ಪೇಟಿಎಂ, ಫೋನ್ ಪೇ, ಗೂಗಲ್ ಪೇ ಸ್ಥಗಿತ

0
2059

ನವದೆಹಲಿ: ಇಂದು ಯುಪಿಐ ಸ್ಥಗಿತ? ಪೇಟಿಎಂ, ಫೋನ್ ಪೇ, ಗೂಗಲ್ ಪೇ ಮುಂತಾದ ಸೇವೆಗಳು ಇಂದು ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ. ಯುನಿಫೈಡ್ ಪೇಮೆಂಟ್ಸ್ ಇಂಟರ್ಫೇಸ್‌ (ಯುಪಿಐ) ಇಂದು ಸ್ಥಗಿತಗೊಂಡಿದೆ ಎಂದು ವರದಿಯಾಗಿದೆ.

ಎಲ್ಲಾ ಪಾವತಿಗಳು ವಿಫಲವಾಗುತ್ತಿವೆ” ಎಂದು ಎಕ್ಸಲ್ಲಿ ಬಳಕೆದಾರರೊಬ್ಬರು ಬರೆದಿದ್ದಾರೆ. ಸಾಮಾಜಿಕ ಮಾಧ್ಯಮ ಪ್ಲಾಟ್ಸಾರ್ಮ್ ಎಕ್ಸ್ (ಹಿಂದೆ ಟ್ವಿಟರ್ ಹಲವಾರು ಬಳಕೆದಾರರು ಪದೇ ಪದೇ ಯುಪಿಐ ಸ್ಥಗಿತಗಳ ಬಗ್ಗೆ ಕಳವಳ ವ್ಯಕ್ತಪಡಿಸುವುದರೊಂದಿಗೆ ದೂರುಗಳಿಂದ ತುಂಬಿತ್ತು. ಎಕ್ಸ್ ಬಳಕೆದಾರರೊಬ್ಬರು, ನಿನ್ನೆ ಲಿಂಕ್‌ಇನ್ನಲ್ಲಿ ಯುಪಿಐ ಪಾವತಿಯನ್ನು ಯಾರೋ ಶ್ಲಾಘಿಸುತ್ತಿದ್ದರು ಮತ್ತು ಅದು ಜೀವನವನ್ನು ಹೇಗೆ ಸುಲಭಗೊಳಿಸಿದೆ ಎಂದು ಹೇಳಿದರು. ಇಂದು ಅದು ಕುಸಿದಿದೆ.”ಎಂದರು. ಮತ್ತೊಬ್ಬ ಎಕ್ಸ್ ಬಳಕೆದಾರರು, “ಜಿಪೇ, ಫೋನ್ವೇ ಅಥವಾ ಪೇಟಿಎಂನೊಂದಿಗೆ ತೊಂದರೆಯನ್ನು ಎದುರಿಸುತ್ತಿದ್ದೀರಿ ನೀವು ಒಬ್ಬಂಟಿಯಲ್ಲ – ಯುಪಿಐ ಭಾರತದಾದ್ಯಂತ ಕುಸಿದಿದೆ” ಎಂದು ಬರೆದಿದ್ದಾರೆ.

ಡೌನ್ ಡಿಟೆಕ್ಟರ್ ಪ್ರಕಾರ, ಸುಮಾರು 1,265 ಬಳಕೆದಾರರು ಯುಪಿಐ ಸ್ಥಗಿತದ ಬಗ್ಗೆ ದೂರು ನೀಡಿದ್ದಾರೆ.

LEAVE A REPLY

Please enter your comment!
Please enter your name here