ಬೇಸಿಗೆ ತಂಪಾಗಿಸಲು ಮನೆಯಲ್ಲೇ ತಯಾರಿಸಿ ರುಚಿಕರ ‘ಮಸಾಲ ಮಜ್ಜಿಗೆ’ – ಸುಲಭ ರೆಸಿಪಿ

0
21

ಬೇಸಿಗೆಯ ಬಿಸಿಲಿನಿಂದ ದೇಹವನ್ನು ತಂಪಾಗಿಸಿಕೊಳ್ಳಲು ನೈಸರ್ಗಿಕ ಪಾನೀಯಗಳ ಮೊರೆ ಹೋಗುವುದು ಉತ್ತಮ. ಅದರಲ್ಲಿ ಮಸಾಲ ಮಜ್ಜಿಗೆ ಒಂದು ಅತ್ಯಂತ ಜನಪ್ರಿಯ ಮತ್ತು ಆರೋಗ್ಯಕರ ಆಯ್ಕೆ. ಇದು ದಾಹ ತಣಿಸುವುದರ ಜೊತೆಗೆ ಜೀರ್ಣಕ್ರಿಯೆಗೂ ಸಹಾಯಕವಾಗಿದೆ.

ಬೇಕಾಗುವ ಸಾಮಗ್ರಿಗಳು :

1 ಕಪ್ ಮೊಸರು, 1 ಟೀ ಚಮಚ ಜೀರಿಗೆ, 1/2 ಟೀ ಚಮಚ ಚಾಟ್ ಮಸಾಲ, 1/2 ಟೀ ಚಮಚ ಕಾಳುಮೆಣಸಿನ ಪುಡಿ, ರುಚಿಗೆ ತಕ್ಕಷ್ಟು ಉಪ್ಪು, ಕೊತ್ತಂಬರಿ ಸೊಪ್ಪು ಮತ್ತು ಪುದೀನಾ ಎಲೆಗಳು, ಅಗತ್ಯವಿರುವಷ್ಟು ನೀರು, ಐಸ್ ಕ್ಯೂಬ್‌ಗಳು.

ತಯಾರಿಸುವ ವಿಧಾನ:

ಮೊದಲಿಗೆ ಒಂದು ಜಾರ್‌ನಲ್ಲಿ ಮೊಸರು, ಜೀರಿಗೆ, ಚಾಟ್ ಮಸಾಲ, ಉಪ್ಪು, ಕಾಳುಮೆಣಸು, ಕೊತ್ತಂಬರಿ ಸೊಪ್ಪು ಮತ್ತು ಪುದೀನಾ ಎಲೆಗಳನ್ನು ಹಾಕಿ. ನಂತರ ಸ್ವಲ್ಪ ನೀರು ಸೇರಿಸಿ ಹ್ಯಾಂಡ್ ಬ್ಲೆಂಡರ್ ಮೂಲಕ ಚೆನ್ನಾಗಿ ಮಿಶ್ರಣ ಮಾಡಿ. ಮಿಶ್ರಣವು ನುರೆಯಂತೆ ಬರುವವರೆಗೆ ಬ್ಲೆಂಡ್ ಮಾಡುವುದು ಉತ್ತಮ.

ನಂತರ ಈ ಮಿಶ್ರಣಕ್ಕೆ ಅಗತ್ಯವಿರುವಷ್ಟು ನೀರು ಸೇರಿಸಿ ಹದ ಮಾಡಿಕೊಂಡು, ಕೊನೆಯಲ್ಲಿ ಐಸ್ ಕ್ಯೂಬ್‌ಗಳನ್ನು ಹಾಕಿ ಚೆನ್ನಾಗಿ ಕಲಕಿ. ಮೇಲೆ ಸ್ವಲ್ಪ ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿದರೆ ತಂಪಾದ ಮಸಾಲ ಮಜ್ಜಿಗೆ ಸವಿಯಲು ಸಿದ್ಧ.

ಈ ಮನೆಮದ್ದಿನ ಪಾನೀಯ ಬೇಸಿಗೆಯಲ್ಲಿ ದೇಹವನ್ನು ತಂಪಾಗಿಸುವ ಜೊತೆಗೆ ಆರೋಗ್ಯಕ್ಕೂ ಉತ್ತಮ ಆಯ್ಕೆಯಾಗಿದೆ.

LEAVE A REPLY

Please enter your comment!
Please enter your name here