ಮಂಗಳೂರು : ಫ್ರೆಂಡ್ಸ್ ಕೋಡಿಕೆರೆ (ರಿ.) ಕೋಡಿಕೆರೆ–ಕುಳಾಯಿ ಇದರ ವತಿಯಿಂದ 2ನೇ ವರ್ಷದ ‘ತುಳುನಾಡ ಮಣ್ಣ ಕಮ್ಮೆನ – ಕಂಡಡೊಂಜಿ ದಿನ’ ಕಾರ್ಯಕ್ರಮವನ್ನು ಮೇ 23ರಂದು ಬೆಳಿಗ್ಗೆ 8-00 ಗಂಟೆಗೆ ನಡೆಯಲಿದೆ. ಕೋಡಿಕೆರೆಯ ಶ್ರೀಯುತ ಭಾಗ್ಯಚಂದ್ರ ಭಟ್ ಅವರ ಮನೆಯ ಸಮೀಪದ ಗದ್ದೆಯಲ್ಲಿ, (ಇಸ್ಕಾನ್ ದೇವಸ್ಥಾನದ ಬಳಿ) ನಡೆಯಲಿದೆ.
ಸಭಾ ಕಾರ್ಯಕ್ರಮವನ್ನು ಶ್ರೀ ಕ್ಷೇತ್ರ ಚಿತ್ರಾಪುರ ದೇವಸ್ಥಾನ ಮತ್ತು ಶ್ರೀ ಚಿತ್ರಾಪುರ ಮಠದ ಶ್ರೀ ಶ್ರೀ ಶ್ರೀ ವಿದ್ಯೇಂದ್ರ ತೀರ್ಥ ಶ್ರೀಪಾದರು ದೀಪ ಪ್ರಜ್ವಲನೆ ಮಾಡಿ ನೆರವೇರಿಸಲಿದ್ದಾರೆ.
ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕರಾದ ಡಾ. ವೈ. ಭರತ್ ಶೆಟ್ಟಿ ಅವರ ಘನ ಉಪಸ್ಥಿತಿಯಲ್ಲಿ ಕಾರ್ಯಕ್ರಮ ನಡೆಯಲಿದ್ದು, MRPL-ONGCನ ಮುಖ್ಯ ವ್ಯವಸ್ಥಾಪಕ ವಸಂತ್ ಕುಲಾಲ್ ಮೈಂದಗುರಿ ಅವರು ಸಭಾಧ್ಯಕ್ಷತೆ ವಹಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ಧರ್ಮೇಂದ್ರ ಗಣೇಶಪುರ, ಜಯರಾಮ್ ಶೆಟ್ಟಿ ಗುತ್ತಿನಾರ್, ಸುರೇಶ್ ಕೊಟ್ಟಾರಿ, ಮಾಧವ ಸುವರ್ಣ, ರಮೇಶ್ ರಾವ್, ಭಾಸ್ಕರ್ ಶೆಟ್ಟಿ ಪಡುಮನೆ ಚಿಕ್ಕಪರಾರಿ, ರಾಜೇಂದ್ರ ನಾಯರ್, ಸುಧೀರ್ ಕುಮಾರ್, ವಿಜಯ ಅಮೀನ್, ಮಾಜಿ ಮೇಯರ್ ಗಣೇಶ್ ಹೊಸಬೆಟ್ಟು, ಜಗದೀಶ್ ಶೆಟ್ಟಿ, ಕವಿತಾ ಶೆಟ್ಟಿ, ಮಾಜಿ ಉಪಮೇಯರ್ ವೇದಾವತಿ, ನಿಕಟಪೂರ್ವ ಕಾರ್ಪೋರೇಟರ್ ವರುಣ್ ಚೌಟ, ಬಾಲಕೃಷ್ಣ ಶೆಟ್ಟಿ, ರಂಜಿತ್ ಜೆ. ಶೆಟ್ಟಿ, ನಾಗೇಶ್ ಪೂಜಾರಿ, ಗಂಗಾಧರ್ ಶೆಟ್ಟಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿರಲಿದ್ದಾರೆ.
