’90 ವರ್ಷಗಳ ಯಜಮಾನಿಕೆ, ಕಲ್ಲಾಡಿ ಮನೆತನಕ್ಕೆ ಪ್ರಶಸ್ತಿ ಗೌರವ’
ಬಂಟ್ವಾಳ : ಇಲ್ಲಿನ ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನ ಬಳಿ ಕಳೆದ 30 ವರ್ಷಗಳ ಹಿಂದೆ ಆರಂಭಗೊಂಡ ‘ಪೊಳಲಿ ಯಕ್ಷೊತ್ಸವ’ ಕಾರ್ಯಕ್ರಮ ಅ.11 ರಂದು ಬೆಳಿಗ್ಗೆ ಗಂಟೆ 8.30ರಿಂದ ರಾತ್ರಿ ಗಂಟೆ 10.30ರತನಕ ನಡೆಯಲಿದೆ ಎಂದು ಸಮಿತಿ ಸಂಚಾಲಕ ವೆಂಕಟೇಶ ನಾವಡ ಹೇಳಿದ್ದಾರೆ.
ಬಿ.ಸಿ.ರೋಡಿನಲ್ಲಿ ಸೋಮವಾರ ಸಂಜೆ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ‘ಪೊಳಲಿ ರಾಜಾಂಗಣದಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ
‘ಯಕ್ಷೊತ್ಸವ ಪ್ರಶಸ್ತಿ’ಗೆ ಈ ಬಾರಿ ಸುಮಾರು 90 ವರ್ಷಗಳಿಂದ ಯಕ್ಷಗಾನ ಮೇಳದ ಯಜಮಾನಿಕೆ ವಹಿಸಿದ ಹಿನ್ನೆಲೆ ಹೊಂದಿರುವ ಕಲ್ಲಾಡಿ ಮನೆತನದ ಕಟೀಲು 7 ಮೇಳಗಳ ಸಂಚಾಲಕ ಕಲ್ಲಾಡಿ ದೇವಿಪ್ರಸಾದ್ ಶೆಟ್ಟಿ ಇವರನ್ನು ಆಯ್ಕೆಗೊಳಿಸಲಾಗಿದೆ’ ಎಂದರು. ಭಾಗವತ ದಿವಂಗತ ದಿನೇಶ್ ಅಮ್ಮಣ್ಣಾಯ ಸ್ಮೃತಿ ಗೌರವ ಪ್ರಶಸ್ತಿ ನೀಡಲಾಗುತ್ತಿದ್ದು, ಇದಕ್ಕೆ ಹಿರಿಯ ಹಿಮ್ಮೇಳ ಗುರು ಹರಿನಾರಾಯಣ ಬೈಪಡಿತ್ತಾಯ ಇವರನ್ನು ಆಯ್ಕೆಗೊಳಿಸಲಾಗಿದೆ. ಇದೇ ವೇಳೆ 15 ಮಂದಿ ಹಿರಿಯ ಕಲಾವಿದರಿಗೆ ಗೌರವ ನಿಧಿಯೊಂದಿಗೆ ಸನ್ಮಾನ, ಸಂಘಟನೆ ಮತ್ತು ಯಕ್ಷಗಾನಕ್ಕೆ ದುಡಿಯುವ ಮಹನೀಯರುಗಳಿಗೆ ಗೌರವ ಮತ್ತು ಕೀರ್ತಿಶೇಷ ಐವರು ಹಿರಿಯ ಕಲಾವಿದರ ಸಂಸ್ಮರಣೆ ನಡೆಯಲಿದೆ ಎಂದು ಅವರು ವಿವರಿಸಿದರು.
ಸಂಯೋಜಕ ಜನಾರ್ದನ ಅಮ್ಮುಂಜೆ ಮಾತನಾಡಿ, ‘ಅಂದು ಬೆಳಿಗ್ಗೆ ಗಂಟೆ 9ರಿಂದ ಮಧ್ಯಾಹ್ನ 3ರತನಕ ‘ರಾಜಾ ಯಯಾತಿ’, ಮಧ್ಯಾಹ್ನ ಗಂಟೆ 3ರಿಂದ ಸಂಜೆ ಗಂಟೆ 5.30ತನಕ ‘ಇಂದ್ರಕೀಲಕ, ರಾತ್ರಿ ಗಂಟೆ 7ರಿಂದ 10.30ರ ತನಕ ‘ರಾಮಾಂಜನೇಯ’ ಯಕ್ಷಗಾನ ಪ್ರದರ್ಶನಗೊಳ್ಳಲಿದ್ದು, ಜಿಲ್ಲೆಯ ಆಯ್ದ ಪ್ರಸಿದ್ಧ ಕಲಾವಿದರು ಭಾಗವಹಿಸುವರು ಎಂದರು.
