ಭಾರತದ ಎಸ್ಎಸ್ ಇನ್ನೋವೇಶನ್ಸ್ ಗೆ ಔಟ್‌ ಸ್ಟ್ಯಾಂಡಿಂಗ್ ಕಂಪನಿ ಪ್ರಶಸ್ತಿ

0
17

ಜಾಗತಿಕ ವೈದ್ಯಕೀಯ ದೈತ್ಯರನ್ನು ಹಿಂದಿಕ್ಕಿ ಪ್ರತಿಷ್ಠಿತ ಪ್ರಶಸ್ತಿ ಮುಡಿಗೇರಿಸಿಕೊಂಡ ಭಾರತೀಯ ಸಂಸ್ಥೆ : ಜಾಗತಿಕ ಮಟ್ಟದಲ್ಲಿ ಔಟ್‌ ಸ್ಟ್ಯಾಂಡಿಂಗ್ ಕಂಪನಿ ಗೌರವಕ್ಕೆ ಪಾತ್ರವಾದ ಮೊದಲ ದೇಶಿ ಕಂಪನಿ

ಮಂಗಳೂರು : ಭಾರತದ ವೈದ್ಯಕೀಯ ತಂತ್ರಜ್ಞಾನ (ಮೆಡ್‌ ಟೆಕ್) ಕ್ಷೇತ್ರಕ್ಕೆ ಜಾಗತಿಕ ಮಟ್ಟದಲ್ಲಿ ಅಭೂತಪೂರ್ವ ಮನ್ನಣೆ ಸಿಕ್ಕಿದೆ. ವಿಶ್ವದ ಅತ್ಯಂತ ಪ್ರತಿಷ್ಠಿತ ಸರ್ಜಿಕಲ್ ರೋಬೋಟಿಕ್ಸ್ ಟೆಕ್ನಾಲಜಿ (ಎಸ್ ಆರ್ ಟಿ) ಇಂಡಸ್ಟ್ರಿ ಅವಾರ್ಡ್ಸ್ 2026ರಲ್ಲಿ ಭಾರತದ ಎಸ್ಎಸ್ ಇನ್ನೋವೇಶನ್ಸ್ ಇಂಟರ್ನ್ಯಾಷನಲ್ ಸಂಸ್ಥೆಯು ಅತ್ಯುನ್ನತ ಔಟ್‌ ಸ್ಟ್ಯಾಂಡಿಂಗ್ ಕಂಪನಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ. ಈ ವಿಭಾಗದಲ್ಲಿ ಇಂತಹದೊಂದು ಅತ್ಯುನ್ನತ ಗೌರವ ಪಡೆದ ಭಾರತದ ಮೊದಲ ಕಂಪನಿ ಎಂಬ ಹೆಗ್ಗಳಿಕೆಗೆ ಇದು ಪಾತ್ರವಾಗಿದೆ.

ರೋಬೋಟಿಕ್ ಸರ್ಜರಿ ಕ್ಷೇತ್ರದಲ್ಲಿ ವಿಶ್ವದ ದೈತ್ಯ ಕಂಪನಿಗಳಾದ ಇಂಟ್ಯೂಟಿವ್, ಮೆಡ್‌ಟ್ರಾನಿಕ್, ಜಾನ್ಸನ್ ಅಂಡ್ ಜಾನ್ಸನ್ ಮೆಡ್‌ ಟೆಕ್, ಡಿಸ್ಟಾಲ್‌ಮೋಷನ್, ಮೆರಿಲ್, ಮೈಕ್ರೋಫೋರ್ಟ್, ಥಿಂಕ್ ಸರ್ಜಿಕಲ್, ಫ್ಯುಟೆಕ್ ಮತ್ತು ಪ್ರೆಸಿಷನ್ ಐಒ ಗ್ರೂಪ್‌ ಗಳಂತಹ ಜಾಗತಿಕ ಸಂಸ್ಥೆಗಳ ತೀವ್ರ ಪೈಪೋಟಿಯ ನಡುವೆ ಭಾರತೀಯ ಸಂಸ್ಥೆ ಈ ಪ್ರಶಸ್ತಿಯನ್ನು ಗೆದ್ದುಕೊಂಡಿರುವುದು ಜಾಗತಿಕ ಮಟ್ಟದಲ್ಲಿ ದೇಶದ ತಾಂತ್ರಿಕ ಹೆಜ್ಜೆಯನ್ನು ಗಟ್ಟಿಗೊಳಿಸಿದೆ.

