ಕುಶಾಲನಗರ: ಪುರಸಭೆ ಕಾರ್ಯಾಲಯ ಮುಂದೆ ಬಹುದಿನಗಳಿಂದ ದೊಡ್ಡ ಗಾತ್ರದ ಹೊಂಡವೊಂದು ನಿರ್ಮಾತವಾಗಿದ್ದು ಇದರಿಂದ ವಾಹನ ಚಾಲಕರಿಗೆ ಹಾಗೂ ಜನಸಾಮಾನ್ಯರಿಗೆ ತುಂಬಾ ಸಮಸ್ಯೆಯಾಗುತ್ತಿದ್ದು ಕೆಲವು ದಿನಗಳ ಹಿಂದೆ ಸಾರ್ವಜನಿಕರೊಬ್ಬರು ಹೊಂಡದೊಳಗೆ ಬಿದ್ದಿರುವ ಘಟನೆಯೂ ಕೂಡ ನಡೆದಿದೆ. ಅವರನ್ನು ಸ್ಥಳೀಯ ಆಟೋ ಚಾಲಕರು ಆಂಬುಲೆನ್ಸ್ ಸಹಾಯದೊಂದಿಗೆ ಕುಶಾಲನಗರದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.
ಸಾರ್ವಜನಿಕರ ದೂರಿನ ಮೇರೆಗೆ ಎಚ್. ಶಿವರಾಮೇಗೌಡರ ಕ.ರ.ವೇ ಪದಾಧಿಕಾರಿಗಳು ಇಂದು ಪುರಸಭೆಯ ಅಧಿಕಾರಿಗಳನ್ನು ಸ್ಥಳಕ್ಕೆ ಕರೆಸಿ ಅವರಿಗೆ ಮಾಹಿತಿ ನೀಡಿದಾಗ ಒಂದು ವಾರದೊಳಗೆ ಹೊಂಡ ಮುಚ್ಚಿಸುವ ಭರವಸೆ ನೀಡಿದ್ದಾರೆ. ಒಂದು ವಾರದೊಳಗೆ ಸರಿಪಡಿಸದೇ ಇದ್ದರೆ ಪುರಸಭೆಯ ಮುಂದೆ ಉಗ್ರವಾದ ಪ್ರತಿಭಟನೆ ನಡೆಸುವುದಾಗಿ ಕ.ರ.ವೇ.ಪಧಾದಿಕಾರಿಗಳು ಎಚ್ಚರಿಸಿದ್ದಾರೆ.
ಈ ಸಂದರ್ಭದಲ್ಲಿ ಕೆ ಚಂದ್ರು ವಿಧಾನಸಭೆ ಕ್ಷೇತ್ರದ ಅಧ್ಯಕ್ಷರು ,ಜಿಲ್ಲಾ ಗೌರವಾಧ್ಯಕ್ಷರು ನಾಗರಾಜ್ ಕಾವಲ್ ,ಪುಟ್ಟಸ್ವಾಮಿ ತಾಲ್ಲೂಕು ಅಧ್ಯಕ್ಷರು, ಪುಟ್ಟಮ್ಮ ತಾಲ್ಲೂಕು ಗೌರವಾಧ್ಯಕ್ಷರು, ರಂಗಸ್ವಾಮಿ ತಾಲ್ಲೂಕು ಉಪಾಧ್ಯಕ್ಷರು, ತಾಲೂಕು ಕಾರ್ಯದರ್ಶಿ ಶ್ರೀಧರ್ ಶೆಟ್ಟಿ,ಹಬಸಪ್ಪ ವಿಧಾನಸಭಾ ಕ್ಷೇತ್ರದ ಸಲಹೆಗಾರರು,ಪದಾಧಿಕಾರಿಗಳಾದ ಕಾರ್ತಿಕ್,ರಮೇಶ್ ಅವರ್ತಿ, ಮುಂತಾದವರು ಭಾಗವಹಿಸಿದರು.
ವರದಿ: ಪ್ರಿತುನ್ ಪೂವಣ್ಣ

