ಪೆರ್ಡೂರಿನಲ್ಲಿ ನ.29ರಂದು ಪಥಮ ವರ್ಷದ ಕುಲಾಲ್ ಟ್ರೋಫಿ 2026 ಕ್ರಿಕೆಟ್ ಪಂದ್ಯಾಟ

0
39

ಪೆರ್ಡೂರು: ಕುಲಾಲ್ ಬಾಯ್ಸ್ ಆಶ್ರಯದಲ್ಲಿ ಉಡುಪಿ ಜಿಲ್ಲಾ ವ್ಯಾಪ್ತಿಯ ಕುಲಾಲ್ ಸಮಾಜ ಬಾಂಧವರಿಗಾಗಿ ಸೀಮಿತ ಓವರ್‌ಗಳ 90 ಗಜಗಳ ಓವರ್ ಆರ್ಮ್ ಕ್ರಿಕೆಟ್ ಪಂದ್ಯಾಟ ಪ್ರಥಮ ವರ್ಷದ ‘ಕುಲಾಲ್ ಟ್ರೋಫಿ 2026’ ನವೆಂಬರ್ 29ರಂದು ಪೆರ್ಡೂರು ಪ್ರೌಢಶಾಲಾ ಮೈದಾನದಲ್ಲಿ ನಡೆಯಲಿದೆ.

ಅಂದು ಬೆಳಿಗ್ಗೆ 8 ಗಂಟೆಗೆ ಪಂದ್ಯಾಟಕ್ಕೆ ಚಾಲನೆ ದೊರೆಯಲಿದೆ.

ಪಂದ್ಯಾಟದ ಪ್ರಥಮ ಬಹುಮಾನವಾಗಿ ₹20,000 ಹಾಗೂ ದ್ವಿತೀಯ ಬಹುಮಾನವಾಗಿ ₹12,000 ನಗದು ಬಹುಮಾನ ನೀಡಲಾಗುತ್ತದೆ. ಇದರೊಂದಿಗೆ ಸರಣಿ ಶ್ರೇಷ್ಠ ಪ್ರಶಸ್ತಿ, ಪಂದ್ಯ ಶ್ರೇಷ್ಠ, ಉತ್ತಮ ಬೌಲರ್, ಉತ್ತಮ ಬ್ಯಾಟ್ಸ್‌ಮನ್ ಸೇರಿದಂತೆ ಹಲವು ವೈಯಕ್ತಿಕ ಬಹುಮಾನಗಳನ್ನು ವಿತರಿಸಲಾಗುವುದು.

ಕುಲಾಲ್ ಸಮಾಜದ ಕ್ರೀಡಾಭಿಮಾನಿಗಳು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಪಂದ್ಯಾಟವನ್ನು ಯಶಸ್ವಿಗೊಳಿಸಬೇಕೆಂದು ಆಯೋಜಕರು ಮನವಿ ಮಾಡಿದ್ದಾರೆ. ಸರ್ವರಿಗೂ ಆದರದ ಸ್ವಾಗತ ಕೋರಿದ್ದಾರೆ.