ಸೆ. 22ರಿಂದ ಅ. 1: ಕಡಂದಲೆ ಶ್ರೀ ಆದಿಶಕ್ತಿ ದೇವಸ್ಥಾನದಲ್ಲಿ ನವರಾತ್ರಿ ಉತ್ಸವ

0
263

ಕಡಂದಲೆ: ಶ್ರೀ ಆದಿಶಕ್ತಿ ದೇವಸ್ಥಾನ (ರಿ.) ಕಡಂದಲೆ ಉಳುಮೆ ಇಲ್ಲಿ ನವರಾತ್ರಿ ಉತ್ಸವವು ಸೆ. 22ರಿಂದ ಅ. 1 ರವರೆಗೆ ವೇ.ಮೂ. ಕೆ.ಎನ್.‌ ರಾಘವೇಂದ್ರ ಭಟ್‌ ಕಡಂದಲೆ ಅವರ ಪೌರೋಹಿತ್ಯದಲ್ಲಿ ಜರಗಲಿದೆ ಎಂದು ಕ್ಷೇತ್ರದ ಆಡಳಿತ ಮೊಕ್ತೇಸರ ಕೆ. ಸುಂದರ ಗೌಡ ಅವರು ತಿಳಿಸಿದ್ದಾರೆ.

ಸೆ. 22 ರಂದು ಬೆಳಿಗ್ಗೆ 6 ಗಂಟೆಯಿಂದ ಪೂಜಾ ವಿಧಿ ವಿಧಾನ ಆರಂಭಗೊಳ್ಳಲಿದ್ದು, ಗಣಹೋಮ, ಕಲಶ ಪ್ರತಿಷ್ಠೆ, ಮಹಾಪೂಜೆ ನಡೆಯಲಿದೆ. ಸಂಜೆ, ಭಜನೆ, ಕುಂಕುಮಾರ್ಚನೆ, ಹೂವಿನಪೂಜೆ ರಾತ್ರಿ ಅನ್ನ ಸಂತರ್ಪಣೆ ನಡೆಯಲಿದೆ.

ಸೆ. 24ರಂದು ಸಂಜೆ 5 ಗಂಟೆಯಿಂದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ನಡೆಯಲಿದೆ. ಸೆ. 26ರಂದು ಸಂಜೆ 5 ರಿಂದ ಸಾರ್ವಜನಿಕ ಶ್ರೀ ದುರ್ಗಾನಮಸ್ಕಾರ ಪೂಜೆ ನಡೆಯಲಿದೆ. ಅ. 1 ರಂದು ಬೆಳಿಗ್ಗೆ 9 ರಿಂದ ಮಹಾ ಚಂಡಿಕಾಯಾಗ ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಲಿದೆ.

ವರದಿ: ಜಗದೀಶ್‌ ಪೂಜಾರಿ ಕಡಂದಲೆ

LEAVE A REPLY

Please enter your comment!
Please enter your name here