ಹೋಲಿ ರೋಸರಿ ಪದವಿಪೂರ್ವ ಕಾಲೇಜಿನಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆ

0
26

ಮೂಡುಬಿದಿರೆ : ಹೋಲಿ ರೋಸರಿ ಪದವಿಪೂರ್ವ ಕಾಲೇಜು ಮೂಡಬಿದ್ರಿ, ಇಲ್ಲಿ 11 ನೆಯ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ನಡೆಸಲಾಯಿತು. ಖ್ಯಾತ ಯೋಗ ತರಬೇತಿದಾರರಾದ ಶ್ರೀಯುತ ಶಂಕರ್ ನಾಯಕ್ ಇವರು ಕಾರ್ಯಕ್ರಮ ಉದ್ಘಾಟಿಸಿದರು. ಜನರಿಗೆ ಬರುವ ಕಾಯಿಲೆಗಳನ್ನು ನಿಯಂತ್ರಿಸಲು ಯೋಗ, ಸರಿಯಾದ ಜೀವನಕ್ರಮ, ಆಹಾರ ಶೈಲಿ ಹೇಗೆ ಸಹಕಾರಿ ಎಂದು ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿ ಕೊಟ್ಟರು. ಜೊತೆಗೆ ಧ್ಯಾನ, ಪ್ರಾಣಯಾಮ ಹಾಗೂ ಯೋಗಾಸನಗಳ ತರಬೇತಿ ನೀಡಿದರು. ಪ್ರಾಂಶುಪಾಲೆ ಶ್ರೀಮತಿ ರಮಾ ಇವರು ಮಾತನಾಡಿ ಯೋಗದ ಮಹತ್ವ ಅರಿತು ಸೂಕ್ತವಾದ ತರಬೇತುದಾರರ ಸಹಾಯಕ ಪಡೆದು ದೈಹಿಕ ಸ್ವಾಸ್ತ್ಯ, ಮನೋನಿಗ್ರಹ ಹೆಚ್ಚಿಸಿ ಉತ್ತಮ ಭವಿಷ್ಯ ರೂಪಿಸುವಂತೆ ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಕನ್ನಡ ಉಪನ್ಯಾಸಕಿ ಶ್ವೇತಾ ಕಾರ್ಯಕ್ರಮ ನಿರೂಪಿಸಿದರು. ಅರ್ಥಶಾಸ್ತ್ರ ಉಪನ್ಯಾಸಕಿ ಜೋಯ್ಲಿನ್ ಅತಿಥಿಗಳನ್ನು ಸಭೆಗೆ ಪರಿಚಯಿಸಿದರು. ಸಮಾಜಶಾಸ್ತ್ರ ಉಪನ್ಯಾಸಕಿ ಸೀಮಾ ಡಿಸೋಜಾ ಇವರು ಧನ್ಯವಾದ ಸಮರ್ಪಿಸಿದರು.

LEAVE A REPLY

Please enter your comment!
Please enter your name here