ಪೊಲೀಸರ ಕಣ್ತಪ್ಪಿಸಿ ಪೋಕ್ಸೊ ಆರೋಪಿ ಪರಾರಿ ; ಕೈಕೋಳ ಬಿಚ್ಚಿ ಮರ ಹತ್ತಿ ಸಿನಿಮೀಯ ಎಸ್ಕೇಪ್!

0
33

ಕಲಬುರಗಿ : ಕಲಬುರಗಿ ಜಿಲ್ಲೆಯ ಅಫ್ಜಲಪುರ ಪೊಲೀಸ್ ಠಾಣೆಯಲ್ಲಿ ಪೋಕ್ಸೊ ಪ್ರಕರಣದ ಆರೋಪಿಯೊಬ್ಬ ಪೊಲೀಸರ ಕಣ್ತಪ್ಪಿಸಿ ಸಿನಿಮೀಯ ರೀತಿಯಲ್ಲಿ ಪರಾರಿಯಾಗಿರುವ ಘಟನೆ ಬೆಳಕಿಗೆ ಬಂದಿದೆ. ಕೈಕೋಳವನ್ನು ಬಿಚ್ಚಿಕೊಂಡು ಠಾಣೆಯ ಎರಡನೇ ಮಹಡಿಯಿಂದ ಮರದ ಕೊಂಬೆ ಹಿಡಿದು ಜಿಗಿದು ಆರೋಪಿ ತಪ್ಪಿಸಿಕೊಂಡಿದ್ದು, ಈ ದೃಶ್ಯ ಠಾಣೆಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

17 ವರ್ಷದ ಬಾಲಕಿಯನ್ನು ಅಪಹರಿಸಿದ ಆರೋಪದಡಿ 24 ವರ್ಷದ ಯುವಕನನ್ನು ಅಫ್ಜಲಪುರ ಪೊಲೀಸರು ಮಹಾರಾಷ್ಟ್ರದ ಪುಣೆಯಲ್ಲಿ ಬಂಧಿಸಿ ಬುಧವಾರ ತಡರಾತ್ರಿ ಠಾಣೆಗೆ ಕರೆತಂದಿದ್ದರು. ನ್ಯಾಯಾಲಯಕ್ಕೆ ಹಾಜರುಪಡಿಸುವ ಸಿದ್ಧತೆ ನಡೆಯುತ್ತಿದ್ದ ವೇಳೆ, ಮುಂಜಾನೆ ಠಾಣೆಯ ಸಿಬ್ಬಂದಿ ನಿದ್ರೆಯಲ್ಲಿದ್ದ ಸಮಯವನ್ನು ಬಳಸಿಕೊಂಡ ಆರೋಪಿ ತನ್ನ ಕೈಕೋಳವನ್ನು ಬಿಚ್ಚಿಕೊಂಡು ಎರಡನೇ ಮಹಡಿಯ ಅಂಚಿಗೆ ತೆರಳಿ, ಪಕ್ಕದಲ್ಲಿದ್ದ ಬೇವು ಮರದ ಕೊಂಬೆಯನ್ನು ಹಿಡಿದು ಕೆಳಗೆ ಜಿಗಿದು ಕತ್ತಲಲ್ಲಿ ಪರಾರಿಯಾಗಿದ್ದಾನೆ.

ಘಟನೆಯು ಪೊಲೀಸ್ ಠಾಣೆಯಲ್ಲೇ ನಡೆದಿರುವುದು ಇಲಾಖೆಗೆ ತೀವ್ರ ಮುಜುಗರ ಉಂಟುಮಾಡಿದ್ದು, ಕರ್ತವ್ಯ ನಿರತ ಸಿಬ್ಬಂದಿಯ ನಿರ್ಲಕ್ಷ್ಯವೇ ಪರಾರಿಗೆ ಕಾರಣ ಎಂಬ ಆರೋಪ ಕೇಳಿಬಂದಿದೆ. ಗೃಹ ಸಚಿವರ ತವರೂರಿನಲ್ಲೇ ಇಂತಹ ಭದ್ರತಾ ಲೋಪ ನಡೆದಿರುವುದು ಚರ್ಚೆಗೆ ಗ್ರಾಸವಾಗಿದೆ.

ಘಟನೆ ಕುರಿತು ಪ್ರತಿಕ್ರಿಯಿಸಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ಅಡ್ಡೂರು ಶ್ರೀನಿವಾಸುಲು, ಕರ್ತವ್ಯ ಲೋಪ ಎಸಗಿದ ಸಿಬ್ಬಂದಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ಇದೀಗ ಡಿವೈಎಸ್‌ಪಿ ತಮ್ಮರಾಯ ಪಾಟೀಲ್, ಸಿಪಿಐ ಲಕ್ಷ್ಮಣ್ ಮಸಗುಪ್ಪಿ ಹಾಗೂ ಪಿಎಸ್‌ಐ ಸೋಮಲಿಂಗಪ್ಪ ಒಡೆಯರ್ ನೇತೃತ್ವದಲ್ಲಿ ವಿಶೇಷ ತಂಡಗಳನ್ನು ರಚಿಸಿ, ಕಲಬುರಗಿ ಜಿಲ್ಲೆ ಸೇರಿದಂತೆ ನೆರೆಯ ಮಹಾರಾಷ್ಟ್ರ ಗಡಿ ಭಾಗಗಳಲ್ಲಿ ಆರೋಪಿಗಾಗಿ ತೀವ್ರ ಶೋಧ ಕಾರ್ಯ ನಡೆಸಲಾಗುತ್ತಿದೆ. ಆದರೆ ಗುರುವಾರ ರಾತ್ರಿ ವೇಳೆಯೂ ಆರೋಪಿಯ ಯಾವುದೇ ಸುಳಿವು ಲಭ್ಯವಾಗಿಲ್ಲ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

LEAVE A REPLY

Please enter your comment!
Please enter your name here