ಹೊಸ ರುಪೇ ಕ್ರೆಡಿಟ್ ಕಾರ್ಡ್‌ಗಳು ಅತ್ಯಾಕರ್ಷಕ ರಿವಾರ್ಡ್‌ಗಳು ಮತ್ತು UPI ಸಕ್ರಿಯಗೊಳಿಸಿದ ಪ್ರಯೋಜನಗಳನ್ನು ಪರಿಚಯಿಸುತ್ತಿವೆ
ರಾಷ್ಟ್ರೀಯ, ಜೂನ್ 26, 2025: ಫೋನ್‌ಪೇ ಮತ್ತು HDFC ಬ್ಯಾಂಕ್ ‘ಫೋನ್‌ಪೇ HDFC ಬ್ಯಾಂಕ್ ಕೋ-ಬ್ರ್ಯಾಂಡೆಡ್ ಕ್ರೆಡಿಟ್ ಕಾರ್ಡ್’ ಅನ್ನು ಬಿಡುಗಡೆ ಮಾಡುವುದಾಗಿ ಘೋಷಿಸಿದ್ದು, ಇದು ಕೋ-ಬ್ರ್ಯಾಂಡೆಡ್ ಕ್ರೆಡಿಟ್ ಕಾರ್ಡ್ ಕ್ಷೇತ್ರಕ್ಕೆ ಫೋನ್‌ಪೇ ಪ್ರವೇಶಿಸುತ್ತಿರುವುದನ್ನು ಗುರುತಿಸುತ್ತದೆ. HDFC ಬ್ಯಾಂಕ್‌ನೊಂದಿಗೆ ಪ್ರಾರಂಭಿಸಲಾದ ಈ ಹೊಸ ಕೋ-ಬ್ರ್ಯಾಂಡೆಡ್ ರುಪೇ ಕ್ರೆಡಿಟ್ ಕಾರ್ಡ್, ಭಾರತೀಯ ಗ್ರಾಹಕರ ಬದಲಾಗುತ್ತಿರುವ ಅಗತ್ಯಗಳನ್ನು ಪೂರೈಸಲು ವಿನ್ಯಾಸಗೊಳಿಸಲಾಗಿದೆ. ವಿಶೇಷವಾಗಿ ಫೋನ್‌ಪೇ ಪ್ಲಾಟ್‌ಫಾರ್ಮ್ ಮೂಲಕ ಮಾಡುವ UPI ಪಾವತಿಗಳಲ್ಲಿ ಪ್ರಯೋಜನಗಳು ಲಭ್ಯವಾಗುವಂತೆ ಮಾಡಲಾಗುತ್ತದೆ.
HDFC ಬ್ಯಾಂಕ್ ಮತ್ತು ಫೋನ್‌ಪೇ ನಡುವಿನ ಈ ಪಾಲುದಾರಿಕೆಯು ತಮ್ಮ ಬ್ಯಾಂಕಿಂಗ್ ಮತ್ತು ಫಿನ್‌ಟೆಕ್ ಸಾಮರ್ಥ್ಯಗಳನ್ನು ಒಟ್ಟುಗೂಡಿಸಿ, ಹೆಚ್ಚು ಸುಲಭವಾಗಿ ಕ್ರೆಡಿಟ್ ಕಾರ್ಡ್ ಆ್ಯಕ್ಸೆಸ್ ದೊರೆಯುವಂತೆ ಮಾಡುವುದಲ್ಲದೇ, ಅವುಗಳನ್ನು ಬಳಕೆದಾರ ಸ್ನೇಹಿಯಾಗಿಸುತ್ತದೆ. ‘ಅಲ್ಟಿಮೋ’ ಮತ್ತು ‘ಉನೋ’ ವೇರಿಯಂಟ್‌ಗಳಲ್ಲಿ ಲಭ್ಯವಿರುವ ಈ ಕಾರ್ಡ್‌ಗಳು ರೀಚಾರ್ಜ್, ಬಿಲ್ ಪಾವತಿಗಳು, ಪ್ರಯಾಣ, ಆನ್‌ಲೈನ್ ಶಾಪಿಂಗ್, ದಿನಸಿ ಮತ್ತು ಕ್ಯಾಬ್‌ಗಳಂತಹ ಪ್ರಮುಖ ವೆಚ್ಚಗಳ ಮೇಲೆ ರಿವಾರ್ಡ್‌ಗಳನ್ನು ನೀಡುತ್ತವೆ. ಹೆಚ್ಚುವರಿಯಾಗಿ, ಈ ಕಾರ್ಡ್‌ಗಳು UPI ಯೊಂದಿಗೆ ಸಹ ಸರಾಗವಾಗಿ ಕಾರ್ಯನಿರ್ವಹಿಸುತ್ತವೆ. ಬಳಕೆದಾರರು ತಮ್ಮ ಕ್ರೆಡಿಟ್ ಕಾರ್ಡ್ ಬಳಸಿ ದೈನಂದಿನ ಖರೀದಿಗಳಿಗೆ ಪಾವತಿಸಲು ಮತ್ತು UPI QR ಗಳಲ್ಲಿ ಸಕ್ರಿಯಗೊಳಿಸಲಾದ ವಿಶಾಲ ವ್ಯಾಪಾರಿ ನೆಟ್‌ವರ್ಕ್ ಮೂಲಕ ರಿವಾರ್ಡ್‌ಗಳನ್ನು ಗಳಿಸಲು ಅನುವು ಮಾಡಿಕೊಡುತ್ತದೆ.
ಫೋನ್‌ಪೇನ ಗ್ರಾಹಕ ಪಾವತಿ ವಿಭಾಗದ ಮುಖ್ಯ ವ್ಯಾಪಾರ ಅಧಿಕಾರಿ ಸೋನಿಕಾ ಚಂದ್ರ ಮಾತನಾಡಿ, “HDFC ಬ್ಯಾಂಕ್‌ನ ಸಹಭಾಗಿತ್ವದಲ್ಲಿ ನಮ್ಮ ಮೊದಲ ಕೋ-ಬ್ರ್ಯಾಂಡೆಡ್ ಕ್ರೆಡಿಟ್ ಕಾರ್ಡ್ ಅನ್ನು ಬಿಡುಗಡೆಗೊಳಿಸಲು ನಾವು ಉತ್ಸುಕರಾಗಿದ್ದೇವೆ. ಈ ಆರಂಭವು ನಮ್ಮ ವಿಶಾಲ ಬಳಕೆದಾರರಿಗೆ ಹೊಸ ಆರ್ಥಿಕ ಪರಿಹಾರಗಳನ್ನು ಒದಗಿಸುವ ನಮ್ಮ ಬದ್ಧತೆಯನ್ನು ಸಾರುತ್ತದೆ. ಈ ಕಾರ್ಡ್ ಅನ್ನು ಫೋನ್‌ಪೇ ಬಳಕೆದಾರರ ದೈನಂದಿನ ಖರ್ಚಿನ ಮೇಲೆ ಮೌಲ್ಯವನ್ನು ನೀಡಲು ವಿನ್ಯಾಸಗೊಳಿಸಲಾಗಿದೆ. ಬಿಲ್ ಪಾವತಿಗಳು, ರೀಚಾರ್ಜ್‌ಗಳು ಮತ್ತು ಪ್ರಯಾಣ ಬುಕಿಂಗ್‌ಗಳಂತಹ ಆಯ್ದ ವಿಭಾಗಗಳಲ್ಲಿ 10% ರಿವಾರ್ಡ್ ಪಾಯಿಂಟ್‌ಗಳನ್ನು ನೀಡುತ್ತದೆ. ಅಲ್ಲದೇ, ಗ್ರಾಹಕರು ಲಕ್ಷಾಂತರ UPI ವ್ಯಾಪಾರಿಗಳಲ್ಲಿ ಈ ಕಾರ್ಡ್ ಅನ್ನು ಸುಲಭವಾಗಿ ಬಳಸಬಹುದು. ಈ ಕಾರ್ಡ್‌ನ ಪ್ರಯೋಜನಗಳ ಜೊತೆಗೆ, HDFC ಬ್ಯಾಂಕ್‌ನೊಂದಿಗಿನ ನಮ್ಮ ಪಾಲುದಾರಿಕೆಯು ಲಕ್ಷಾಂತರ ಭಾರತೀಯರ ಕ್ರೆಡಿಟ್ ಕಾರ್ಡ್ ಬಳಕೆಯ ಅನುಭವಕ್ಕೆ ಮರುವ್ಯಾಖ್ಯಾನವನ್ನು ನೀಡುತ್ತದೆ ಎಂಬ ಭರವಸೆಯನ್ನು ನಾವು ಹೊಂದಿದ್ದೇವೆ” ಎಂದು ಅಭಿಪ್ರಾಯಪಟ್ಟರು.
