ಪಿಲಿಪಂಜ” ತುಳು ಸಿನಿಮಾ ಬಿಡುಗಡೆ

0
1

ಮಂಗಳೂರು; ಯಸ್ ಬಿ ಗ್ರೂಪ್ಸ್ ಅರ್ಪಿಸುವ ಶಿಯಾನ ಪ್ರೊಡಕ್ಷನ್ ಹೌಸ್ ಬ್ಯಾನರ್ನಡಿ ತಯಾರಾದ, ಪ್ರತೀಕ್ ಯು ಪೂಜಾರಿ ಕಾವೂರು ನಿರ್ಮಾಣದ, ಭರತ್ ಶೆಟ್ಟಿಯವರ ಕಥೆ, ಪರಿಕಲ್ಪನೆ ನಿರ್ದೇಶನದ, ವಿಭಿನ್ನ ತಂತ್ರಜ್ಞಾನದ ಬಹುತಾರಾಗಣದ “ಪಿಲಿಪಂಜ” ತುಳು ಸಿನಿಮಾ ಭಾರತ್ ಮಾಲ್ ನ ಬಿಗ್ ಸಿನಿಮಾಸ್ ನಲ್ಲಿ ಬಿಡುಗಡೆಗೊಂಡಿತು.

ಕಾರ್ಯಕ್ರಮವನ್ನು ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ದೀಪ ಬೆಳಗಿಸಿ ಉದ್ಘಾಟಿಸಿದರು. ತುಳು ಭಾಷೆಯ ಬೆಳವಣಿಗೆಯಲ್ಲಿ ತುಳು ನಾಟಕ, ತುಳು ಸಿನಿಮಾಗಳ ಪಾತ್ರ ಪ್ರಮುಖವಾದುದು. ನಾಟಕ, ಸಿನಿಮಾಗಳಿಂದ ಇಂದು ತುಳು ಭಾಷೆ ಎಲ್ಲೆಡೆ ಪಸರಿಸಿದೆ. ತುಳು ಬಾ಼ಷಯಲ್ಲಿ ಬರುವ ಎಲ್ಲಾ ಸಿನಿಮಾಗಳನ್ನು ಪ್ರೇಕ್ಷಕರು ನೋಡಿ ಪ್ರೋತ್ಸಾಹಿಸ ಬೇಕೆಂದರು.
ಮುಖ್ಯ ಅತಿಥಿಯಾಗಿದ್ದ ಕಾಂಗ್ರೆಸ್ ಮುಂದಾಳು ಆರ್ ಪದ್ಮರಾಜ್ ಪೂಜಾರಿ ಮಾತನಾಡಿ ತುಳು ಭಾಷಾ ಸಿನಿಮಾಗಳಿಂದ ಸಮಾಜಕ್ಕೆ ಉತ್ತಮ ಸಂದೇಶವೂ ಲಭಿಸುತ್ತದೆ. ಈ ನಿಟ್ಟಿನಲ್ಲಿ ತುಳು ಚಿತ್ರರಂಗದಲ್ಲಿ ಉತ್ತಮ‌ ಸಿನಿಮಾಗಳು ಮೂಡಿ ಬರಲಿ ಎಂದರು.‌
ಸಮಾರಂಭದಲ್ಲಿ ವಿಜಯಕುಮಾರ್ ಕೊಡಿಯಾಲ್ ಬೈಲ್, ಪ್ರಕಾಶ್ ಪಾಂಡೇಶ್ವರ್, ತುಳು ಚಲನ ಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷ ಆರ್ ಧನರಾಜ್, ಕದ್ರಿ ನವನೀತ ಶೆಟ್ಟಿ, ಶಶಿಧರ ಹೆಗ್ಡೆ, ಮಾಜಿ ಕಾರ್ಪೋರೇಟರ್ ಕಿರಣ್ ಕುಮಾರ್, ಅನಿಲ್ ಕುಮಾರ್, ಕೆ ಕೆ ಪೇಜಾವರ, ಭಾಸ್ಕರ ರೈ ಕುಕ್ಕುವಳ್ಳಿ, ಭೋಜರಾಜ ವಾಮಂಜೂರು, ಲಂಚುಲಾಲ್, ಯೋಗೀಶ್ ಶೆಟ್ಟಿ ಜಪ್ಪು, ನಿರ್ಮಾಪಕ ಪ್ರತೀಕ್ ಪೂಜಾರಿ, ನಿರ್ದೇಶಕ ಭರತ್ ಶೆಟ್ಟಿ, ರಮೇಶ್ ರೈ ಕುಕ್ಕುವಳ್ಳಿ, ಸದಾಶಿವ ಅಮೀನ್ ಮದಲಾದವರು ಉಪಸ್ಥಿತರಿದ್ದರು.
ಪಿಲಿಪಂಜ ಸಿನಿಮಾ ಮಂಗಳೂರಿನಲ್ಲಿ ಪಿವಿಆರ್, ಸಿನಿಪೊಲಿಸ್, ಭಾರತ್ ಸಿನಿಮಾಸ್, ಸುರತ್ಕಲ್ ನಲ್ಲಿ ಸಿನಿಗ್ಯಾಲಕ್ಸಿ, ಪಡುಬಿದ್ರೆಯಲ್ಲಿ ಭಾರತ್ ಸಿನಿಮಾಸ್, ಉಡುಪಿಯಲ್ಲಿ ಕಲ್ಪನಾ, ಭಾರತ್ ಸಿನಿಮಾಸ್, ಮಣಿಪಾಲದಲ್ಲಿ ಭಾರತ್ ಸಿನಿಮಾಸ್, ಕಾರ್ಕಳದಲ್ಲಿ ರಾಧಿಕಾ, ಬೆಳ್ತಂಗಡಿಯಲ್ಲಿ ಭಾರತ್ , ಪುತ್ತೂರಿನಲ್ಲಿ ಭಾರತ್ ಸಿನಿಮಾಸ್, ಮುಡಿಪುವಿನಲ್ಲಿ ಭಾರತ್ ಸಿನಿಮಾಸ್ ನಲ್ಲಿ ಸಿನಿಮಾ ತೆರೆಕಂಡಿದೆ.
ಪಿಲಿಪಂಜ ಸಿನಿಮಾದಲ್ಲಿ ರಮೇಶ್ ರೈ ಕುಕ್ಕುವಳ್ಳಿ, ಭೋಜರಾಜ್ ವಾಮಂಜೂರು, ಸುಂದರ್ ರೈ ಮಂದಾರ, ಶಿವಪ್ರಕಾಶ್ ಪೂಂಜ, ರವಿ ರಾಮಕುಂಜ, ರೂಪಶ್ರೀ ವರ್ಕಾಡಿ, ರಂಜನ್ ಬೋಳೂರು, ರಾಜ್ ಪ್ರಕಾಶ್ ಶೆಟ್ಡಿ, ಪ್ರತೀಕ್ ಯು ಪೂಜಾರಿ, ಪ್ರವೀಣ್ ಕೊಡಕ್ಕಲ್, ಜಯಶೀಲ, ಭಾಸ್ಕರ್ ಮಣಿಪಾಲ ಮುಂತಾದವರು ಆಭಿನಯಿಸಿದ್ದಾರೆ.

LEAVE A REPLY

Please enter your comment!
Please enter your name here