ಕಾರ್ಯಕ್ರಮದಲ್ಲಿ ಶ್ರೀ ಮಹಾಗಣಪತಿ ದೇವಸ್ಥಾನ ಗಣೇಶಪುರ ಕೈಕಂಬದ ನಿಕಟಪೂರ್ವ ಅಧ್ಯಕ್ಷರಾದ ಶ್ರೀ ಧರ್ಮೇಂದ್ರ ಗಣೇಶಪುರ, ಕುಡುಂಬೂರು ಗುತ್ತು ಕನಿಲದ ಅನುವಂಶಿಕ ಆಡಳಿತ ಮೊಕ್ತೇಸರರಾದ ಜಯರಾಮ್ ಶೆಟ್ಟಿ ಗುತ್ತಿನಾರ್, ಪುರಾತನ ಕೋಟೆದ ಬಬ್ಬು ದೈವಸ್ಥಾನ ಕುಳಾಯಿಯ ಅಧ್ಯಕ್ಷರಾದ ಸುರೇಶ್ ಕೊಟ್ಟಾರಿ, ರಾಮನಗರ ತೋಕೂರಿನ ಕೊರಗಜ್ಜ ಸನ್ನಿಧಿಯ ಧರ್ಮದರ್ಶಿಗಳಾದ ಮಾಧವ ಸುವರ್ಣ ಭಾಗವಹಿಸಲಿದ್ದಾರೆ.
ಹಿಂದೂ ಅನುದಾನಿತ ಪ್ರಾಥಮಿಕ ಶಾಲೆ ಪೆರ್ಮುದೆ ಕೋಡಿಕೆರೆಯ ಸ್ಥಾಪಕರಾದ ರಮೇಶ್ ರಾವ್, ತೋಕೂರು–ಕುಳಾಯಿ ಸಮುದಾಯ ಭವನದ ಅಧ್ಯಕ್ಷರಾದ ಭಾಸ್ಕರ್ ಶೆಟ್ಟಿ ಪಡುಮನೆ ಚಿಕ್ಕಪರಾರಿ, ಬಿಜೆಪಿ ಅನ್ಯಭಾಷಾ ಪ್ರಕೋಷ್ಠ ಮಂಗಳೂರು ಉತ್ತರದ ರಾಜೇಂದ್ರ ನಾಯರ್, ದೀಕ್ಷಾ ಟ್ರಾವೆಲ್ಸ್ ಕುಳಾಯಿಯ ಸುಧೀರ್ ಕುಮಾರ್, PWD ಸಿವಿಲ್ ಕಾಂಟ್ರಾಕ್ಟರ್ ವಿಜಯ ಅಮೀನ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿರಲಿದ್ದಾರೆ.
ಮಾಜಿ ಮೇಯರ್ ಗಣೇಶ್ ಹೊಸಬೆಟ್ಟು, ಮಂಚಕಲ್ ಶಿರ್ವದ ಜಗದೀಶ್ ಶೆಟ್ಟಿ ಮತ್ತು ಕವಿತಾ ಶೆಟ್ಟಿ, ಮಾಜಿ ಉಪಮೇಯರ್ ಹಾಗೂ ನಿಕಟಪೂರ್ವ ಕಾರ್ಪೋರೇಟರ್,9 ನೇ ವಾರ್ಡ್ ಕುಳಾಯಿ ವೇದಾವತಿ, 8ನೇ ವಾರ್ಡ್ ಹೊಸಬೆಟ್ಟಿನ ನಿಕಟಪೂರ್ವ ಕಾರ್ಪೋರೇಟರ್ ವರುಣ್ ಚೌಟ, ಕುಡುಂಬೂರು ಬಿಜೆಪಿ ಬೂತ್ ಅಧ್ಯಕ್ಷರಾದ ಬಾಲಕೃಷ್ಣ ಶೆಟ್ಟಿ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಅದೇ ರೀತಿ ಮಂಜಣ್ಣ ಸೇವಾ ಬಿಗ್ರೇಡ್ ಟ್ರಸ್ಟ್ (ರಿ.) ಮಂಗಳೂರಿನ ಅಧ್ಯಕ್ಷರಾದ ರಂಜಿತ್ ಜೆ. ಶೆಟ್ಟಿ, ಗೆಳೆಯರ ಬಳಗ ಸುರತ್ಕಲ್ ಮಂಗಳೂರಿನ ಸ್ಥಾಪಕಾಧ್ಯಕ್ಷರಾದ ನಾಗೇಶ್ ಪೂಜಾರಿ, ಮಂಜಣ್ಣ ಸೇವಾ ಬಿಗ್ರೇಡ್ ಟ್ರಸ್ಟ್ (ರಿ.) ಮಂಗಳೂರಿನ ಕಾರ್ಯದರ್ಶಿ ಗಂಗಾಧರ್ ಶೆಟ್ಟಿ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳ ಪ್ರಮುಖರು ಕಾರ್ಯಕ್ರಮಕ್ಕೆ ಆಗಮಿಸಲಿದ್ದಾರೆ.