HDFC ಬ್ಯಾಂಕ್‌ನ ಪಾವತಿಗಳು, ಹೊಣೆಗಾರಿಕೆ ಉತ್ಪನ್ನಗಳು, ಗ್ರಾಹಕ ಹಣಕಾಸು ಮತ್ತು ಮಾರುಕಟ್ಟೆ ವಿಭಾಗದ ದೇಶೀಯ ಮುಖ್ಯಸ್ಥರಾದ, ಪರಾಗ್ ರಾವ್ ಮಾತನಾಡಿ, “ಭಾರತದ ಪ್ರಮುಖ ಕಾರ್ಡ್ ವಿತರಕರಾಗಿ, ನಮ್ಮ ಗ್ರಾಹಕರಿಗೆ ಪರಿಣಾಮಕಾರಿ, ಸೂಕ್ತವಾದ ಆಫರ್‌ಗಳನ್ನು ರಚಿಸಲು ಮತ್ತು ಅರ್ಥಪೂರ್ಣ ರೀತಿಯಲ್ಲಿ ಕ್ರೆಡಿಟ್ ಆ್ಯಕ್ಸೆಸ್ ಅನ್ನು ವಿಸ್ತರಿಸಲು ನಾವು ನಿರಂತರ ಪ್ರಯತ್ನ ಮಾಡುತ್ತಿದ್ದೇವೆ. ಫೋನ್‌ಪೇ ಜೊತೆಗಿನ ನಮ್ಮ ಪಾಲುದಾರಿಕೆಯು ಡಿಜಿಟಲ್ ಪರಿಣತಿ ಹೊಂದಿರುವ ಬಳಕೆದಾರರನ್ನು ತಲುಪಲು ನಮಗೆ ಸಹಾಯ ಮಾಡುತ್ತದೆ. ಕ್ರೆಡಿಟ್ ಕಾರ್ಡ್‌ಗಳನ್ನು ಹೆಚ್ಚು ಲಾಭದಾಯಕವಾಗಿಸುತ್ತದೆ ಮತ್ತು ಬಳಸಲು ಸುಲಭಗೊಳಿಸುತ್ತದೆ – ವಿಶೇಷವಾಗಿ UPI ಮೂಲಕ, ಇದು ಈಗ ಭಾರತದ ಡಿಜಿಟಲ್ ಪಾವತಿ ವ್ಯವಸ್ಥೆಯ ಪ್ರಮುಖ ಭಾಗವಾಗಿದೆ. ಈ ಕೋ-ಬ್ರ್ಯಾಂಡೆಡ್ ಕಾರ್ಡ್ ಬಳಕೆದಾರರಿಗೆ HDFC ಬ್ಯಾಂಕ್‌ನ ವಿಶ್ವಾಸಾರ್ಹ ಕ್ರೆಡಿಟ್ ಕಾರ್ಡ್ ಪ್ಲಾಟ್‌ಫಾರ್ಮ್ ಮತ್ತು ಫೋನ್‌ಪೇನ ಬಳಕೆದಾರ ಸ್ನೇಹಿ ಡಿಜಿಟಲ್ ಅನುಭವ – ಈ ಎರಡೂ ನೆಲೆಗಳಲ್ಲಿ ಅತ್ಯುತ್ತಮವಾದುದ್ದನ್ನು ನೀಡುತ್ತದೆ” ಎಂದು ತಿಳಿಸಿದರು.
