ವರದಿ ರಾಯಿ ರಾಜಕುಮಾರ ಮೂಡುಬಿದಿರೆ
ಕಾರ್ಕಳ ತಾಲೂಕು ಇರ್ವತ್ತೂರು ಗ್ರಾಮ ಪಂಚಾಯತ್ ನ ಕೋರಂಜೆ ಅರಂತಬೆಟ್ಟು ಪ್ರದೇಶದಲ್ಲಿರುವ ಸಂಕದ ಪಶ್ಚಿಮದ ಬದಿ ಮುರಿದು ಪ್ರಯಾಣಿಕರಿಗೆ ಆತಂಕವನ್ನು ಉಂಟುಮಾಡುತ್ತಿದೆ. ಕಳೆದ ಮಳೆಗಾಲದಲ್ಲಿ ಮುರಿದುಬಿದ್ದ ಪಶ್ಚಿಮದ ಬದಿಯ ತಡೆಗೋಡೆ ಕುರಿತು ಮಾಧ್ಯಮಗಳಲ್ಲಿ ಚಿತ್ರಸಹಿತ ವರದಿ ಪ್ರಕಟವಾಗಿತ್ತು.
ಆದರೆ ಕಾರ್ಕಳ ತಾಲೂಕಿನ ರೆಂಜಾಳ, ಇರ್ವತ್ತೂರು, ಮೂಡುಬಿದರೆ ತಾಲೂಕಿನ ಬೆಳುವಾಯಿ, ಧರೆಗುಡ್ಡೆ, ಮೂಡು ಮಾರ್ನಾಡು ಇತ್ಯಾದಿ ಪ್ರದೇಶಗಳನ್ನು ಬಹಳ ಸಮೀಪದಲ್ಲಿ ಸಂಪರ್ಕಿಸುವ ಈ ಸೇತುವೆಯ ತಡೆಗೋಡೆಯ ಮುರಿತದಿಂದಾಗಿ ಪ್ರಯಾಣಿಕರು ಆತಂಕಕ್ಕೆ ಒಳಗಾಗಿರುತ್ತಾರೆ.
ಈ ಬಗ್ಗೆ ಕಾರ್ಕಳ ತಾಲೂಕಿನ ಅಧಿಕಾರಿಗಳು, ಶಾಸಕರು ತಕ್ಷಣ ಭೇಟಿ ನೀಡಿ ಬದಿಗಳನ್ನು ಸಮರ್ಪಕಗೊಳಿಸುವ ಅಗತ್ಯ ಇದೆ ಎಂದು ಪ್ರಯಾಣಿಕರು ತಿಳಿಸಿರುತ್ತಾರೆ.

