ಪಿಲಿಂಗಾಲು : ಮಾ.30ರಿಂದ ಪ್ರತಿಷ್ಠಾ ವರ್ಧಂತಿ ಉತ್ಸವ ಹಾಗೂ 52ನೇ ಭಜನಾ ಮಂಗಲೋತ್ಸವ

0
12

ಬಂಟ್ವಾಳ : ಇಲ್ಲಿನ ವಗ್ಗ ಸಮೀಪದ ಕಾಡಬೆಟ್ಟು ಗ್ರಾಮ ಪಿಲಿಂಗಾಲು ಶ್ರೀ ಗಾಯತ್ರೀ ದೇವಿ ದೇವಸ್ಥಾನದಲ್ಲಿ 20ನೇ ವರ್ಷದ ಪ್ರತಿಷ್ಠಾ ವರ್ಧಂತಿ ಉತ್ಸವ ಮತ್ತು 52ನೇ ವರ್ಷದ ಭಜನಾ ಮಂಗಲೋತ್ಸವ ಕಾರ್ಯಕ್ರಮ ಮಾ.30ರಿಂದ 31ರತನಕ ನೆರವೇರಲಿದೆ.

ಮಾ.30ರಂದು ಬೆಳಿಗ್ಗೆ ಗಂಟೆ 7.30ರಿಂದ ಗಣಯಾಗ, ನವಕ ಪ್ರಧಾನ ಹೋಮ, ಮಹಾಗಣಪತಿ ಸಹಿತ ಗುರು ರಾಘವೇಂದ್ರ ಸ್ವಾಮಿ ಮತ್ತು ಗಾಯತ್ರೀ ದೇವಿ ವಿಗ್ರಹಕ್ಕೆ ಕಲಶಾಭಿಷೇಕ,11 ಗಂಟೆಗೆ ಆಶ್ಲೇಷಾ ಬಲಿ, ನಾಗತಂಬಿಲ, ಕಾಲರಕ್ತೇಶ್ವರಿಗೆ ಪರ್ವ, ಮಧ್ಯಾಹ್ನ 1ಗಂಟೆಗೆ ಮಹಾಪೂಜೆ ಮತ್ತು ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ.

ಮಾ.31ರಂದು ಬೆಳಿಗ್ಗೆ 8 ಗಂಟೆಗೆ ಗಣಯಾಗ, ಗಾಯತ್ರೀ ಯಾಗ, 10.30ರಿಂದ ರಕ್ತೇಶ್ವರಿ, ಮಹಿಷಂದಾಯ, ಅಣ್ಣಪ್ಪ ಪಂಜುರ್ಲಿ ದೈವಕ್ಕೆ ಪರ್ವ, ಸಾಮೂಹಿಕ ಸತ್ಯನಾರಾಯಣ ಪೂಜೆ, ಮಧ್ಯಾಹ್ನ 1 ಗಂಟೆಗೆ ಮಹಾಪೂಜೆ ಮತ್ತು ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ.

ಸಂಜೆ 6 ಗಂಟೆಗೆ ಭಜನೆ, 6.30ರಿಂದ ಕಟೀಲು ಮೇಳದಿಂದ ‘ಶ್ರೀದೇವಿ ಮಹಾತ್ಮೆ’ ಯಕ್ಷಗಾನ ಬಯಲಾಟ ಮತ್ತು ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ ಎಂದು ದೇವಳದ ಆಡಳಿತ ಧರ್ಮದರ್ಶಿ ಕೆ.ಎಸ್.ಪಂಡಿತ್ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here