ಮುಂಬೈ : ಮೂರು ದಿನದ ಮಗುವನ್ನು ಪತ್ರ ಬರೆದು ರಸ್ತೆಯ ಬದಿಯಲ್ಲಿ ಬುಟ್ಟಿಯಲ್ಲಿ ಹಾಕಿ ಪೋಷಕರು ಬಿಟ್ಟು ಹೋದ ಘಟನೆ ನವ ಮುಂಬೈನ ಪನ್ವೆಲ್ ಪ್ರದೇಶದ ಟಕ್ಕಾ ಕಾಲೋನಿಯಲ್ಲಿ ನಡೆದಿದೆ.
ನೀಲಿ ಬಣ್ಣದ ಪ್ಲಾಸ್ಟಿಕ್ ಬುಟ್ಟಿಯಲ್ಲಿ ನಿರ್ಜನ ಪ್ರದೇಶದಲ್ಲಿ ಇಟ್ಟು ಪೋಷಕರು ಹೋಗಿದ್ದಾರೆ. ಮಗುವಿನ ಕೂಗುವ ಶಬ್ದ ಕೇಳಿ ಅದೇ ರಸ್ತೆಯಲ್ಲಿ ಸಂಚರಿಸುವ ಜನ ಹತ್ತಿರ ಬಂದು ನೋಡಿದಾಗ ಬುಟ್ಟಿಯಲ್ಲಿ ಮಗು ಇರುವುದು ಕಂಡು ಬಂದಿದೆ. ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದಾರೆ. ಪೊಲೀಸರು ಮಗುವಿನ ರಕ್ಷಣೆ ಮಾಡಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.
ಪತ್ರದಲ್ಲೇನಿದೆ..?
ಪತ್ರದಲ್ಲಿ ಕ್ಷಮಿಸಿ, ತಮ್ಮ ಆರ್ಥಿಕ ಸ್ಥಿತಿಗತಿ ಚೆನ್ನಾಗಿಲ್ಲ. ಹಾಗಾಗಿ ಮಗುವನ್ನು ನೋಡಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಇಂಗ್ಲೀಷ್‌ನಲ್ಲಿ ಬರೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಮಗು ಆರೋಗ್ಯವಾಗಿದ್ದು, ಪೋಷಕರ ಪತ್ತೆಗೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.