‘ಕೆಸರ್‌ದ ಕಂಡದ ಗೊಬ್ಬುಲು’ ಹೆಸರಿನಲ್ಲಿ ವಿವಿಧ ವಯೋಮಾನದವರಿಗೆ ಹಾಗೂ ಸಾರ್ವಜನಿಕರಿಗೆ ಹಲವು ಸಾಂಪ್ರದಾಯಿಕ ಕ್ರೀಡಾ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಮಕ್ಕಳಿಂದ ಹಿಡಿದು ವಯಸ್ಕರವರೆಗೆ ಎಲ್ಲರೂ ಭಾಗವಹಿಸುವ ಅವಕಾಶ ಕಲ್ಪಿಸಲಾಗಿದೆ.
ನಿಧಿ ಹುಡುಕುವುದು: ಸಾರ್ವಜನಿಕರಿಗಾಗಿ ಆಯೋಜಿಸಲಾಗಿರುವ ಈ ವಿನೂತನ ಸ್ಪರ್ಧೆಯಲ್ಲಿ ಭಾಗವಹಿಸುವವರು ಮಣ್ಣಿನ ಗದ್ದೆಯಲ್ಲಿ ಅಡಗಿಸಲಾಗಿರುವ ನಿಧಿಯನ್ನು ಹುಡುಕಿ ಹೊರತೆಗೆಯುವ ಮೂಲಕ ತಮ್ಮ ಚುರುಕುತನ ಮತ್ತು ಕೌಶಲ್ಯವನ್ನು ಪ್ರದರ್ಶಿಸಲಿದ್ದಾರೆ.
ಬಲಿಪುನ ಪಂಥ (ಓಟದ ಸ್ಪರ್ಧೆ) ಮತ್ತು ಬೊಲ್ ಪಾಸಿಂಗ್ : ಕೆ.ಜಿ. ತರಗತಿ ಹಾಗೂ 1 ಮತ್ತು 2ನೇ ತರಗತಿಯ ವಿದ್ಯಾರ್ಥಿಗಳಿಗಾಗಿ ಹುಡುಗರು ಮತ್ತು ಹುಡುಗಿಯರಿಗೆ ಪ್ರತ್ಯೇಕವಾಗಿ ಬಲಿಪುನ ಪಂಥ (ಓಟದ ಸ್ಪರ್ಧೆ) ಹಾಗೂ ಬೊಲ್ ಪಾಸಿಂಗ್ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ.
3, 4 ಮತ್ತು 5ನೇ ತರಗತಿ: ಈ ವಿಭಾಗದ ವಿದ್ಯಾರ್ಥಿಗಳಿಗಾಗಿ 100 ಮೀಟರ್ ಬಲಿಪುನ ಪಂಥ (ಓಟದ ಸ್ಪರ್ಧೆ) ಆಯೋಜಿಸಲಾಗಿದ್ದು, ಹುಡುಗರು ಮತ್ತು ಹುಡುಗಿಯರಿಗೆ ಪ್ರತ್ಯೇಕವಾಗಿ ಸ್ಪರ್ಧೆ ನಡೆಯಲಿದೆ.
6, 7 ಮತ್ತು 8ನೇ ತರಗತಿ: ಈ ವಿಭಾಗದ ವಿದ್ಯಾರ್ಥಿಗಳಿಗಾಗಿ 100 ಮೀಟರ್ ಬಲಿಪುನ ಪಂಥ (ಓಟದ ಸ್ಪರ್ಧೆ) ಆಯೋಜಿಸಲಾಗಿದ್ದು, ಹುಡುಗರು ಮತ್ತು ಹುಡುಗಿಯರಿಗೆ ಪ್ರತ್ಯೇಕವಾಗಿ ಸ್ಪರ್ಧೆ ನಡೆಯಲಿದೆ.
9, 10ನೇ ತರಗತಿ ಹಾಗೂ 1 st ಪಿಯುಸಿ : ಈ ವಿಭಾಗದ ವಿದ್ಯಾರ್ಥಿಗಳಿಗಾಗಿ 100 ಮೀಟರ್ ಬಲಿಪುನ ಪಂಥ (ಓಟದ ಸ್ಪರ್ಧೆ) ಆಯೋಜಿಸಲಾಗಿದ್ದು, ಹುಡುಗರು ಮತ್ತು ಹುಡುಗಿಯರಿಗೆ ಪ್ರತ್ಯೇಕವಾಗಿ ಸ್ಪರ್ಧೆ ನಡೆಯಲಿದೆ.
