ವಿಶ್ವ ತುಳುವೆರ್ ಸಂಘಟನೆಯ ವತಿಯಿಂದ ಹೊಸ ಜಿಲ್ಲಾಧಿಕಾರಿಯವರಿಗೆ ಮನವಿ

0
40

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಗೆ ಜಿಲ್ಲಾಧಿಕಾರಿಯಾಗಿ ಇತ್ತೀಚೆಗೆ ಅಧಿಕಾರವನ್ನು ಸ್ವೀಕರಿಸಿರುವ ಶ್ರೀಯುತ ದರ್ಶನ್ H.V (IAS) ರವರನ್ನು ವಿಶ್ವ ತುಳುವೆರ್ ಸಂಘಟನೆ ವತಿಯಿಂದ ತುಳುನಾಡ ಸಮಸ್ತ ಜನತೆಯ ಪರವಾಗಿ ಬೇಟಿಯಾಗಿ ಹೊಸ ಜಿಲ್ಲಾಧಿಕಾರಿಯವರಿಗೆ ಶುಭಾಶಯವನ್ನು ಕೊರಲಾಯಿತು. ತನ್ಮೂಲಕ ಜಿಲ್ಲಾಧಿಕಾರಿಯವರಿಗೆ ಪ್ರಸ್ತುತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆಯುತ್ತಿರುವ ಕೆಲವೊಂದು ಘಟನೆಗಳು ಅದರಲ್ಲೂ ಮುಖ್ಯವಾಗಿ ಶಾಲಾ / ಕಾಲೇಜು ವಿದ್ಯಾರ್ಥಿಗಳು ಹಾಗೂ ಯುವ ಜನತೆಯನ್ನು ಗುರಿಯಾಗಿಸಿ ಮಾದಕ ವ್ಯಸನಗಳಿಗೆ ಪ್ರೇರೇಪಿಸುತ್ತಿರುವ ಕೆಲವೊಂದು ಜಾಲ/ ವ್ಯಕ್ತಿಗಳಿಂದ ಪಾಲಕರ ಮನದಲ್ಲಿ ಹಾಗೂ ತುಳುನಾಡ ಜನತೆಯಲ್ಲಿ ಭಯ ಆತಂಕಕ್ಕೆ ಎಡೆಮಾಡಿರುವುದಲ್ಲದೆ ನಮ್ಮ ತುಳುನಾಡ ಸಂಸ್ಕೃತಿ ಸಂಪ್ರದಾಯ ಹಾಗೂ ಸೌಹರ್ಧತೆಗೆ ಧಕ್ಕೆ ತಂದಿರುವುದು ಕೇದಕರ.

ಈ ನಿಟ್ಟಿನಲ್ಲಿ ಜಿಲ್ಲಾಧಿಕಾರಿಯವರು ಕಠಿಣಾತಿ ಕಠಿಣ ಕಾನೂನಾತ್ಮಕ ಸುಧಾರಣೆಯನ್ನು ಜಾರಿಗೆ ತಂದು ಪಾಲಕರ ಹಾಗೂ ಜನತೆಯ ಮನದಲ್ಲಿ ಆವರಿಸಿರುವ ಆತಂಕವನ್ನು ನಿವಾರಿಸ ಬೇಕಾಗಿ ಧನ್ಯತೆಯ ಮನವಿಯನ್ನು ಮಾಡಲಾಯಿತು. ಈ ಸಂದರ್ಭದಲ್ಲಿ ಅಧ್ಯಕ್ಷರಾದ ದಯಾನಂದ್, ಉಪಾಧ್ಯಕ್ಷರಾದ ಲಯನ್ ಡಾಕ್ಟರ್ ಗಣೇಶ್ ಕುಮಾರ್, ಸೆಕ್ರೆಟರಿ ಪಾರ್ಶ್ವನಾಥ ಆಳ್ವ , ಗಣೇಶ್ ಕುಮಾರ್ ಬಲ್ಲಲ್ಬಾಗ್ ,ಜಾಯಿಂಟ್ ಸೆಕ್ರೆಟರಿ ಸಾಯಿನಾಥ್ , ಪದಾಧಿಕಾರಿಗಳಾದ ವಿಜಯ್‌ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here