ಪ್ರಸ್ತುತ ನಾಲ್ಕನೇ ಆವೃತ್ತಿಯ ಎಸ್‌ಆರ್‌ಟಿ ಪ್ರಶಸ್ತಿಗಳು ರೋಬೋಟಿಕ್ ಶಸ್ತ್ರಚಿಕಿತ್ಸಾ ಕ್ಷೇತ್ರದಲ್ಲಿ ಅತ್ಯಂತ ಗೌರವಾನ್ವಿತ ಪ್ರಶಸ್ತಿಗಳಾಗಿವೆ. ರೋಬೋಟಿಕ್ ನೆರವಿನ ಶಸ್ತ್ರಚಿಕಿತ್ಸೆಯಲ್ಲಿ ಕ್ರಾಂತಿಕಾರಿ ಪ್ರಗತಿಯನ್ನು ತರುತ್ತಿರುವ ಸಂಸ್ಥೆಗಳನ್ನು ಗುರುತಿಸಿ ಈ ಪ್ರಶಸ್ತಿ ನೀಡಲಾಗುತ್ತದೆ. 2026ರ ಇತರ ಪ್ರಶಸ್ತಿ ವಿಜೇತರಲ್ಲಿ, ಮೆಡ್‌ ಟೆಕ್ ಕ್ಷೇತ್ರಕ್ಕೆ ನೀಡಿದ ಕೊಡುಗೆಗಾಗಿ ಸ್ಟೀವ್ ಬೆಲ್ ಅವರಿಗೆ ಇಂಡಸ್ಟ್ರಿ ಲೀಡರ್‌ ಶಿಪ್ ಪ್ರಶಸ್ತಿ, ಮೈಕ್ರೋಬಾಟ್ ಮೆಡಿಕಲ್‌ ಗೆ ಇನ್ನೋವೇಟಿವ್ ಸ್ಟಾರ್ಟ್-ಅಪ್ ಪ್ರಶಸ್ತಿ, ಸೆಂಟಾಂಟೆ ರೋಬೋಟಿಕ್ ಸಿಸ್ಟಮ್‌ಗೆ ಗ್ರೌಂಡ್‌ ಬ್ರೇಕಿಂಗ್ ಟೆಕ್ನಾಲಜಿ ಪ್ರಶಸ್ತಿ ಹಾಗೂ ಮೂನ್ ಸರ್ಜಿಕಲ್‌ಗೆ ಸಾಫ್ಟ್‌ ವೇರ್ ಇನ್ನೋವೇಶನ್ ಪ್ರಶಸ್ತಿ ಲಭಿಸಿದೆ.

ಈ ಸಾಧನೆಯ ಕುರಿತು ಮಾತನಾಡಿದ ಎಸ್ಎಸ್ ಇನ್ನೋವೇಶನ್ಸ್‌ ನ ಸಂಸ್ಥಾಪಕ ಅಧ್ಯಕ್ಷ ಮತ್ತು ಸಿಇಒ ಡಾ. ಸುಧೀರ್ ಶ್ರೀವಾಸ್ತವ ಅವರು, “ಎಸ್‌ಆರ್‌ಟಿ ಇಂಡಸ್ಟ್ರಿ ಅವಾರ್ಡ್ಸ್‌ ನಲ್ಲಿ ಔಟ್‌ಸ್ಟ್ಯಾಂಡಿಂಗ್ ಕಂಪನಿ ಪ್ರಶಸ್ತಿ ಗೆದ್ದಿರುವುದು ನಮ್ಮ ಸಂಸ್ಥೆಗೆ ಮತ್ತು ಇಡೀ ಭಾರತಕ್ಕೆ ಹೆಮ್ಮೆಯ ಮೈಲಿಗಲ್ಲು. ಅತ್ಯಾಧುನಿಕ, ಸುಲಭವಾಗಿ ಲಭ್ಯವಾಗುವ ಮತ್ತು ಕೈಗೆಟುಕುವ ದರದ ಸರ್ಜಿಕಲ್ ರೋಬೋಟಿಕ್ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸುವ ನಮ್ಮ ಬದ್ಧತೆಗೆ ಸಿಕ್ಕ ಮನ್ನಣೆ ಇದಾಗಿದೆ. ವಿಶ್ವದಾದ್ಯಂತ ರೋಬೋಟಿಕ್ ಶಸ್ತ್ರಚಿಕಿತ್ಸೆಯನ್ನು ಸಾಮಾನ್ಯ ಜನರಿಗೂ ತಲುಪಿಸುವ ನಮ್ಮ ಉದ್ದೇಶಕ್ಕೆ ಇದು ಮತ್ತಷ್ಟು ಪ್ರೇರಣೆ ನೀಡಿದೆ” ಎಂದರು.

ಎಸ್ಎಸ್ ಇನ್ನೋವೇಶನ್ಸ್ ಸಂಸ್ಥೆಯು ತನ್ನ ಪ್ರಮುಖ ಎಸ್‌ಎಸ್‌ಐ ಮಂತ್ರ ಸರ್ಜಿಕಲ್ ರೋಬೋಟಿಕ್ ಸಿಸ್ಟಮ್ ಮೂಲಕ ಜಾಗತಿಕ ಗಮನ ಸೆಳೆದಿದೆ. ಭಾರತದಲ್ಲೇ ಸಂಪೂರ್ಣವಾಗಿ ಅಭಿವೃದ್ಧಿಪಡಿಸಲಾದ ಈ ವ್ಯವಸ್ಥೆಯು, ಅತ್ಯಂತ ಕಡಿಮೆ ವೆಚ್ಚದಲ್ಲಿ ರೋಬೋಟಿಕ್ ಸರ್ಜರಿ ಮತ್ತು ಟೆಲಿಸರ್ಜರಿ (ದೂರದ ಲೊಕೇಶನ್‌ ನಿಂದ ಮಾಡುವ ಶಸ್ತ್ರಚಿಕಿತ್ಸೆ) ಸೌಲಭ್ಯವನ್ನು ಒದಗಿಸುತ್ತಿದೆ.

ಹೆಚ್ಚಿನ ಮಾಹಿತಿಗಾಗಿ ಕಂಪನಿಯ ವೆಬ್‌ ಸೈಟ್ ssinnovations.com ಅಥವಾ ಲಿಂಕ್ಡ್‌ ಇನ್ ಪ್ರೊಫೈಲ್ ವೀಕ್ಷಿಸಬಹುದು.

LEAVE A REPLY

Please enter your comment!
Please enter your name here