ಪಡುಬಿದ್ರೆ : ಶತಾಯುಷಿ ಐಕಳಭಾವ ಶಾಂಭವಿ ಶಂಕರ್ ಶೆಟ್ಟಿ ನಿಧನ

0
120

ಪಡುಬಿದ್ರೆ : ಉಚ್ಚಿಲ ಫಣಿಯೂರು ನಿವಾಸಿ ದಿ. ಪುತ್ತಿಗೆ ಗುತ್ತು ಶಂಕರ್ ಶೆಟ್ಟಿ ರವರ ಪತ್ನಿ ಶತಾಯುಷಿ ಐಕಳಭಾವ ಶಾಂಭವಿ ಶಂಕರ್ ಶೆಟ್ಟಿ(102) ಶುಕ್ರವಾರ ರಾತ್ರಿ ಸ್ವಗೃಹದಲ್ಲಿ ನಿಧನರಾದರು .

ಅವರು ಐಕಳ ಬಾವ ಡಾ ದೇವಿಪ್ರಸಾದ್ ಶೆಟ್ಟಿ ಬೆಳಪು ಸಹಿತ 5ಪುತ್ರರು ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ. ಹಿರಿಯ ಕೃಷಿಕೆಯಾಗಿ , ಆದರ್ಶದ ಗೃಹಿಣಿಯಾಗಿ ಜನಾನುರಾಗಿಯಾಗಿದ್ದರು.

ಅವರ ನಿಧನಕ್ಕೆ ಬೆಂಗಳೂರಿನ ಆಧ್ಯಾತ್ಮಿಕ ವಿಶ್ವಗುರು ಶ್ರೀ ಶ್ರೀ ಚಂದ್ರಶೇಖರ ಸ್ವಾಮೀಜಿ,ಕಾಪು ಶಾಸಕ ಸುರೇಶ್ ಶೆಟ್ಟಿ ಗುರ್ಮೆ,ಉಮಾನಾಥ ಕೋಟ್ಯಾನ್, ಮಾಜಿ ಶಾಸಕರಾದ ವಿನಯಕುಮಾರ್ ಸೊರಕೆ, ಲಾಲಾಜಿ ಮೆಂಡನ್ , ಅಭಯಚಂದ್ರ ಜೈನ್ , ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಿಥುನ್. ಎಂ.ರೈ, ಕೆಪಿಸಿಸಿ ಸದಸ್ಯ ವಸಂತ್ ಬೆರ್ನಾಡ್, ಜಾಗತಿಕ ಬಂಟರ ಸಂಘದ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ, ಎಸ್ ಡಿ ಸಿ ಸಿ ಬ್ಯಾಂಕ್ ಅಧ್ಯಕ್ಷ ಡಾ. ಎಂ ಎನ್ ರಾಜೇಂದ್ರ ಕುಮಾರ್,ಉದ್ಯಮಿ ಅರವಿಂದ ಪೂಂಜಾ ಕಾರ್ನಾಡ್, ಜಿಲ್ಲಾ ಕಂಬಳ ಸಮಿತಿ ಅಧ್ಯಕ್ಷ ಚಂದ್ರಹಾಸ್ ಸನಿಲ್, ರಾಜ್ಯ ಕಂಬಳ ಅಸೋಸಿಯೇಷನ್ ಕೋಶಾಧಿಕಾರಿ ಲೋಕೇಶ್ ಶೆಟ್ಟಿ ಕಲ್ಕುಡೆ ಮೂಚ್ಚೂರು,
ಐಕಳ ಕಾಂತಾ ಬಾರೆ ಬೂದಾ ಬಾರೆ ಕಂಬಳ ಸಮತಿಯ ಅಧ್ಯಕ್ಷರು ಪದಾಧಿಕಾರಿಗಳು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

ಅವರ ಅಂತ್ಯಕ್ರಿಯೆಯು ಆಗಸ್ಟ್ 1 ರಂದು ಶನಿವಾರ ಬೆಳಿಗ್ಗೆ ಗಂಟೆ 11:30ಗೆ ಪಣಿಯೂರಿನ ಸ್ವಗೃಹದಲ್ಲಿ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.