ಅಭಿವೃದ್ಧಿಯ ಪಥದಲ್ಲಿ ಪರಾರಿ ಬೊಬ್ಬರ್ಯ ದೈವಸ್ಥಾನ: ಏ.18 ರಿಂದ ಪ್ರತಿಷ್ಠೆ, ಬ್ರಹ್ಮಕಲಶೋತ್ಸವ

0
53

ಪರಾರಿ : ಉಪ್ಪುರು ಗ್ರಾಮ ಬ್ರಹ್ಮವರ ತಾಲೂಕು. ಇಲ್ಲಿನ ಇತಿಹಾಸ ಪ್ರಸಿದ್ಧ ಶ್ರೀ ಬೊಬ್ಬರ್ಯ ದೈವಸ್ಥಾನದ ಜೀರ್ಣೋದ್ದಾರ ಕಾರ್ಯವು ಭರದಿಂದ ಸಾಗುತ್ತಿದ್ದು, ದೈವಸ್ಥಾನವು ಅಭಿವೃದ್ಧಿಯ ಹೊಸ ರೂಪವನ್ನು ಪಡೆಯುತ್ತಿದೆ. ಇದು ಸ್ವರ್ಣ ನದಿಯ ತಟದಲ್ಲಿರುವ. ಬಹಳ ಕಾರ್ಣಿಕ ಇರುವ ಸ್ಥಳವಾಗಿದೆ. ಇದು ಮಣಿಪಾಲಕ್ಕೆ ಒಂದು ಕಿಲೋಮೀಟರ್ ಇರುವ ಇದೇ ಮಾರ್ಗವಾಗಿ ಮಣಿಪಾಲ ಆಸ್ಪತ್ರೆ ಹೋಗುವ ಭಕ್ತಾಭಿಮಾನಿಗಳು ಈ ಸ್ಥಳದಲ್ಲಿ ಬಂದು ಕೈಮುಗಿದುಹೋಗುತ್ತಾರೆ .

ಪ್ರತಿನಿತ್ಯ ಸಾವಿರಾರು ಸಾರ್ವಜನಿಕರು ಮತ್ತು ಭಕ್ತಾ ಅಭಿಮಾನಿಗಳು ಭಕ್ತಿಯಿಂದ ಕೈ ಮುಗಿದು ಹೋದರೆ ಇಷ್ಟಾರ್ಥ ಸಿದ್ದಿಯಾದ ಬಹಳಷ್ಟು ಉದಾಹರಣೆ ಇದೆ ಇದೇ ಬರುವ ಏಪ್ರಿಲ್ ತಿಂಗಳಲ್ಲಿ ದೈವಸ್ಥಾನದ ಪುನರ್ ಪ್ರತಿಷ್ಠೆ ಹಾಗೂ ಬ್ರಹ್ಮಕಲಶೋತ್ಸವ ಕಾರ್ಯಕ್ರಮಗಳು ನಡೆಯಲಿವೆ. ಬ್ರಹ್ಮಕಲಸದ ಪೂರ್ವಭಾವಿಯಾಗಿ ಕೊಳಲಗಿರಿ ಜಂಕ್ಷನ್ ಇಂದ ದೈವ ಸ್ಥಳದವರೆಗೆ ವಿಶೇಷವಾಗಿ ಹೊರ ಕಾಣಿಕೆ ಸಮರ್ಪಣೆ ಟ್ಯಾಬ್ಲೆಗಳ ಮೆರವಣಿಗೆ ನಡೆಯಲಿದೆ.


ಜೀರ್ಣೋದ್ದಾರ ಕಾರ್ಯದ ವಿವರ :

ದೈವಸ್ಥಾನದ ಅಭಿವೃದ್ಧಿಯ ಪ್ರಾಥಮಿಕ ಹಂತವಾಗಿ, ಸುಮಾರು 400 ಲೋಡ್‌ಗಳಷ್ಟು ಮಣ್ಣನ್ನು ಭರ್ತಿ ಮಾಡುವ ಮೂಲಕ ದೈವಸ್ಥಾನದ ಜಾಗವನ್ನು ರಸ್ತೆಯ ಮಟ್ಟಕ್ಕೆ ಏರಿಸಲಾಗಿದೆ. ದೈವಸ್ಥಾನದ ಆವರಣ ಗೋಡೆಯ ಕಾಮಗಾರಿಯು ಶೇಕಡಾ 80ರಷ್ಟು ಪೂರ್ಣಗೊಂಡಿದೆ.

ಪ್ರಮುಖವಾಗಿ ಶ್ರೀ ಬೊಬ್ಬರ್ಯ ದೈವ ಹಾಗೂ ಪರಿವಾರ ದೈವಗಳಾದ ನಂದಿಕೋಣ ಮತ್ತು ನೀಚ ದೈವದ ಶಿಲಾಮಯ ಗುಡಿಯ ನಿರ್ಮಾಣ ಕಾರ್ಯವು ತ್ವರಿತ ಗತಿಯಲ್ಲಿ ನಡೆಯುತ್ತಿದ್ದು, ಈಗಾಗಲೇ ಶೇಕಡಾ 90ರಷ್ಟು ಕೆಲಸ ಮುಗಿದಿದೆ.

