ಮಂಗಳೂರು: ಇಂಚರ ಕಲಾವಿದರು ಕುಡ್ಲ ತಂಡದ ಈ ವರ್ಷದ ಮೂರು ನಾಟಕದ ಶೀರ್ಷಿಕೆಯು ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದಲ್ಲಿ ತಾಯಿಯ ಆಶೀರ್ವಾದ ಪಡೆದು ಪ್ರಧಾನ ಅರ್ಚಕರಾದ ಮಾಧವ ಶಾಸ್ತ್ರಿಗಳ ದಿವ್ಯಹಸ್ತದಲ್ಲಿ ಎಲ್ಲರ ಸಮ್ಮುಖದಲ್ಲಿ ಬಿಡುಗಡೆಗೊಳಿಸಲಾಯಿತು.ಈ
ಸಂದರ್ಭದಲ್ಲಿ ತಂಡದ ಮುಖ್ಯಸ್ಥರಾದ ವಿನಯ್ ಕುಮಾರ್ ಅದ್ಯಪಾಡಿ, ಮನೋಜ್ ಕುಲಾಲ್ ಕೊಡಕ್ಕಲ್,ರಕ್ಷಿತ್ ಅಮಿನ್ ಕೊಲ್ಯ, ಸುಜಿತ್ ಕೋಟೆಕಾರ್,ಹರೀಶ್ ಪಕ್ಕಳ ಕೊಟ್ರಗುತ್ತು, ಮತ್ತು ತಂಡದ ತಾಂತ್ರಿಕ ವರ್ಗದ ಕಿರಣ್ ಕೊಯಿಲ, ಗುರುದರ್ಶನ್ ರೈ ಕೈಕಾರ, ರಕ್ಷಿತ್ ಬೀರಿ, ಹಾಗೂ ಚಲನಚಿತ್ರ/ರಂಗಭೂಮಿ ನಟರಾದ ಜೈ ದೀಪ್ ರೈ ಕೋರಂಗ,ಮಹೇಂದ್ರ ಜೈನ್, ಸಂದೀಪ್ ಶೆಟ್ಟಿ ಆಂಬ್ಲಮೊಗರು, ಹಾಗೂ ತಂಡದ ಕಲಾವಿದರಾದ ಮನೋಜ್ ಭಂಡಾರಿ ಉರ್ವ, ಸುನೀಲ್ ಪೂಜಾರಿ ಕಕ್ಯಪದವು, ಮಿಥುನ್ ಪೊಳಲಿ, ಸಚಿತ್ ಪೂಜಾರಿ ಸುರತ್ಕಲ್, ಸೂರಜ್ ಬೀರಿ, ಹಾಗೂ ತಂಡದ ಪ್ರೋತ್ಸಾಹಕರಾದ ಜಗದೀಶ್ ಕೋಟ್ಯಾನ್ ಕೊಡಕ್ಕಲ್, ತಾರಾನಾಥ್ ಕಲ್ಲಡ್ಕ ಉಪಸ್ತಿತರಿದ್ದರು.