
ದಾವಣಗೆರೆ : ದಾವಣಗೆರೆಯ ಕಲಾಕುಂಚ ಮತ್ತು ಶ್ರೀ ಗಾಯಿತ್ರಿ ಪರಿವಾರದಿಂದ ಶ್ರೀ ಶಾರದಾ ಶರನ್ನವರಾತ್ಯುತ್ಸವದ ಪರಿವಾಗಿ ಅಕ್ಟೋಬರ್ 20 ರಂದು ಮಂಗಳವಾರ ಸಂಜೆ 5 ಗಂಟೆಗೆ ದಾವಣಗೆರೆಯ ಜಯದೇವ ವೃತ್ತದಲ್ಲಿರುವ ಶ್ರೀ ಶಂಕರ ಮಠದ ಸಭಾಂಗಣದಲ್ಲಿ ಶ್ರೀಮದ್ ಜಗದ್ಗುರು ಶ್ರೀಶ್ರೀಶ್ರೀ ವಿದ್ಯಾಭಿನವ ವಿದ್ಯಾರಣ್ಯ ಭಾರತೀ ಸ್ವಾಮಿಗಳಿಗೆ ಭಕ್ತಿಯಿಂದ, ಆಧ್ಯಾತ್ಮಿಕ ಪರಂಪರೆಯಿಂದ ಗೌರವ ಸಮರ್ಪಣೆ ಮಾಡಲಾಗುವುದು ಎಂದು ಕಲಾಕುಂಚz ಮತ್ತು ಗಾಯತ್ರಿ ಪರಿವಾರದ ಅಧ್ಯಕ್ಷರಾದ ವಾಸುದೇವ ಲಕ್ಷö್ಮಣ್ ರಾಯ್ಕರ್ ವಿನಂತಿಸಿದ್ದಾರೆ.
ದಯವಿಟ್ಟು ಕಲಾಕುಂಚ, ಶ್ರೀ ಗಾಯಿತ್ರಿ ಪರಿವಾರದ ಸರ್ವ ಸದಸ್ಯರು, ಪದಾಧಿಕಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಶ್ರೀ ಗುರುಗಳಿಗೆ ಗೌರವ ಸಮರ್ಪಣೆಯಿಂದ ಸಮಾರಂಭ ಯಶಸ್ವಿಗೊಳಿಸಬೇಕಾಗಿ ಕಲಾಕುಂಚದ ಸಂಸ್ಥಾಪಕರು, ಪರಿವಾರದ ಪ್ರಧಾನ ಕಾರ್ಯದರ್ಶಿ ಸಾಲಿಗ್ರಾಮ ಗಣೇಶ್ ಶೆಣೈ ಮತ್ತು ಕಲಾಕುಂಚದ ಪ್ರಧಾನ ಕಾರ್ಯದರ್ಶಿ ಕೆ.ಸಿ. ಉಮೇಶ್ ವಿನಂತಿಸಿದ್ದಾರೆ.