‘ಅಲ್ಟಿಮೊ’ ವೇರಿಯಂಟ್ ಗ್ರಾಹಕರಿಗೆ ಗಮನಾರ್ಹ ರಿವಾರ್ಡ್ ಪಾಯಿಂಟ್‌ಗಳನ್ನು ನೀಡುತ್ತದೆ, ಅವುಗಳೆಂದರೆ:
● ಫೋನ್‌ಪೇ ಆ್ಯಪ್‌ನಲ್ಲಿ ಬಿಲ್ ಪಾವತಿಗಳು, ರೀಚಾರ್ಜ್‌ಗಳು, ಫೋನ್‌ಪೇ ಮೂಲಕ ಪ್ರಯಾಣ ಬುಕಿಂಗ್‌ಗಳು ಮತ್ತು ಫೋನ್‌ಪೇನ ಹೈಪರ್‌ಲೋಕಲ್ ಡೆಲಿವರಿ ಆ್ಯಪ್ ಪಿನ್‌ಕೋಡ್‌ನಲ್ಲಿನ ಖರೀದಿ ಖರ್ಚಿನ ಮೇಲೆ 10% ರಿವಾರ್ಡ್ ಪಾಯಿಂಟ್‌ಗಳನ್ನು ಪಡೆಯಬಹುದು.
● ಪ್ರಮುಖ ಆನ್‌ಲೈನ್ ವ್ಯಾಪಾರಿಗಳಿಂದ ಮಾಡಿದ ಖರೀದಿಗಳ ಮೇಲೆ 5% ರಿವಾರ್ಡ್ ಪಾಯಿಂಟ್‌ಗಳನ್ನು ಗಳಿಸಬಹುದು.
● ಕಾರ್ಡ್ ಬಳಸಿ ಮಾಡುವ ಎಲ್ಲ UPI ಸ್ಕ್ಯಾನ್ ಮಾಡಿ ಪಾವತಿಸಿದ ವಹಿವಾಟುಗಳ ಮೇಲೆ 1% ರಿವಾರ್ಡ್ ಪಾಯಿಂಟ್‌ಗಳು ದೊರೆಯುತ್ತವೆ.
● ಪ್ರತಿ ತ್ರೈಮಾಸಿಕಕ್ಕೆ ಎರಡು ಡೊಮೆಸ್ಟಿಕ್ ಏರ್‌ಪೋರ್ಟ್ ಲಾಂಜ್‌ನ ಆ್ಯಕ್ಸೆಸ್ ಪಡೆಯಬಹುದು.
ಫೋನ್‌ಪೇನ ಅರ್ಹ ಬಳಕೆದಾರರು ನೇರವಾಗಿ ಫೋನ್‌ಪೇ ಮೊಬೈಲ್ ಆ್ಯಪ್‌ನಲ್ಲಿ ಕೋ-ಬ್ರ್ಯಾಂಡೆಡ್ ಕ್ರೆಡಿಟ್ ಕಾರ್ಡ್‌ಗೆ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸುವ ಪ್ರಕ್ರಿಯೆಯು ಸಂಪೂರ್ಣವಾಗಿ ಡಿಜಿಟಲ್ ಆಗಿದೆ. HDFC ಬ್ಯಾಂಕ್ ಕಾರ್ಡ್ ನೀಡಿದ ನಂತರ, ಬಳಕೆದಾರರು ಕಾರ್ಡ್ ಅನ್ನು ಫೋನ್‌ಪೇನಲ್ಲಿ ಲಿಂಕ್ ಮಾಡಬಹುದು ಮತ್ತು UPI ಮೂಲಕ ವ್ಯಾಪಾರಿಗಳಿಗೆ ಪಾವತಿಗಳನ್ನು ಮಾಡಬಹುದು. ಬಳಕೆದಾರರು ಫೋನ್‌ಪೇ ಆ್ಯಪ್ ಮೂಲಕ ತಮ್ಮ ಕಾರ್ಡ್ ಅನ್ನು ನಿರ್ವಹಿಸಬಹುದು ಮತ್ತು ತಮ್ಮ ಮಾಸಿಕ ಕ್ರೆಡಿಟ್ ಕಾರ್ಡ್ ಬಿಲ್ ಅನ್ನು ಪಾವತಿಸಬಹುದು.
ಈ ಕಾರ್ಡ್ ಅನ್ನು ಫೋನ್‌ಪೇನ ಅರ್ಹ ಬಳಕೆದಾರರಿಗೆ ಹಂತ ಹಂತವಾಗಿ ವಿತರಿಸಲಾಗುವುದು.