ಬಾಕಿ ಉಳಿದಿರುವ ಕಾಮಗಾರಿಗಳು :

ಮುಂದಿನ ಹಂತದಲ್ಲಿ ಶಿಲಾಮಯ ಗುಡಿಗೆ ಮೇಲ್ಚಾವಣಿ ಅಳವಡಿಕೆ ಸಂಪೂರ್ಣವಾಗಿದ್ದು. ದೈವಸ್ಥಾನ ಗರ್ಭಗುಡಿಗೆ ಮತ್ತು ಸ್ವಾಗತ ಗೋಪುರಕ್ಕೆ ಹಂಚನ್ನು ಹಾಕಲಾಗಿದ್ದು ರಾತ್ರಿ ಹಗಲು ಎನ್ನದೆ ಬರದಿಂದ ಕೆಲಸಗಳು ಸಾಗುತ್ತಿದ್ದು ಇಂಟರ್ಲಾಕ್ ಮತ್ತು. ಆಫೀಸ್ ರೂಮಿಗೆ ಮತ್ತು ಕಂಪೌಂಡಿಗೆ. ಪೈಂಟ್ ಸುಣ್ಣಬಣ್ಣ ನ ಕೆಲಸವು ಇನ್ನು ಎರಡು ದಿವಸದಲ್ಲಿ. ಆಗಲಿದೆ.

ಇನ್ನು ಎರಡು ಮೂರು ದಿವಸದಲ್ಲಿ ದೈವಸ್ಥಾನದ ಒಳಗೆ ವಿದ್ಯುತ್ನ. ಲೈಟ್ ದೀಪ ಅಲಂಕಾರ ಸಂಪೂರ್ಣ ಅಗಲಿದ್ದು. ಹಾಗೂ ದೈವಸ್ಥಾನದ ಸಂಪೂರ್ಣ ಆವರಣಕ್ಕೆ ಮೇಲ್ಚಾವಣಿ ಆಗಿರುತ್ತದೆ. ಇದರೊಂದಿಗೆ ನೆಲಹಾಸು (Flooring), ಸುಂದರವಾದ ಸ್ವಾಗತ ಗೋಪುರ ನಿರ್ಮಾಣ, ವಿದ್ಯುತ್ ಸಂಪರ್ಕ ಆಗಿರುತ್ತದೆ ಹಾಗೂ ಕುಡಿಯುವ ನೀರಿನ ವ್ಯವಸ್ಥೆಯ ಆಗಿರುತ್ತದೆ 10 ಕಾಮಗಾರಿಗಳು ಬಾಕಿ ಉಳಿದಿದ್ದು, ದೇವಸ್ಥಾನದ ಮೇಲ್ಭಾಗಕ್ಕೆ ರೂಪಿನ್ ಶೀಟ್ ಸಂಪೂರ್ಣ ಕೆಲಸ ಆಗಿದ್ದು. ಶೀಘ್ರದಲ್ಲೇ ಪೂರೈಸುವ ಗುರಿ ಹೊಂದಲಾಗಿದೆ.

ಧಾರ್ಮಿಕ ಕಾರ್ಯಕ್ರಮಗಳ ವಿವರ :

ದೈವಸ್ಥಾನದ ನೂತನ ಶಿಲಾಮಯ ಗುಡಿ ನಿರ್ಮಾಣದ ಬಳಿಕ, ಇದೇ ಬರುವ ಏಪ್ರಿಲ್ ತಿಂಗಳಲ್ಲಿ ವಿಜೃಂಭಣೆಯ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

ಏಪ್ರಿಲ್ 18 (ಸಂಜೆ): ಹಸಿರುವಾಣಿ ಹೊರೆ ಕಾಣಿಕೆ ಸಮರ್ಪಣೆ.

ಏಪ್ರಿಲ್ 19: ಪರಿವಾರ ದೈವಗಳ ಸಹಿತ ಶ್ರೀ ಬೊಬ್ಬರ್ಯ ದೈವದ ಪುನರ್ ಪ್ರತಿಷ್ಠೆ.

ಏಪ್ರಿಲ್ 20: ಬ್ರಹ್ಮಕಲಶೋತ್ಸವ ಮತ್ತು ಸಾರ್ವಜನಿಕ ಅನ್ನಸಂತರ್ಪಣೆ. ಅಂದು ಸಂಜೆ ದೈವದ ನೇಮೋತ್ಸವ ಜರಗಲಿದೆ.

ಈ ಪುಣ್ಯ ಕಾರ್ಯದಲ್ಲಿ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ತನು.ಮನದನ ಸಹಕರಿಸಿ.ದೈವದ ಕೃಪೆಗೆ ಪಾತ್ರರಾಗಬೇಕೆಂದು ದೈವಸ್ಥಾನದ ಶ್ರೀ ಬೊಬ್ಬರ್ಯ ಮತ್ತು ಪರಿವಾರ ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯ ಗೌರವಧ್ಯಕ್ಷರಾದ ಸತೀಶ್ ಪೂಜಾರಿ ಕೀಳಂಜೆ. ಮತ್ತು ಅಧ್ಯಕ್ಷರಾದ ವೇದಮೂರ್ತಿ ಗುರುರಾಜ್ ಭಟ್ ಕೊಳಲಗಿರಿ ಪರಾರಿ ಮತ್ತು ಪ್ರಧಾನ ಅರ್ಚಕರಾದ ಲಕ್ಷ್ಮೀಶ್ ಭಟ್ ಪರಾರಿ ಜೀವನದ ಸಮಿತಿಯ ಉಪಾಧ್ಯಕ್ಷರು. ಕೋಶ ಅಧಿಕಾರಿ ಕಾರ್ಯದರ್ಶಿ ಸರ್ವ ಸದಸ್ಯರು ಮಹಿಳಾ ಸದಸ್ಯರು.. ಮತ್ತು ಉಪ್ಪುರು ಪರಾರಿ ದೈವ ಭಕ್ತಾ ಅಭಿಮಾನಿಗಳಲ್ಲಿ ವಿನಂತಿಸಿದ್ದಾರೆ.

LEAVE A REPLY

Please enter your comment!
Please enter your name here