ಸಾರ್ವಜನಿಕರಿಗೆ 100 ಮೀಟರ್ ಓಟ: ಸಾರ್ವಜನಿಕರಿಗಾಗಿ 100 ಮೀಟರ್ ಓಟದ ಸ್ಪರ್ಧೆಯನ್ನು ಪುರುಷರು ಮತ್ತು ಮಹಿಳೆಯರಿಗೆ ಪ್ರತ್ಯೇಕ ವಿಭಾಗಗಳಲ್ಲಿ ಆಯೋಜಿಸಲಾಗಿದೆ.
2nd ಪಿಯುಸಿ ಹಾಗೂ ಪದವಿ ವಿದ್ಯಾರ್ಥಿಗಳಿಗೆ: ಈ ವಿಭಾಗದಲ್ಲಿ ‘ಗಿರ್ ಗಿರ್ ಮಂಡಲ ಬಲಿಪುನ ಪಂಥ’ (ಓಟದ ಸ್ಪರ್ಧೆ) ಆಯೋಜಿಸಲಾಗಿದ್ದು, ಹುಡುಗರು ಮತ್ತು ಹುಡುಗಿಯರಿಗೆ ಪ್ರತ್ಯೇಕವಾಗಿ ಸ್ಪರ್ಧೆ ನಡೆಯಲಿದೆ.
ಸಾರ್ವಜನಿಕರಿಗಾಗಿ ಕ್ರೀಡಾ ಸ್ಪರ್ಧೆಗಳು
1) ಪಿರ ಬಲಿಪುನ ಪಂಥ (ಹಿಮ್ಮುಖ ಓಟ):
ಸಾರ್ವಜನಿಕರಿಗಾಗಿ ಆಯೋಜಿಸಲಾಗಿರುವ ಈ ವಿಶಿಷ್ಟ ಸ್ಪರ್ಧೆಯಲ್ಲಿ ಪುರುಷರು ಮತ್ತು ಮಹಿಳೆಯರು ಪ್ರತ್ಯೇಕವಾಗಿ ಭಾಗವಹಿಸಬಹುದು.
2) ಕೊಡಪಾನೊಡು ನೀರು ಕೊನಪುನ ಪಂಥ (ಕೊಡಪಾನದಲ್ಲಿ ನೀರು ಕೊಂಡೊಯ್ಯುವ ಸ್ಪರ್ಧೆ):
ತುಳುನಾಡಿನ ಗ್ರಾಮೀಣ ಸಂಸ್ಕೃತಿಯ ಸೊಗಡನ್ನು ಪ್ರತಿಬಿಂಬಿಸುವ ಈ ಸ್ಪರ್ಧೆಯಲ್ಲಿ 3, 7 ಮತ್ತು 8ನೇ ತರಗತಿಯ ವಿದ್ಯಾರ್ಥಿನಿಯರು, 9, 10ನೇ ತರಗತಿ ಹಾಗೂ 1ನೇ ಪಿಯುಸಿ ವಿದ್ಯಾರ್ಥಿನಿಯರು ಭಾಗವಹಿಸಬಹುದು. ಇದೇ ಸ್ಪರ್ಧೆಯಲ್ಲಿ ಸಾರ್ವಜನಿಕ ಪುರುಷರು ಮತ್ತು ಮಹಿಳೆಯರಿಗೂ ಪ್ರತ್ಯೇಕ ವಿಭಾಗವಿದ್ದು, ಕೊಡಪಾನದಲ್ಲಿ ನೀರನ್ನು ಸುರಿಯದಂತೆ ಕೊಂಡೊಯ್ದು ನಿಗದಿತ ಸ್ಥಳ ತಲುಪಿಸುವ ಮೂಲಕ ಸ್ಪರ್ಧಿಗಳು ತಮ್ಮ ಚುರುಕುತನ ಮತ್ತು ಸಮತೋಲನವನ್ನು ಪ್ರದರ್ಶಿಸಲಿದ್ದಾರೆ.
