ಮಂಗಳೂರಿನ ಶಕ್ತಿನಗರದ ವಿಶ್ವ ಕೊಂಕಣಿ ಕೇಂದ್ರದ ಸಹಯೋಗದೊಂದಿಗೆ ಶ್ರೀ ಪೂರ್ಣಾನಂದ ಸೇವಾ ಪ್ರತಿಷ್ಠಾನ (ರಿ) ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಕುಡಾಳ್ ದೇಶಸ್ಥ ಆಧ್ಯ ಗೌಡ್ ಬ್ರಾಹ್ಮಣ ಸಂಘ (ರಿ), ಇವರ ಸಂಯುಕ್ತ ಆಶ್ರಯದಲ್ಲಿ ಕುಡಾಳ್ ದೇಶ್ಕರ್ ಸಮುದಾಯದ ಪದವಿ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ವಸತಿ ಸಹಿತ ನಾಲ್ಕು ದಿನಗಳ ಚಟುವಟಿಕೆ ಆಧಾರಿತ “ಪರಿಣತಿ” -2025′ ವ್ಯಕ್ತಿತ್ವ ವಿಕಸನ ಮತ್ತು ಕೌಶಲ್ಯಾಭಿವೃದ್ಧಿ ಕಾರ್ಯಾಗಾರದ ಎರಡನೇ ದಿನದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಶ್ರೀಮತಿ ಪ್ರೀತಂ ಕಾಮತ್, ಇವರು ಸಂದಶ೯ನದ ಕೌಶಲ್ಯಗಳನ್ನು ಹಾಗೂ ವೃತ್ತಿಪರ ರೆಸ್ಯೂಮೆ ಬರೆಯುವ ವಿಧಾನವನ್ನು ತಿಳಿಸಿ ಕೊಟ್ಟರು. ಇದೇ ದಿನ ಸಂಜೆ ಹೃದಯ ಹಾಗೂ ಮಕ್ಕಳ ಮನೋರೋಗದ ಬಗ್ಗೆ ಅರಿವು ಮೂಡಿಸುವ ಸಲಹಾ ಮಾಹಿತಿಯೊಂದಿಗೆ ಮುಕ್ತ ಸಂವಾದ ಮಾತುಕತೆ ನಡೆಯಿತು.
ವಿಶ್ವ ಕೊಂಕಣಿ ಕೇಂದ್ರದ ಅಧ್ಯಕ್ಷರಾದ ಸಿಎ ನಂದಗೋಪಾಲ ಶೆಣೈ, ಇವರು ಪ್ರಾಸ್ತಾವಿಕ ಮಾತುಗಳನ್ನಾಡಿ ಎಲ್ಲರಿಗೂ ಹೃದಯ ಮತ್ತು ಮನಸ್ಸು ಎರಡೂ ಮುಖ್ಯವಾಗಿದ್ದು ಇಂದಿನ ದಿನಗಳಲ್ಲಿ ಹೃದಯ ರೋಗ ಹಾಗೂ ಮಕ್ಕಳ ಮನೋರೋಗದ ಬಗ್ಗೆ ಮಾಹಿತಿ ವಿದ್ಯಾರ್ಥಿಗಳಿಗೆ ಅಗತ್ಯವಾಗಿದೆ. ಇವುಗಳನ್ನು ಅರಿತು ಕಾರ್ಯಾಗಾರದ ಸಂಪೂರ್ಣ ಪ್ರಯೋಜನ ಪಡೆಯಬೇಕು ಎಂದು ಹೇಳಿ ಮಂಗಳೂರಿನ ಕೆ ಎಮ್ ಸಿ ಹಾಸ್ಪಿಟಲ್ ನ ಪ್ರಸಿದ್ಧ ಹೃದಯ ರೋಗ ತಜ್ನರಾದ ಡಾ. ಮನೀಶ್ ರೈ ಮತ್ತು ಮಕ್ಕಳ ಮನೋರೋಗ ತಜ್ನರಾದ ಡಾ ಅವಿನಾಶ ಜಿ ಕಾಮತ್ ಅತಿಥಿ ಗಣ್ಯರನ್ನು ಸ್ವಾಗತಿಸಿ ನೆನಪಿನ ಕಾಣಿಕೆಯನ್ನು ನೀಡಿ ಅಭಿನಂದಿಸಿದರು. ಈ ಸಂದರ್ಭದಲ್ಲಿ ವಿಶ್ವ ಕೊಂಕಣಿ ಕೇಂದ್ರದ ಉಪಾಧ್ಯಕ್ಷರಾದ ಡಿ. ರಮೇಶ ನಾಯಕ್ ಮೈರಾ, ಸುಚಿತ್ರಾ ರಮೇಶ್ ನಾಯಕ್, ಕಾರ್ಯನಿರ್ವಹಣಾಧಿಕಾರಿ ಡಾ. ಬಿ. ದೇವದಾಸ್ ಪೈ, ಶಕ್ತಿ ರೆಸಿಡೆನ್ಸಿಯಲ್ ಪದವಿ ಪೂವ೯ ಕಾಲೇಜಿನ ಉಪಪ್ರಾಂಶುಪಾಲರಾದ ನಟೇಶ್ ಆಳ್ವ, ಉಪಸ್ಥಿತರಿದ್ದರು.