ಫೋನ್‌ಪೇ ಸಮೂಹದ ಬಗ್ಗೆ
PhonePe ಲಿಮಿಟೆಡ್ (ಈ ಹಿಂದೆ PhonePe ಪ್ರೈವೇಟ್ ಲಿಮಿಟೆಡ್) ಭಾರತದ ಪ್ರಮುಖ ಫಿನ್‌ಟೆಕ್ ಕಂಪನಿಯಾಗಿದೆ. ಇದು ಭಾರತದಲ್ಲಿ ತನ್ನ ಪ್ರಧಾನ ಕಚೇರಿಯನ್ನು ಹೊಂದಿದ್ದು, ಇದರ ಪ್ರಮುಖ ಉತ್ಪನ್ನವಾದ ಫೋನ್‌ಪೇ ಡಿಜಿಟಲ್ ಪಾವತಿ ಆ್ಯಪ್ ಅನ್ನು 2016ರ ಆಗಸ್ಟ್‌ನಲ್ಲಿ ಪ್ರಾರಂಭಿಸಲಾಯಿತು. ಏಪ್ರಿಲ್ 2025 ರಂತೆ ಫೋನ್‌ಪೇ 61ಕೋಟಿಗೂ (610 ಮಿಲಿಯನ್) ಹೆಚ್ಚು ನೋಂದಾಯಿತ ಬಳಕೆದಾರರನ್ನು ಮತ್ತು 4 ಕೋಟಿಗೂ ಹೆಚ್ಚು (40+ ಮಿಲಿಯನ್) ವ್ಯಾಪಾರಿಗಳ ಡಿಜಿಟಲ್ ಪಾವತಿ ಸ್ವೀಕಾರಾರ್ಹ ಜಾಲವನ್ನು ಹೊಂದಿದೆ. ವಾರ್ಷಿಕ ಒಟ್ಟು ಪಾವತಿ ಮೌಲ್ಯ (TPV) ₹150 ಲಕ್ಷ ಕೋಟಿಯೊಂದಿಗೆ 34 ಕೋಟಿ (340+ ಮಿಲಿಯನ್) ದೈನಂದಿನ ವಹಿವಾಟುಗಳನ್ನು ಫೋನ್‌ಪೇ ಪ್ರಕ್ರಿಯೆಗೊಳಿಸುತ್ತದೆ.
ಫೋನ್‌ಪೇ ವ್ಯವಹಾರಗಳ ಪೋರ್ಟ್‌ಫೋಲಿಯೊವು ಭಾರತದಲ್ಲಿ ಹಣಕಾಸು ಉತ್ಪನ್ನಗಳ ವಿತರಣೆ (ವಿಮೆ, ಸಾಲ ನೀಡಿಕೆ, ಸಂಪತ್ತು) ಮತ್ತು ಹೊಸ ಗ್ರಾಹಕ ತಂತ್ರಜ್ಞಾನ ವ್ಯವಹಾರಗಳನ್ನು (ಪಿನ್‌ಕೋಡ್ – ಹೈಪರ್‌ಲೋಕಲ್ ಇ-ಕಾಮರ್ಸ್ ಮತ್ತು ಇಂಡಸ್ ಆ್ಯಪ್ ಸ್ಟೋರ್ – ಭಾರತದ ಮೊದಲ ಸ್ಥಳೀಯ ಆ್ಯಪ್ ಸ್ಟೋರ್) ಒಳಗೊಂಡಿದೆ. ಇದು ಎಲ್ಲರಿಗೂ ಸಮಾನ ಅವಕಾಶವನ್ನು ಒದಗಿಸುವ ಕಂಪನಿಯ ದೃಷ್ಟಿಗೆ ಅನುಗುಣವಾಗಿ ಪ್ರತಿಯೊಬ್ಬ ಭಾರತೀಯರಿಗೂ ಹಣದ ಹರಿವು ಮತ್ತು ಸೇವೆಗಳಿಗೆ ಆ್ಯಕ್ಸೆಸ್ ಅನ್ನು ಅನ್‌ಲಾಕ್ ಮಾಡುವ ಮೂಲಕ ಅವರ ಪ್ರಗತಿಗೆ ವೇಗ ನೀಡುತ್ತದೆ.