IV. ಉಪ್ಪು ತುಂಬುನ ಪಂಥ (ಉಪ್ಪು ತುಂಬುವ ಸ್ಪರ್ಧೆ)
1) 8, 9 ಮತ್ತು 10ನೇ ತರಗತಿ ಹುಡುಗರಿಗೆ:
ವಿದ್ಯಾರ್ಥಿಗಳಿಗಾಗಿ ಆಯೋಜಿಸಿರುವ ಈ ಸಾಂಪ್ರದಾಯಿಕ ಸ್ಪರ್ಧೆಯಲ್ಲಿ 8, 9 ಮತ್ತು 10ನೇ ತರಗತಿಯ ಹುಡುಗರು ಭಾಗವಹಿಸಬಹುದು.
2) ಸಾರ್ವಜನಿಕ ಪುರುಷರಿಗೆ:
ಸಾರ್ವಜನಿಕ ಪುರುಷರಿಗಾಗಿ ಪ್ರತ್ಯೇಕವಾಗಿ ಉಪ್ಪು ತುಂಬುನ ಪಂಥ ಸ್ಪರ್ಧೆ ನಡೆಯಲಿದೆ.
V. ಪಾಲೆ ಬಂಡಿ ಪಂಥ
1) 8, 9 ಮತ್ತು 10ನೇ ತರಗತಿ:
8, 9 ಮತ್ತು 10ನೇ ತರಗತಿಯ ವಿದ್ಯಾರ್ಥಿಗಳಿಗಾಗಿ ಪಾಲೆ ಬಂಡಿ ಪಂಥ ಆಯೋಜಿಸಲಾಗಿದ್ದು, ಹುಡುಗರು ಮತ್ತು ಹುಡುಗಿಯರಿಗೆ ಪ್ರತ್ಯೇಕವಾಗಿ ಸ್ಪರ್ಧೆ ನಡೆಯಲಿದೆ.
2) ಸಾರ್ವಜನಿಕರಿಗೆ:
ಸಾರ್ವಜನಿಕ ಪುರುಷರು ಹಾಗೂ ಮಹಿಳೆಯರಿಗಾಗಿ ಪ್ರತ್ಯೇಕವಾಗಿ ಪಾಲೆ ಬಂಡಿ ಪಂಥ ಸ್ಪರ್ಧೆ ನಡೆಯಲಿದೆ. ಆಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ತಮ್ಮ ಕ್ರೀಡಾ ಕೌಶಲ್ಯ ಹಾಗೂ ಚುರುಕುತನವನ್ನು ಪ್ರದರ್ಶಿಸಬಹುದಾಗಿದೆ.
3) ಕಂಡನೆ + ಬೊಡೆದಿ ತುಂಬೊಂದು ಬಲಿಪುನ ಪಂಥ:
ಸಾರ್ವಜನಿಕರಿಗಾಗಿ ವಿಶೇಷವಾಗಿ ಆಯೋಜಿಸಲಾಗಿರುವ ಈ ಗಂಡ-ಹೆಂಡತಿಯನ್ನು ಎತ್ತಿಕೊಂಡು ಓಡುವ ಸ್ಪರ್ಧೆ ನಡೆಯಲಿದೆ.
VI. ಚೆಂಡು ಆಟ
10ನೇ ತರಗತಿಯವರೆಗಿನ ಹುಡುಗರಿಗೆ: 10ನೇ ತರಗತಿಯವರೆಗಿನ ಹುಡುಗರಿಗಾಗಿ ಚೆಂಡು ಆಟದ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ಸಾರ್ವಜನಿಕ ಪುರುಷರಿಗಾಗಿ ಪ್ರತ್ಯೇಕ ಚೆಂಡು ಆಟದ ಸ್ಪರ್ಧೆ ನಡೆಯಲಿದೆ.
VII. ಕರ ದರ್ಪುನ ಪಂಥ (ಮಡಕೆ ಒಡೆಯುವ ಸ್ಪರ್ಧೆ)
5ರಿಂದ 10ನೇ ತರಗತಿಯ ಹುಡುಗಿಯರಿಗೆ:
5ರಿಂದ 10ನೇ ತರಗತಿಯ ಹುಡುಗಿಯರಿಗಾಗಿ ಕರ ದರ್ಪುನ ಪಂಥ (ಮಡಕೆ ಒಡೆಯುವ ಸ್ಪರ್ಧೆ) ಆಯೋಜಿಸಲಾಗಿದೆ. ಸಾರ್ವಜನಿಕ ಮಹಿಳೆಯರಿಗೂ ಪ್ರತ್ಯೇಕವಾಗಿ ಮಡಕೆ ಒಡೆಯುವ ಸ್ಪರ್ಧೆ ನಡೆಯಲಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಸಂಘಟಕರು ಮನವಿ ಮಾಡಿದ್ದಾರೆ.
