ಮಕ್ಕಳಿಗೆ ತುಳುವನ್ನು ಎಳವೆಯಲ್ಲಿ ಕಲಿಸಿದರಷ್ಟೇ ಆ ಭಾಷೆ ಸಂಸ್ಕೃತಿ ಉಳಿಯಬಲ್ಲದು: ಪೂರ್ಣಿಮಾ

0
147

ಉಡುಪಿ: ಮಕ್ಕಳಿಗೆ ತುಳುವನ್ನು ಎಳವೆಯಲ್ಲಿ ಕಲಿಸಿದರಷ್ಟೇ ಆ ಭಾಷೆ ಸಂಸ್ಕೃತಿ ಉಳಿಯಬಲ್ಲದು ಎಂದು ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಹೇಳಿದರು.

ಅವರು ಭಾನುವಾರ ಉಡುಪಿ ತುಳುಕೂಟದ 30 ನೇ ವರ್ಷದ ‘ಪಣಿಯಾಡಿ ತುಳು ಕಾದಂಬರಿ ಪ್ರಶಸ್ತಿ’ ಸಮಾರಂಭದ ಮುಖ್ಯ ಅತಿಥಿಯಾಗಿ ಮಾತನಾಡಿ ಮಕ್ಕಳಿಗೆ ಉಪದೇಶ ಮಾಡುವುದಕ್ಕಿಂತ ಅವರಿಗೆ ಅವಕಾಶಗಳನ್ನು ಒದಗಿಸಿ ಕೊಡಬೇಕು, ಈ ನಿಟ್ಟಿನಲ್ಲಿ ಎಸ್.ಎಸ್..ಎಲ್.ಸಿ.ಯಲ್ಲಿ ತುಳು ಅವಕಾಶ ಮಾಡಿಕೊಡುತ್ತಿರುವುದು ಆಶಾದಾಯಕ ವಾಗಿದೆ. ಮಕ್ಕಳು ತುಳು ಭಾಷೆಯ ಅಧ್ಯಯನ, ಬಳಕೆ ಕೇವಲ ಪರೀಕ್ಷೆಗಷ್ಟೇ ಸೀಮಿತಗೊ ಮುಂದಿನ ಜೀವನದಲ್ಲಿಯೂ ಮುಂದುವರಿಸಬೇಕು ಎಂದರು.

ತುಳುನಾಡು, ತುಳುಭಾಷೆ, ಸಾಹಿತ್ಯ, ಸಂಸ್ಕೃತಿ ಇತ್ಯಾದಿಗಳ ಉನ್ನತಿಗಾಗಿ ಕಳೆದ 40 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಸಂಸ್ಥೆ ಉಡುಪಿಯ “ತುಳು ಕೂಟ (ರಿ)”. ತುಳುನಾಡಿನಲ್ಲಿ ತುಳು ಚಳುವಳಿಯನ್ನು ಪ್ರಾರಂಭಿಸಿದವರು, ತುಳು ಸಾಹಿತ್ಯವನ್ನು ಬೆಳೆಸಲು ಪ್ರೋತ್ಸಾಹ ನೀಡಿದವರು – ತುಳುನಾಡ್ ಪ್ರೆಸ್, ತುಳು ಸಾಹಿತ್ಯಮಾಲೆ, ತುಳು ಕಾದಂಬರಿ, ತುಳು ವ್ಯಾಕರಣ ರಚನೆ ಮೊದಲಾದ ಅನೇಕ ಕೆಲಸಗಳನ್ನು ಮಾಡಿದವರು, ಸ್ವದೇಶಿ ಚಳುವಳಿಯಲ್ಲಿ ಭಾಗವಹಿಸಿ – ತುಳುನಾಡ್ ಬ್ಯಾಂಕ್ ಹಾಗೂ ತುಳು ಚಳುವಳಿ ಪ್ರಾರಂಭಿಸಿದವರು, ದಕ್ಷಿಣ ಕನ್ನಡ ಜಿಲ್ಲೆಯನ್ನು ತುಳುನಾಡು ಅಂತ ಕರೀಬೇಕು. ಅಲ್ಲಿ ತುಳು ಭಾಷೆಯನ್ನು ಕಲಿಸುವ ಶಾಲೆ ಆರಂಭ ಆಗಬೇಕು ಹಾಗೂ , ತುಳು ಭಾಷೆಯಲ್ಲಿಯೇ ಪುಸ್ತಕಗಳನ್ನು ಪ್ರಕಟವಾಗಬೇಕು, ತುಳುವನ್ನು ಆಡಳಿತ ಭಾಷೆಯಾಗಿ ಪರಿಗಣಿಸಬೇಕು ಎಂದು 1923 ರಲ್ಲೇ ಕನಸ ಕಟ್ಟಿದವರು – ಪಣಿಯಾಡಿ ಶ್ರೀನಿವಾಸ ಉಪಾಧ್ಯಾಯರು.