ಮಂಗಳೂರು ಕೆ.ಎಂ.ಸಿಯ ಪ್ರಖ್ಯಾತ ಹೃದಯ ರೋಗ ತಜ್ನರಾದ ಡಾ ಮನೀಶ್ ರೈಯವರು ಹೃದಯಾಘಾತ ಹಾಗೂ ಹೃದಯಸ್ತಂಭನದ ವಿಧಿಗಳು, ಕಾರಣಗಳು, ಇದರಿಂದ ಹೇಗೆ ರಕ್ಷಣೆ ಪಡೆಯಬೇಕು, ಈ ಹಂತದಲ್ಲಿ ಹೇಗೆ ಕಾರ್ಯತತ್ಪರರಾಗಬೇಕು. ಮತ್ತು ಇದಕ್ಕೆ ಪ್ರಾಥಮಿಕ ಹಂತದ ತಿಳುವಳಿಕೆಯನ್ನು ಪವರ್ ಪೊಯಿಂಟ್ ಪ್ರೆಸೆಂಟೇಶನ್ ನೊಂದಿಗೆ ಮತ್ತು ಪ್ರಾತ್ಯಕ್ಷಿಕೆಯೊಂದಿಗೆ ಮುಂಜಾಗ್ರತೆಯನ್ನು ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿಕೊಟ್ಟರು.
ಮನೋರೋಗ ಹಾಗೂ ಆಪ್ತ ಸಮಾಲೋಚನಾ ತಜ್ಞರಾದ ಡಾ. ಅವಿನಾಶ್ ಜಿ ಕಾಮತ್ ಇವರು ಮಕ್ಕಳ ಮನೋರೋಗದ ಬಗ್ಗೆ ಮಾಹಿತಿ ನೀಡುತ್ತಾ ಇಂದಿನ ವಿದ್ಯಾರ್ಥಿಗಳಿಗೆ ಮೊಬೈಲ್ ಅಗತ್ಯವಾಗಿದ್ದು ಇದರ ಇತಿ ಮಿತಿ ಬಳಕೆ ಉತ್ತಮವಾಗಿದ್ದು ಅತಿಯಾದ ಬಳಕೆಯಿಂದ ಹೇಗೆ ಮೆದುಳಿನ ಮೇಲೆ ಹಾನಿಯನ್ನುಂಟು ಮಾಡುತ್ತದೆ, ಹಾಗೂ ಇದರಿಂದಾಗುವ ದುಷ್ಪರಿಣಾಮಗಳ ಬಗ್ಗೆ ಅರ್ಥಗರ್ಭಿತವಾಗಿ ತಿಳಿಸಿ ಮಕ್ಕಳ ಪ್ರಶ್ನೆಗಳಿಗೆ ಉತ್ತಮವಾದ ಸಲಹೆಯನ್ನು ನೀಡಿದರು.
ಶ್ರೀ ಪೂಣಾ೯ನಂದ ಸೇವಾ ಪ್ರತಿಷ್ಠಾನದ ಅಧ್ಯಕ್ಷರಾದ ಮುರಳಿಧರ ಪ್ರಭು ವಗ್ಗ, ಕಾರ್ಯದರ್ಶಿ ರವೀಂದ್ರ ನಾಯಕ್ ಕುಂಟಲ್ಪಾಡಿ, ನಿಕಟಪೂರ್ವ ಅಧ್ಯಕ್ಷ ವಿಜಯ ಶೆಣೈ ಕೊಡಂಗೆ, ಹಿರಿಯರಾದ ಸಿ ಎ ಶ್ರೀನಿವಾಸ ಕಾಮತ್, ಸುಜಾತಾ ರಮೇಶ್ ಸಾಮಂತ್, ಗೋಪಾಲ್ ಸಾಮಂತ್ ಮೈರಾ, ಸುರೇಂಧ್ರ ಸಾಮಂತ್, ಪಾವನಾಕ್ಷಿ ಪ್ರಭು, ಅನಂತ ಪ್ರಭು ಮರೋಳಿ, ಕಮಲಾಕ್ಷ ಪ್ರಭು ಒಡ್ಡೂರು, ಲಕ್ಷ್ಮೀ ಕಿಣಿ, ವಿಘ್ನೇಶ್ ಹಾಗೂ ಶಕ್ತಿ ರೆಸಿಡೆನ್ಸಿಯಲ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಸುಮಾರು 2೦೦ ವಿದ್ಯಾರ್ಥಿಗಳು ಈ ಕಾರ್ಯಾಗಾರದ ಪ್ರಯೋಜನ ಪಡೆದುಕೊಂಡರು. ಶಿಬಿರಾರ್ಥಿ ಜಯಸೂರ್ಯ ನಾಯಕ್ ವಂದಿಸಿ, ಡಾ. ವಿಜಯಲಕ್ಷ್ಮಿ ನಾಯಕ್ ಕಾರ್ಯಕ್ರಮವನ್ನು ನಿರೂಪಿಸಿದರು.