ಪ್ರೇರಣಾ ಶಾಲೆ ಕಡಲಕೆರೆಯಲ್ಲಿ ಪಾಲಕರ ಸಭೆ

0
165

ಶತಮಾನೋತ್ಸವ ಸಂಭ್ರಮದಲ್ಲಿರುವ ಪ್ರೇರಣಾ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಪ್ರೇರಣಾ ಶಿಶುಮಂದಿರ ಕಡಲಕೆರೆ, ಮೂಡುಬಿದಿರೆ ಯಲ್ಲಿ  ಈ ಶೈಕ್ಷಣಿಕ ವರ್ಷದ ಪ್ರಥಮ ಪಾಲಕರ ಸಭೆಯು  ಮಂಗಳವಾರ ನಡೆಯಿತು. ಪ್ರಸಕ್ತ ವರ್ಷದಲ್ಲಿ ಹಮ್ಮಿಕೊಂಡಿರುವ ಯೋಜನೆಗಳು, ಶಾಲೆಯ ಪ್ರಗತಿಗಾಗಿ ಕೈಗೊಂಡ ಕಾರ್ಯಗಳು ,ವರ್ಷಪೂರ್ತಿ ಆಯೋಜಿಸಿರುವ ಕಾರ್ಯಕ್ರಮಗಳ ಬಗ್ಗೆ ಸೇವಾಂಜಲಿ ಎಜುಕೇಶನಲ್ ಟ್ರಸ್ಟಿನ ಅಧ್ಯಕ್ಷರಾದ ಶ್ರೀಯುತ ರಾಜೇಶ ಬಂಗೇರರು ಪ್ರಸ್ತಾಪಿಸಿದರು. ಮುಖ್ಯ ಮಾತಾಜಿಯಾದ ಶ್ರೀಮತಿ ವತ್ಸಲಾ ರಾಜೇಶ್ ಪ್ರಸ್ತಾವನೆಗೈದರು. ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಮುನಿರಾಜ ರೆಂಜಾಳ, ನಿವೃತ್ತ ಮುಖ್ಯೋಪಾಧ್ಯಾಯರು, ಜೈನ ಪ್ರೌಢಶಾಲೆ ಮೂಡುಬಿದಿರೆ ಇವರು ಗುಣಮಟ್ಟದ ಶಿಕ್ಷಣದ ಅಗತ್ಯತೆ, ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಪೋಷಕರ ಸಂಬಂಧ  ಸೌಹಾರ್ದಯುತವಾಗಿದ್ದರೆ ಉತ್ತಮ ಸಮಾಜದ  ನಿರ್ಮಾಣ ಸಾಧ್ಯ ಎಂದು ತಿಳಿಸಿದರು.ಶಾಲೆಯ ಸಂಚಾಲಕರಾದ  ಶ್ರೀ ಶಾಂತರಾಮ ಕುಡ್ವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಶಶಿಕಲಾ ಮಾತಾಜಿ ಧನ್ಯವಾದ ನೀಡಿ,ಹರ್ಷಿತಾ ಮಾತಾಜಿ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here