ಜರ್ನಿ ಥಿಯೇಟರ್ ಗ್ರೂಪ್‌ನಿಂದ ‘ನಾಟಕದ ಓದು’ ಕಾರ್ಯಕ್ರಮ ಯಶಸ್ವಿ

0
11

ಮಂಗಳೂರಿನ ಜರ್ನಿ ಥೇಟರ್ ಗ್ರೂಪ್ ಸಂಸ್ಥೆಯು ಸಂತ ಅಲೋಶಿಯಸ್ (ಪರಿಗಣಿತ) ವಿಶ್ವವಿದ್ಯಾನಿಲಯದ ಸಹಯೋಗದೊಂದಿಗೆ ಜುಲೈ 12, 2026 ಭಾನುವಾರದದಂದು ಎಲ್.ಸಿ.ಆರ್.ಐ. ಸಭಾಂಗಣದಲ್ಲಿ “ನಾಟಕದ ಓದು” ಕಾರ್ಯಕ್ರಮವನ್ನು ಆಯೋಜಿಸಿತ್ತು.

ರಂಗಾಯಣದ ಎಸ್. ರಾಮನಾಥ್ ಅವರ “ಅಶ್ವಪರ್ವ” ನಾಟಕವನ್ನು ಈ ಸಂದರ್ಭದಲ್ಲಿ ಓದಲಾಯಿತು. ಈ ಇದು ಪರಿಣಾಮಕಾರಿಯಾಗಿ ನಾಟಕವನ್ನು ಹೇಗೆ ಓದಬಹುದು ಎಂಬ ಹಿನ್ನೆಲೆಯಲ್ಲಿ ಮಾಡಿದ ಪ್ರಯೋಗವಾಗಿತ್ತು. ಪಾತ್ರ ಮತ್ತು ಸನ್ನಿವೇಶಗಳಿಗೆ ಅನುಗುಣವಾಗಿ ಹಿನ್ನೆಲೆಯಲ್ಲಿ ಪೂರಕ ಸಂಗೀತ ಮತ್ತು ಹಾಡುಗಳನ್ನು ಬಳಸಲಾಗಿತ್ತು.

ಹಿರಿಯ ನಟ ಡಾ. ಆರ್. ನರಸಿಂಹ ಮೂರ್ತಿ (ಅಶ್ವತ್ಥಾಮ), ರೋಹನ್ ಉಚ್ಚಿಲ್ (ನಾರಣಪ್ಪ), ಕಿರಣ್ ಕುಮಾರ್ (ಕುಂಭ), ಸುನಿಲ್ ಪಲ್ಲಮಜಲು(ಕಾಲ), ಶರಣ್ಯ ಎನ್. ಟಿ. (ಪಾರಿವಾಳ), ಶಶಾಂಕ್ ಐತಾಳ್(ದೀಪ) ನಾಟಕದ ಪಾತ್ರಗಳನ್ನು ಓದಿದರು. ಮೇಘನಾ ಕುಂದಾಪುರ ಮತ್ತು ಶಮಿತಾ ಆಚಾರ್ಯ ಹಿನ್ನೆಲೆ ಗಾಯನ ಮತ್ತು ಸಂಗೀತವನ್ನು ನಿರ್ವಹಿಸಿದರು. ಸುಧೀಶ್ ಕೂಡ್ಲು ಮತ್ತು ಶ್ರೀಶ ಕುಮಾರ್ ಬೆಳಕು, ರಾಜೇಶ್ ಧ್ವನಿ ನಿರ್ವಹಣೆ, ಕಾವ್ಯ ಹೆಬ್ರಿ ದಾಖಲೀಕರಣದಲ್ಲಿ ಸಹಕರಿಸಿದರು. ಬಳಿಕ ನಾಟಕ ಮತ್ತು ಪ್ರಯೋಗದ ಕುರಿತು ಸಂವಾದ ಕಾರ್ಯಕ್ರಮ ನಡೆಯಿತು. ಭಾಗವಹಿಸಿದ್ದ ಹಿರಿ-ಕಿರಿಯ ಪ್ರೇಕ್ಷಕರು ಈ ಪ್ರಯೋಗಕ್ಕೆ ಸ್ಪಂದಿಸಿ ಅಭಿಪ್ರಾಯ ವ್ಯಕ್ತಪಡಿಸಿದರು. ಓದಿನ ಪ್ರಯೋಗಗಳು ನಡೆದರೂ ಓದಿನಲ್ಲಿಯೂ ಇದೊಂದು ಭಿನ್ನ ಪ್ರಯೋಗ ಎಂಬ ಅಭಿಪ್ರಾಯ ವ್ಯಕ್ತವಾಯಿತು.