VIII. ನೃತ್ಯ ಸ್ಪರ್ಧೆ ಮತ್ತು ಮೂರು ಕಾಲಿನ ಓಟ
1) ಕೆಸರು ಗದ್ದೆಯಲ್ಲಿ ತುಳು ಸಮೂಹ ನೃತ್ಯ: ಸಾರ್ವಜನಿಕರಿಗಾಗಿ ಕೆಸರು ಗದ್ದೆಯಲ್ಲಿ ತುಳು ಹಾಡಿಗೆ ಸಮೂಹ ನೃತ್ಯ ಸ್ಪರ್ಧೆ ಆಯೋಜಿಸಲಾಗಿದೆ. ಪ್ರತಿ ತಂಡದಲ್ಲಿ 5 ಮಂದಿ ಇರಬೇಕು ಹಾಗೂ ಪ್ರತಿ ತಂಡಕ್ಕೆ 3 ನಿಮಿಷಗಳ ಸಮಯಾವಕಾಶ ನೀಡಲಾಗುತ್ತದೆ. ತುಳು ಸಂಸ್ಕೃತಿ ಮತ್ತು ಕಲೆಯನ್ನು ವಿಭಿನ್ನ ರೀತಿಯಲ್ಲಿ ಅನಾವರಣಗೊಳಿಸಲು ಈ ಸ್ಪರ್ಧೆ ವೇದಿಕೆಯಾಗಲಿದೆ.
2) 3 ಕಾರ್‌ದ ಓಟ (ಮೂರು ಕಾಲಿನ ಓಟ):
ಪುರುಷರು ಮತ್ತು ಮಹಿಳೆಯರಿಗಾಗಿ ಪ್ರತ್ಯೇಕವಾಗಿ ಮೂರು ಕಾಲಿನ ಓಟದ ಸ್ಪರ್ಧೆ ಆಯೋಜಿಸಲಾಗಿದ್ದು, ಸ್ಪರ್ಧಿಗಳ ಪರಸ್ಪರ ಸಮನ್ವಯ, ವೇಗ ಮತ್ತು ಚುರುಕುತನವನ್ನು ಪರೀಕ್ಷಿಸಲಿದೆ.
IX. ಹಗ್ಗ ಜಗ್ಗಾಟ ಸ್ಪರ್ಧೆ
ಸ್ಥಳೀಯರಿಗೆ ಮಾತ್ರ ಸೀಮಿತವಾಗಿರುವ ಹಗ್ಗ ಜಗ್ಗಾಟ ಸ್ಪರ್ಧೆಯಲ್ಲಿ 9+1 ಮಂದಿ ಸದಸ್ಯರ ತಂಡಗಳು ಭಾಗವಹಿಸಬಹುದು. ತಂಡದ ಒಗ್ಗಟ್ಟು, ಶಕ್ತಿ ಹಾಗೂ ಸಮನ್ವಯವನ್ನು ಪ್ರದರ್ಶಿಸುವ ಈ ಸ್ಪರ್ಧೆ ಕ್ರೀಡಾಕೂಟದ ಪ್ರಮುಖ ಆಕರ್ಷಣೆಯಾಗಲಿದೆ.
X. ಅಟ್ಟಿಕಟ್ಟುನ ಪಂಥ (ಪಿರಮಿಡ್ ಆಟ)
ಸಾರ್ವಜನಿಕ ಪುರುಷರಿಗಾಗಿ ಅಟ್ಟಿಕಟ್ಟುನ ಪಂಥ (ಪಿರಮಿಡ್ ಆಟ) ಆಯೋಜಿಸಲಾಗಿದೆ. ಸ್ಥಳೀಯರಿಗೆ ಮಾತ್ರ ಸೀಮಿತವಾಗಿರುವ ಈ ಸ್ಪರ್ಧೆಯಲ್ಲಿ 11+1 ಮಂದಿ ಸದಸ್ಯರ ತಂಡಗಳು ಭಾಗವಹಿಸಬಹುದು. ಪ್ರತಿ ತಂಡಕ್ಕೆ 3 ನಿಮಿಷಗಳ ಕಾಲಾವಕಾಶ ನೀಡಲಾಗಿದೆ.
ಸಮಾರೋಪ ಸಮಾರಂಭವು ಸಂಜೆ 6 ಗಂಟೆಗೆ ನಡೆಯಲಿದೆ.
ಹೆಚ್ಚಿನ ಮಾಹಿತಿಗಾಗಿ :
📞 8746996124
📞 9380923702
.

