದೇಶವಾಗಿದೆ. ಹೆದ್ದಾರಿಯಲ್ಲಿ ಪ್ರಯಾಣಿಸುವವರು ದಂಡದಿಂದ ಪಾರಾಗಲು ಮತ್ತು ಸುಲಭ ಪ್ರಯಾಣಕ್ಕಾಗಿ ತಮ್ಮ ವಾಹನಗಳಿಗೆ ಫಾಸ್ಟ್‌ಟ್ಯಾಗ್ ಅಳವಡಿಸಿಕೊಳ್ಳುವುದು ಹಾಗೂ ಅದನ್ನು ರೀಚಾರ್ಜ್ ಮಾಡಿಕೊಳ್ಳುವುದು ಉತ್ತಮ.

LEAVE A REPLY

Please enter your comment!
Please enter your name here