ಮುಂಬಯಿಯ ಸಾಹಿತಿ ಶಾರದಾ ಎಂ.ಅಂಚನ್ ಕೊಡವೂರು ಅವರ ‘ಅಕೇರಿದ ಎಕ್ಕ್‌’ ಕಾದಂಬರಿಗೆ ಈ ಬಾರಿಯ ಪಣಿಯಾಡಿ ಪ್ರಶಸ್ತಿಯನ್ನು ಮಾಡಲಾಯಿತು. ಸಾಹಿತಿ ಸುಲೋಚನಾ ಜನಾರ್ಧನ್ ಪಚ್ಚಿನಡ್ಕ ಅವರು ಪ್ರಶಸ್ತಿ ಪುರಸ್ಕೃತ ಕಾದಂಬರಿಯನ್ನು ಪರಿಚಯಿಸಿದರು. ಇದೇ ಸಂಧರ್ಭದಲ್ಲಿ ಈ ಬಾರಿಯ ಎಸ್‌ಎಸ್‌ಎಲ್ಸಿ ಪರೀಕ್ಷೆಯ ತುಳುಪಠ್ಯದಲ್ಲಿ ಶೇ100 ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು.

ತುಳುಕೂಟದ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ ಸಭೆಯ ಅಧ್ಯಕ್ಷತೆ ವಹಿಸಿದ್ದರು, ಮುಖ್ಯ ಅತಿಥಿಗಳಾಗಿ ಭದ್ರಾವತಿ ತುಳುಕೂಟದ ಅಧ್ಯಕ್ಷ ಸ ಉಡುಪಿ ಹೋಟೆಲ್ ಉದ್ಯಮಿ ಪ್ರಭಾಕರ್ ಪೂಜಾರಿ, ಸಮಾಜಸೇವಕ ಉಡುಪಿ ವಿಶ್ವನಾಥ ಶೆಣೈ ಉಪಸ್ಥಿತರಿದ್ದರು. ತುಳುಕೂಟದ ಪ್ರಧಾನ ಗಂಗಾಧರ ಕಿದಿಯೂರು ಮತ್ತು ಕೋಶಾಧಿಕಾರಿ ಚೈತನ್ಯ ಎಂ. ಜಿ. ವೇದಿಕೆಯಲ್ಲಿದ್ದರು.

ತುಳುಕೂಟದ ಉಪಾಧ್ಯಕ್ಷ ದಿವಾಕರ ಸನಿಲ್ ಅವರು ಸ್ವಾಗತಿಸಿದರು, ಪಣಯಾಡಿ ಪ್ರಶಸ್ತಿ ಸಂಚಾಲಕಿ ಶಿಲ್ಪಾ ಜೋಶಿ ಪ್ರಾಸ್ತವಿಕ ಮಾತುಗಳನಾ ತಾರಾ ಉಮೇಶ್ ಆಚಾರ್ಯ ಅವರು ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here