Saturday, June 14, 2025
HomeUncategorizedನಮ್ಮ ಶಾಲೆ ನಮ್ಮ ಜವಾಬ್ದಾರಿ ಕಾರ್ಯಕ್ರಮ

ನಮ್ಮ ಶಾಲೆ ನಮ್ಮ ಜವಾಬ್ದಾರಿ ಕಾರ್ಯಕ್ರಮ

ಉಡುಪಿ:   ಸರಕಾರಿ ಸಂಯುಕ್ತ ಪ್ರೌಢಶಾಲೆ ವಳಕಾಡು  ಉಡುಪಿ  ಮೇ  14  ಬುಧವಾರ  ನಮ್ಮ ಶಾಲೆ ನಮ್ಮ ಜವಾಬ್ದಾರಿ ಕಾರ್ಯಕ್ರಮ ಜರುಗಿತು.  ಸರಕಾರಿ ಶಾಲೆಗಳಲ್ಲಿ ದೊರೆಯುವ ಸೌಲಭ್ಯಗಳ ಹಾಗೂ ಪೌಷ್ಟಿಕ ಆಹಾರ  PM POSHAN ಕಾರ್ಯಕ್ರಮದ  ಬಗ್ಗೆ  ಪೋಷಕರಿಗೆ ಅರಿವು ಉಂಟು ಮಾಡುವ  ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಉಡುಪಿಯ  ಕ್ಷೇತ್ರ ಶಿಕ್ಷಣಾಧಿಕಾರಿಯವರಾದ  ಯಲ್ಲಮ್ಮ, ಹಾಗೂ DIET ಉಪನ್ಯಾಸಕರಾದ ಯೋಗ ನರಸಿಂಹ ಸ್ವಾಮಿ ಸರಕಾರಿ ಶಾಲೆಗಳಲ್ಲಿ ಸಿಗುವ ಸೌಲಭ್ಯಗಳ ಬಗ್ಗೆ ಹಾಗೂ PM POSHAN ಕಾರ್ಯಕ್ರಮದ ಅಗತ್ಯ ಹಾಗೂ ಯಶಸ್ಸಿನ ಬಗ್ಗೆ ಉತ್ತಮ ಮಾಹಿತಿ ನೀಡಿದರು. ಸಭೆಯ ಅಧ್ಯಕ್ಷತೆ ಪ್ರೌಢಶಾಲೆ SDMC ಅಧ್ಯಕ್ಷರಾದ ರಮೇಶ್ ಹೆಗಡೆ , ನಗರ ಸಭೆಯ ಉಪಾಧ್ಯಕ್ಷೆ ರಜನಿ ಹೆಬ್ಬಾರ್ ಮತ್ತು ನಗರ ಸಭೆ ಸದಸ್ಯರಾದ ಮಾನಸ ಪೈ, ಸಂಯುಕ್ತ ಪ್ರೌಢಶಾಲೆ ವಳಕಾಡು ಇಲ್ಲಿನ ಮುಖ್ಯ ಶಿಕ್ಷಕರಾದಪೂರ್ಣಿಮಾ ಮತ್ತು ಕುಸುಮ ರವರು, ಪ್ರಾಥಮಿಕ ಶಾಲಾ SDMC ಅಧ್ಯಕ್ಷರಾದ  ಡಾಕ್ಟರ್ ವಿರೂಪಾಕ್ಷ  ಹಾಗೂ ಹಳೇ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ನಾಗೇಶ್ ಪ್ರಭು ವೇದಿಕೆಯಲ್ಲಿ ಉಪಸ್ಥಿತರಿದ್ದರು.  ಅಜಿಮ್ ಪ್ರೇಮ್‍ಜಿ ಫೌಂಡೇಷನ್ ನ ಯೋಗೀಶ್ ಹಾಗೂ  ಕುಮಾರಿ ಪ್ರಕೃತಿ  ಆಗಮಿಸಿದ್ದು, ಪೋಷಕರು ಹಾಗೂ SDMC ಸದಸ್ಯರಿಗೆ ಪೌಷ್ಟಿಕ ಆಹಾರದ ಬಗ್ಗೆ ಸಮೀಕ್ಷೆ ಕೈ ಗೊಂಡರು.BRP ಜಯಶೀಲ ಬಿ ರೋಟೆ ಕಾರ್ಯಕ್ರಮ ಸಂಘಟಿಸಿ, ಪೂರ್ಣಿಮಾ ಸ್ವಾಗತಿಸಿ, CRP ಸರಿತಾ ರಾಣಿ ವಂದಿಸಿ CRP ರಂಜಿತ ಕಾರ್ಯಕ್ರಮ ನಿರೂಪಿಸಿ,  BIERT ಆಶಾ ರವರು ಸಹಕರಿಸಿದರು.

RELATED ARTICLES
- Advertisment -
Google search engine

Most Popular