ಜನರೇಟರ್ ಸಾಗಿಸುತ್ತಿದ್ದ ಪಿಕ್‌ಅಪ್ ಪಲ್ಟಿ

0
41

ಮೂಡುಬಿದಿರೆ : ಕೊಡ್ಯಡ್ಕ ಮಿತ್ತಬೈಲ್ ಬಳಿ ಜನರೇಟರ್ ಸಾಗಿಸುತ್ತಿದ್ದ ಪಿಕ್‌ಅಪ್ ವಾಹನ ಚಾಲಕನ ನಿಯಂತ್ರಣ ತಪ್ಪಿ ಮಾರ್ಗಮಧ್ಯದಲ್ಲೇ ಪಲ್ಟಿಯಾದ ಪರಿಣಾಮ ಟ್ರಾಫಿಕ್ ಜಾಮ್ ಉಂಟಾಯಿತು.

ಪಾಲಡ್ಕ ಕಡೆಯಿಂದ ಮೂಡುಬಿದಿರೆ ಕಡೆಗೆ ಬರುತ್ತಿದ್ದ ಪಿಕ್‌ಅಪ್ ವಾಹನವು ಕೊಡ್ಯಡ್ಕ ಮಿತ್ತಬೈಲ್ ಬಳಿ ಚಾಲಕನ ನಿಯಂತ್ರಣ ತಪ್ಪಿ ಮಾರ್ಗಮಧ್ಯದಲ್ಲೇ ಪಲ್ಟಿಯಾಗಿ ಬಿದ್ದಿದೆ. ವಾಹನದಲ್ಲಿ ಜನರೇಟರ್ ಸಾಗಿಸಲಾಗುತ್ತಿತ್ತು.

ವಾಹನ ಮಾರ್ಗಮಧ್ಯದಲ್ಲೇ ಪಲ್ಟಿಯಾಗಿ ಬಿದ್ದಿದ್ದರಿಂದ ಕೆಲಕಾಲ ಸಂಚಾರಕ್ಕೆ ಅಡಚಣೆ ಉಂಟಾಗಿ ಟ್ರಾಫಿಕ್ ಜಾಮ್ ಸಂಭವಿಸಿತು. ಸ್ಥಳಕ್ಕೆ ಪೊಲೀಸರು ಸೇರಿದಂತೆ ಸಂಬಂಧಪಟ್ಟವರು ಸೇರಿ ಪಲ್ಟಿಯಾಗಿದ್ದ ವಾಹನವನ್ನು ತೆರವುಗೊಳಿಸಿದರು. ಬಳಿಕ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು