ಅ. 31 ಸರ್ದಾರ್ ವಲ್ಲಭಭಾಯಿ ಪಟೇಲ್ ಜನ್ಮದಿನ

0
9


ಸುವಿಶಾಲ, ಅಖಂಡ, ಸದೃಢ ಭಾರತದ ಕನಸುಗಾರ, ಉಕ್ಕಿನ ಮನುಷ್ಯ ಸರದಾರ ವಲ್ಲಭಭಾಯಿ ಪಟೇಲ

ಲೇಖನ ರಾಯಿ ರಾಜ ಕುಮಾರ
ಸರ್ದಾರ್ ವಲ್ಲಭ ಭಾಯಿ ಪಟೇಲ್ (31-10-1875 -15-12-1950) ಭಾರತದ ಪ್ರಪ್ರಥಮ ಉಪ ಪ್ರಧಾನಮಂತ್ರಿಯಾಗಿ ಹಾಗೂ ಗ್ರಹ ಸಚಿವರಾಗಿ ಕಾರ್ಯ ನಿರ್ವಹಿಸಿದವರು. ಸ್ವತಹ ವಕೀಲರು, ರಾಷ್ಟ್ರೀಯ ಕಾಂಗ್ರೆಸ್ನ ಹಿರಿಯ ಮುಖಂಡರು ಆಗಿದ್ದರು. ಸಕ್ರಿಯ ಸ್ವಾತಂತ್ರ್ಯ ಹೋರಾಟಗಾರರು, ಗಣರಾಜ್ಯದ ಸ್ವತಂತ್ರ ರಾಷ್ಟ್ರ ಏಕೀಕರಣದಲ್ಲಿ ಅಖಂಡ, ಸುವಿಶಾಲ, ಸೆಂಟ್ರಟ ಭಾರತದ ಕನಸು ಕಂಡವರು.
ಸರದಾರ ಎಂದರೆ ಮುಖ್ಯವ್ಯಕ್ತಿ. ಇದಕ್ಕೆ ಕಾರಣ 1947ರ ಇಂಡೋ ಪಾಕಿಸ್ತಾನ ಯುದ್ಧದ ಸಂದರ್ಭ ಭಾರತದ ಸೈನ್ಯದ ಕಮಾಂಡರ್ ಇನ್ ಚೀಫ್ ಆಗಿ ಕಾರ್ಯನಿರ್ವಹಿಸಿ ಕೈಗೊಂಡಂತಹ ದೃಢ ಹಾಗೂ ಕಠೋರ ನಿರ್ಧಾರಗಳು. ಇದು ಅವರಿಗೆ ಉಕ್ಕಿನ ಮನುಷ್ಯ ಎಂಬ ಬಿರುದಿಗೆ ಕಾರಣವಾಯಿತು. ಅವರು ಹಲವಾರು ಪ್ರದೇಶದ ರೈತರನ್ನು ಅಹಿಂಸಾತ್ಮಕ, ಅಸಹಕಾರ ಚಳುವಳಿಗಾಗಿ ಸಂಘಟಿಸಿ ಕ್ವಿಟ್ ಇಂಡಿಯಾ ದಂತಹ ಚಳುವಳಿಯನ್ನು ಉತ್ತೇಜಿಸಿದರು.
ಭಾರತ ವಿಭಜನೆಯ ಸಂದರ್ಭದ ಹಿಂಸಾಚಾರದಲ್ಲಿ ನಿರಾಶ್ರಿತರಾದ ಪಂಜಾಬ್ ದೆಹಲಿಯ ಜನರಿಗೆ ಪರಿಹಾರವನ್ನು ಒದಗಿಸಿದರು. ವಿವಿಧ 565 ವಸಾಹತು ಶಾಹಿ ಪ್ರಾಂತ್ಯ ಗಳನ್ನು ಏಕೀಕರಿಸಿ ಸದೃಢ ಭಾರತವನ್ನು ಕಟ್ಟುವ ಕೆಲಸದಲ್ಲಿ ಬಹು ಅಂಶ ಯಶಸ್ವಿಯಾದರು. ಹೆಚ್ಚಿನ ರಾಜಪ್ರಭುತ್ವದ ರಾಜ್ಯಗಳನ್ನು ಭಾರತ ಗಣರಾಜ್ಯಕ್ಕೆ ಸೇರಿಸಿದರು. ಹೀಗಾಗಿ ಅವರನ್ನು ಭಾರತದ ಏಕೀಕರಣದ ನೇತಾರ ಎಂದು ಕರೆಯಲಾಗುತ್ತದೆ.
ಖೇಡಾ, ಬಾರ್ಡೋಲಿ, ಇತ್ಯಾದಿ ಆದೇಶಗಳಲ್ಲಿ ಕ್ಷಮಾ ಆವರಿಸಿದಾಗ ಹಳ್ಳಿಯ ಪ್ರವಾಸ ಮಾಡಿ ತೊಂದರೆಗಳನ್ನು ಸ್ವತಃ ಪರಿಶೀಲಿಸಿ, ಕರ ನಿರಾಕರಣೆಯ ಒಗ್ಗಟ್ಟಿನ ಪರಿಹಾರವನ್ನು ಒದಗಿಸಿದರು. 1919 ರಿಂದ 28ರ ವರೆಗೆ ಅಸ್ಪೃಶ್ಯತೆ, ಮಧ್ಯಪಾನ, ಬಡತನ, ಅಜ್ಞಾನದ ವಿರುದ್ಧ ವ್ಯಾಪಕ ಚಳುವಳಿ ನಡೆಸಿ ಜನರನ್ನು ಒಗ್ಗೂಡಿಸಿದರು. 1922 ರಲ್ಲಿ ಅಹಮದಾಬಾದ್ನ ಮುನ್ಸಿಪಾಲಿಟಿ ಅಧ್ಯಕ್ಷರಾದವು. ತರುವಾಯ ಚರಂಡಿ, ನೈರ್ಮಲ್ಯ, ಶಿಕ್ಷಣ, ವಿದ್ಯುತ್ ಇತ್ಯಾದಿ ವ್ಯವಸ್ಥೆಗಳನ್ನು ಸುಧಾಭಿಸಿದರು. ಇದು ಅವರಿಗೆ ಸರದಾರ ಎಂಬ ಬಿರುದನ್ನು ಒದಗಿಸಿ ಲಕ್ಷಾಂತರ ಜನರ ನೇತಾರರಾಗಲು ಕಾರಣವಾಯಿತು.

LEAVE A REPLY

Please enter your comment!
Please enter your name here