
ಪೆರುವಾಯಿ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಅಧೀಕ್ಷಕರು ಹಾಗೂ ಮಾನ್ಯ ವಿಶೇಷ ಕಾರ್ಯನಿರ್ವಾಹಕ ದಂಡಾಧಿಕಾರಿಗಳ ನ್ಯಾಯಾಲಯದಲ್ಲಿ ಜಾರಿಯಲ್ಲಿದ್ದ ಗಡಿಪಾರು (ಬಾಹ್ಯಪಾರು) ಪ್ರಕ್ರಿಯೆಯನ್ನು ವಿಶ್ವ ಹಿಂದೂ ಪರಿಷತ್ – ಬಜರಂಗದಳದ ಕಾರ್ಯಕರ್ತ ಯತೀಶ್ ಪೆರುವಾಯಿ ಅವರು ಯಾವುದೇ ವಕೀಲರನ್ನು ನೇಮಿಸಿಕೊಳ್ಳದೆ, ಸ್ವತಃ ವಕಾಲತ್ತು ವಹಿಸಿ ಸಮರ್ಥವಾಗಿ ಎದುರಿಸಿ ಜಯಗಳಿಸಿದ್ದಾರೆ.
ಪ್ರಕರಣದ ಪ್ರಮುಖ ಮುಖ್ಯಾಂಶಗಳು:
ವಕೀಲರಿಲ್ಲದೆ ಕಾನೂನು ಸಮರ: ಮಾನ್ಯ ವಿಶೇಷ ಕಾರ್ಯನಿರ್ವಾಹಕ ದಂಡಾಧಿಕಾರಿಗಳ ಅಧೀನದಲ್ಲಿ ತಮಗೆ ತಾವೇ ವಾದ ಮಂಡಿಸಿ, ಲಿಖಿತ ಆಕ್ಷೇಪಣೆಗಳೊಂದಿಗೆ ಸೂಕ್ತ ದಾಖಲೆಗಳನ್ನು ಸಲ್ಲಿಸಿ ಗಡಿಪಾರು ಪ್ರಕ್ರಿಯೆಗೆ ತಡೆ ತಂದ ಜಿಲ್ಲೆಯ ವಿರಳ ಪ್ರಕರಣಗಳಲ್ಲಿ ಇದೊಂದಾಗಿದೆ.
ರಾಜಕೀಯ ಪಿತೂರಿಯ ಆರೋಪ: ಕಳೆದ 22 ವರ್ಷಗಳಿಂದ VHP-ಬಜರಂಗದಳದಲ್ಲಿ ಸಕ್ರಿಯರಾಗಿದ್ದು, ಸಾಮಾಜಿಕ ಹಾಗೂ ಅಕ್ರಮಗಳ ವಿರುದ್ಧ ಧ್ವನಿ ಎತ್ತಿದ್ದಕ್ಕಾಗಿ ರಾಜಕೀಯ ಒತ್ತಡದ ಹಿನ್ನೆಲೆಯಲ್ಲಿ ವಿಟ್ಲ ಪೊಲೀಸ್ ಠಾಣೆಯಲ್ಲಿ ‘ರೌಡಿ ಶೀಟರ್’ ತೆರೆದು, ಗಡಿಪಾರಿಗೆ ಪ್ರಸ್ತಾವನೆ ಸಲ್ಲಿಸಲಾಗಿತ್ತು.
ಹೋರಾಟಗಳ ಹಿನ್ನೆಲೆ:
CAA-NRC ವಿರೋಧಿಗಳ ವಿರುದ್ಧ ದೂರು: ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ವಿರುದ್ಧ ಕೊಲೆ ಬೆದರಿಕೆ ಹಾಕಿದ್ದವರ ವಿರುದ್ಧ ದೂರು ನೀಡಿ ಕಾನೂನು ಕ್ರಮ ಜರುಗಿಸಿದ್ದು.
ಓಂಕಾರ ಧ್ವಜ ಮರುಸ್ಥಾಪನೆ: 2014ರಲ್ಲಿ ಪೆರುವಾಯಿ ಜಂಕ್ಷನ್‌ನಲ್ಲಿ ತೆರವುಗೊಳಿಸಲಾಗಿದ್ದ ಓಂಕಾರ ಧ್ವಜವನ್ನು ಹೋರಾಟದ ಮೂಲಕ ಉಳಿಸಿಕೊಂಡಿದ್ದು.
ಭ್ರಷ್ಟಾಚಾರದ ವಿರುದ್ಧ ಸಮರ: ಪೆರುವಾಯಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಅಕ್ರಮಗಳು ಹಾಗೂ ಅಧ್ಯಕ್ಷೆಯ ಲಂಚ ಪ್ರಕರಣದ ವಿರುದ್ಧ ಧ್ವನಿ ಎತ್ತಿ ಕಾನೂನು ಕ್ರಮಕ್ಕೆ ಕಾರಣರಾಗಿದ್ದು.
ಅಕ್ರಮ ಒತ್ತುವರಿ ತಡೆ: ಸರ್ಕಾರಿ ಭೂಮಿ, ಧಾರ್ಮಿಕ ಕ್ಷೇತ್ರದ ಜಾಗ ಒತ್ತುವರಿ ಹಾಗೂ ಗಡಿಭಾಗದಲ್ಲಿ ನಡೆಯುತ್ತಿದ್ದ ಅಕ್ರಮ ಗೋಸಾಗಾಟದ ವಿರುದ್ಧ ಸಕ್ರಿಯ ಹೋರಾಟ.
ಸತ್ಯಕ್ಕೆ ಸಿಕ್ಕ ಜಯ: ಗಡಿಪಾರು ನೋಟೀಸ್‌ನ ಪ್ರತಿಯೊಂದು ಆರೋಪಕ್ಕೂ ಸೂಕ್ತ ದಾಖಲೆ ಮತ್ತು ಆಧಾರಗಳ ಸಹಿತ ನ್ಯಾಯಾಲಯಕ್ಕೆ ಸುದೀರ್ಘ ಆಕ್ಷೇಪಣೆ ಸಲ್ಲಿಸಲಾಯಿತು. ವಿಚಾರಣೆ ನಡೆಸಿದ ಅಧಿಕಾರಿಗಳು ಎರಡೂ ಪಕ್ಷಗಳ ವಾದ ಆಲಿಸಿ, ನ್ಯಾಯಯುತ ನಿರ್ಧಾರ ಕೈಗೊಂಡು ಗಡಿಪಾರು ಪ್ರಕ್ರಿಯೆಯನ್ನು ತಡೆಹಿಡಿದಿದ್ದಾರೆ.
