ಪಡುಕುಡೂರು : ಪಡುಕುಡೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬುಧವಾರ ನಡೆದ ಪೋಷಕರ ಮತ್ತು ಶಾಲಾಭಿವೃದ್ಧಿ ಸಮಿತಿಯ ಸಭೆಯಲ್ಲಿ ಕ್ರೀಡಾ ಸಾಧಕ ವಿದ್ಯಾರ್ಥಿಗಳಿಗೆ ಅಭಿನಂದನೆ ನಡೆಯಿತು.
ಶಾಲಾಭಿವೃದ್ಧಿ, ಶೈಕ್ಷಣಿಕಾಭಿವೃದ್ಧಿ ಮತ್ತು ಶಾಲಾ ಶತಮಾನೋತ್ಸವದ ಬಗ್ಗೆ ಚರ್ಚಿಸಲಾಯಿತು.
ವೃತ್ತ, ತಾಲ್ಲೂಕು,ಜಿಲ್ಲಾ ಮಟ್ಟದಲ್ಲಿ ಅದ್ವಿತೀಯ ಸಾಧನೆಗೈದ ಬಾಲಕಿಯರಿಗೆ ಅಭಿನಂದನೆ ನಡೆಯಿತು. ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಪಡುಕುಡೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಹರೀಶ ಪೂಜಾರಿ ಅವರನ್ನು ಶಿಕ್ಷಕಿಯರು ಹಾಗೂ ಹಲವರು ಸನ್ಮಾನಿಸಿದರು. ಪ್ರಶಸ್ತಿ ದೊರೆತ ಮೊತ್ತವನ್ನು ಹರೀಶ ಪೂಜಾರಿ ಅವರು ಕ್ರೀಡಾ ಸಲಕರಣೆ ಮತ್ತು ಧ್ವನಿವರ್ಧಕ ಹಾಗೂ ಸಲಕರಣೆ ಖರೀದಿಗೆ ದೇಣಿಗೆ ನೀಡಿದರು.
ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ರವಿ ಶೆಟ್ಟಿ, ಉಪಾಧ್ಯಕ್ಷ ಹರೀಶ ಪೂಜಾರಿ, ಸದಸ್ಯರು, ಪಡುಕುಡೂರು ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ಜಗದೀಶ ಹೆಗ್ಡೆ, ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷ ಪ್ರಸನ್ನ ಶೆಟ್ಟಿ ಜಯಲೀಲಾ, ಶತಮಾನೋತ್ಸವ ಸಮಿತಿಯ ಅಧ್ಯಕ್ಷ ಭಾರವಿ ಶೆಟ್ಟಿ, ಧರ್ಮಸ್ಥಳ ಯೋಜನೆಯ ಸೇವಾ ಪ್ರತಿನಿಧಿ ಚಿತ್ರಾ, ಶಿಕ್ಷಕಿಯರು, ಶಾಲಾಭಿವೃದ್ಧಿ ಸಮಿತಿಯ ಸದಸ್ಯರು, ಪೋಷಕರು, ಉಪಸ್ಥಿರಿದ್ದರು. ಶಿಕ್ಷಕಿಯರಾದ ಶೃತಿ ಸ್ವಾಗತಿಸಿ ಶೋಭಾ ವಂದಿಸಿದರು. ಶಿಕ್ಷಕ ಸುದರ್ಶನ್ ಶೆಟ್ಟಿ ನಿರೂಪಿಸಿದರು.

