ಬಂಟ್ವಾಳ: ಇಲ್ಲಿನ ವಗ್ಗ ರಾಷ್ಟ್ರೀಯ ಹೆದ್ದಾರಿ ಸಮೀಪದ ಕಾಡಬೆಟ್ಟು ಗ್ರಾಮ ಪಿಲಿಂಗಾಲು ಶ್ರೀ ಗಾಯತ್ರಿದೇವಿ ದೇವಸ್ಥಾನದಲ್ಲಿ ಲಕ್ಷ್ಮೀ ಸಹಿತ ದಶಭುಜ ಮಹಾಗಣಪತಿ ದೇವರಿಗೆ ಚೌತಿ ಉತ್ಸವ ಕಾರ್ಯಕ್ರಮ ಇದೇ 27ರಂದು ಬೆಳಿಗ್ಗೆ ಗಂಟೆ 8.30ಕ್ಕೆ ನಡೆಯಲಿದೆ. 9 ಗಂಟೆಗೆ ಗಣಯಾಗ, ಮಧ್ಯಾಹ್ನ 12 ಗಂಟೆಗೆ ಮಹಾಪೂಜೆ, 1 ಗಂಟೆಗೆ ಪ್ರಸಾದ ವಿತರಣೆ ಮತ್ತು ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ. ಇದೇ ವೇಳೆ ಹಿರಿಯ ಸ್ಯಾಕ್ಸೋಫೋನ್ ವಾದಕ ಕೆ.ವಾಸು ಸಪಲ್ಯ ವಗ್ಗ ಇವರಿಂದ ದೇವರ ವಿಗ್ರಹಕ್ಕೆ ಪ್ರಭಾವಳಿ ಸಮರ್ಪಣೆ ಸೇವೆ ನಡೆಯಲಿದೆ ಎಂದು ದೇವಳದ ಆಡಳಿತ ಧರ್ಮದರ್ಶಿ ಕೆ.ಎಸ್. ಪಂಡಿತ್ ತಿಳಿಸಿದ್ದಾರೆ.