ಪ್ರಶಸ್ತಿ ಪ್ರದಾನ:
ಸಂಜೆ ಗಂಟೆ 5.30ರಿಂದ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರಧಾನ, ಗೌರವಾರ್ಪಣೆ, ಸನ್ಮಾನ, ಸಂಸ್ಮರಣೆ ಕಾರ್ಯಕ್ರಮ ನಡೆಯಲಿದ್ದು. ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಕಾರ್ಯಕ್ರಮಡಾ ಅಧ್ಯಕತೆ,
ದೀವಾಳದ ಪ್ರಧಾನ ಮಾಧವ ಭಟ್ಡಾ ಪೋಲಲ್ಲಿ ಡಾ . ಮಂಜಯ ಶೆಟ್ಟಿ, ಅಮುಂಜೆ ಗುತ್ತು, ಭುವನೇಶ್ ಪಚ್ಚಿನಡ್ಕ, ಸಿಇಒ ಕೆ. ಪಿ. ಚಂದ್ರಮೋಹನ್, ಅಭಿನಂದನಾ ಭಾಷಣ : ಡಾ. ಎನ್.ಪ್ರಭಾಕರ ಜೋಶಿ, ಪ್ರಭಾಕರ ಸುವರ್ಣ ಕರ್ನಿರೆ , ಉಜಿರೆ ಅಶೋಕ ಭಟ್, ನವನೀತ್ ಶೆಟ್ಟಿ ಕದ್ರಿ, ಹರಿನಾರಾಯಣ ಬೈಪಾಡಿತ್ತಾಯ ಇವರಿಗೆ ಪದ್ಯಾಣ ಗಣಪತಿ ಭಟ್ ಸಂಸ್ಮರಣಾ ಪ್ರಶಸ್ತಿ ಪ್ರದಾನ,
ಸಂಸ್ಮರಣಾ ಭಾಷಣ ರವಿ ಅಲೆವೂರಾಯ ನೆರವೇರಿಸಿದರು. ಭಾಗವತ ದಿವಂಗತ ದಿನೇಶ್ ಅಮ್ಮಣಾಯ ಸಂಸ್ಮರಣೆ ಯನ್ನು ಉಜಿರೆ ಅಶೋಕ್ ಭಟ್ ನೆರವೇರಿಸಿದರು.
ಕೊಡಿಮಜಲು ಅನಂತ ಪದ್ಮನಾಭ, ಅರ್ಚಕ ಅನಂತ ಪದ್ಮನಾಭ ಭಟ್, ಯಕ್ಷಕಲಾ ಗೌರವ ಶಾಂತರಾಮ ಕುಡ್ವ, ಪುಳಿಂಚ ಸೇವಾ ಪ್ರತಿಷ್ಟಾ ನ ಅಧ್ಯಕ್ಷ ಪುಳಿಂಚ ಶ್ರೀಧರ ಶೆಟ್ಟಿ, ರಾಘವೇಂದ್ರ ಪುತ್ತೂರಾಯ ಕೈಕಂಬ, ಪೊಳಲಿ ರಾಮಕೃಷ್ಣ ತಪೋವನದ ವಿವೇಕ ಚೈತನ್ಯಾನಂದ ಸ್ವಾಮೀಜಿ ಮತ್ತಿತರರೂ ಇದ್ದರು.
15 ಮಂದಿ ಕಲಾವಿದರಿಗೆ ಸನ್ಮಾನ, ಎಂದು ಅವರು ತಿಳಿಸಿದರು. ಸಂಚಾಲಕ ಲೋಕೇಶ್ ಭರಣಿ, ಸುಬ್ರಾಯ ಕಾರಂತ, ಮೋಹನ್ ಬಿಲ್ವಪತ್ರೆ ಇದ್ದರು.
